ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಮೊನ್ನೆಯಷ್ಟೇ ತಮ್ಮ ಮಗುವಿಗೆ ನಾಮಕರಣ ಮಾಡಿದ್ದಾರೆ. ಮಗು ಹುಟ್ಟಿದ ಕೂಡಲೇ ಯಶ್ ಹಾಗೂ ರಾಧಿಕಾ ಅಭಿಮಾನಿಗಳು ಬಹಳಷ್ಟು ಹೆಸರನ್ನು ಸಜೆಸ್ಟ್ ಮಾಡಿದ್ದರು. ಕೊನೆಗೆ ಮಗುವಿಗೆ 'ಐರಾ ಯಶ್' ಎಂಬ ಹೆಸರನ್ನು ಇಡಲಾಗಿದೆ.
ಇದೀಗ ಅಭಿಮಾನಿಗಳಿಗೆ ಯಶ್ ಮತ್ತೊಂದು ಸಂತೋಷದ ಸುದ್ದಿ ನೀಡಿದ್ದಾರೆ. ತಮ್ಮ ಟ್ವಿಟರ್ನಲ್ಲಿ 'ಮತ್ತೊಂದು ಸಿಹಿ ಸುದ್ದಿ.. ನಿಮ್ಮ ಪ್ರೀತಿ, ಹಾರೈಕೆ ನಮ್ಮ ಕುಟುಂಬದ ಮೇಲಿರಲಿ' ಎಂದು ಪೋಸ್ಟ್ ಮಾಡಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಐರಾಳ ಮುದ್ದಾದ ಪೋಟೋಗಳಿವೆ. ಜೊತೆಗೆ 'ಹಾಯ್, ನಾನು ಐರಾ, ಈಗ ತಾನೆ ನಾನೊಂದು ಸುದ್ದಿ ಕೇಳಿದೆ, ಅದನ್ನು ನಾನು ನಂಬಲಾಗುತ್ತಿಲ್ಲ. ಆದರೆ ಈ ಸುದ್ದಿ ಕೇಳಿ ನಿಮಗೆ ಖಂಡಿತ ಸಂತೋಷವಾಗುತ್ತದೆ. ನನ್ನ ಅಪ್ಪ ಅಮ್ಮ ಎರಡನೇ ಮಗುವಿಗೆ ಸಿದ್ಧರಾಗುತ್ತಿದ್ದಾರೆ. ಅಂದ್ರೆ ನನ್ನ ಆಟಿಕೆಗಳನ್ನು ಹಂಚಿಕೊಳ್ಳಬೇಕು ಎಂದು ಅರ್ಥಾನಾ..? ಪರವಾಗಿಲ್ಲ ಆ ಮಗುವನ್ನು ಸಂತೋಷದಿಂದ ಸ್ವಾಗತಿಸೋಣ' ಎಂದು ಬರೆದಿರುವ ವಿಡಿಯೋವನ್ನು ಯಶ್ ಶೇರ್ ಮಾಡಿದ್ದಾರೆ.
-
YGF chapter 2 ❤❤🍼🍼
— Yash (@TheNameIsYash) June 26, 2019 " class="align-text-top noRightClick twitterSection" data="
ಮತ್ತೊಂದು ಸಿಹಿ ಸುದ್ದಿ
ನಿಮ್ಮ ಪ್ರೀತಿ ಹಾರೈಕೆ ನಮ್ಮ ಕುಟುಂಬದ ಮೇಲಿರಲಿ 🙏 pic.twitter.com/u7qxVOA71R
">YGF chapter 2 ❤❤🍼🍼
— Yash (@TheNameIsYash) June 26, 2019
ಮತ್ತೊಂದು ಸಿಹಿ ಸುದ್ದಿ
ನಿಮ್ಮ ಪ್ರೀತಿ ಹಾರೈಕೆ ನಮ್ಮ ಕುಟುಂಬದ ಮೇಲಿರಲಿ 🙏 pic.twitter.com/u7qxVOA71RYGF chapter 2 ❤❤🍼🍼
— Yash (@TheNameIsYash) June 26, 2019
ಮತ್ತೊಂದು ಸಿಹಿ ಸುದ್ದಿ
ನಿಮ್ಮ ಪ್ರೀತಿ ಹಾರೈಕೆ ನಮ್ಮ ಕುಟುಂಬದ ಮೇಲಿರಲಿ 🙏 pic.twitter.com/u7qxVOA71R
ಈ ವಿಡಿಯೋ ನೋಡಿದರೆ ಖಂಡಿತ ಯಶ್ ಹಾಗೂ ರಾಧಿಕಾ ಎರಡನೇ ಮಗುವಿಗೆ ತಯಾರಾಗಿದ್ದಾರಾ ಎಂಬ ಅನುಮಾನ ಕಾಡುವುದು ಸಹಜ. ಕೆಲವು ಅಭಿಮಾನಿಗಳು ಕಂಗ್ರಾಟ್ಸ್ ಎಂದು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ಇದು ನಿಜಾನಾ.. ನಂಬಲಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಏನೇ ಆಗಲಿ ಅಭಿಮಾನಿಗಳು ಇದು ಏನೆಂದು ತಿಳಿಯಲು ಕೆಲವು ದಿನಗಳು ಕಾಯಲೇಬೇಕು.