ಬಾಲಿವುಡ್ ಬೆಡಗಿ ದಿಶಾ ಪಟಾನಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ದಿನದ ಆಗು - ಹೋಗುಗಳನ್ನು ತಮ್ಮ ಸೋಷಿಯಲ್ ಮಿಡಿಯಾಗಳಲ್ಲಿ ಪೋಸ್ಟ್ ಮಾಡುತ್ತ ಅಭಿಮಾನಿಗಳಿಗೆ ಕುತೂಹಲ ಮೂಡಿಸುತ್ತಾರೆ. ಇದೀಗ ಮಹಿಳಾ ದಿನದ ನಿಮಿತ್ತ ತಮ್ಮ ಅಕ್ಕ ಕುಶುಬು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲಿ ಹಾಕಿ ಹೊಗಳಿದ್ದಾರೆ.

ಹೌದು ದಿಶಾ ಮತ್ತು ಕುಷ್ಬು ನೋಡಲು ಒಂದೇ ರೀತಿ ಇದ್ದಾರೆ. ಆದ್ರೆ ತಮ್ಮ ಕೆರಿಯರ್ ಆಯ್ಕೆ ಮಾಡುವ ವೇಳೆ ದಿಶಾ ಸಿನಿಮಾ ರಂಗ ಆಯ್ಕೆ ಮಾಡಿಕೊಂಡ್ರೆ, ಕುಷ್ಬು ಭಾರತೀಯ ಸೇನೆಯಲ್ಲಿ ಕೆಲಸ ಮಾಡಲು ಇಚ್ಛೆ ಪಟ್ಟು ಸೇನೆಗೆ ಸೇರಿದ್ದಾರೆ. ಇದೀಗ ಸೇನೆಯಲ್ಲಿರುವ ತನ್ನ ಅಕ್ಕನ ಫೋಟೋ ಹಾಕಿ ಕ್ಯಾಪ್ಶನ್ ನೀಡಿರುವ ದಿಶಾ, ವಂಡರ್ ವುಮೆನ್ ಎಂದು ಬರೆದಿದ್ದಾರೆ.

ದಿಶಾ ಪೋಸ್ಟ್ ಮಾಡಿರುವ ಒಂದು ಫೋಟೋದಲ್ಲಿ ಕುಷ್ಬು ಮಿಲಿಟರಿ ಏರ್ಸ್ಟೈಲ್ನಲ್ಲಿ ಶಾರ್ಟ್ ಡ್ರೆಸ್ನಲ್ಲಿ ಕಾಣಿಸಿದ್ದಾರೆ. ಮತ್ತೊಂದರಲ್ಲಿ ತಮ್ಮ ಸೇನಾ ಸಿಬ್ಬಂದಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳಿಗೆ ಕ್ಯಾಪ್ಶನ್ ನೀಡಿರುವ ದಿಶಾ, ನಾನೂ ಅಂದುಕೊಂಡಿದ್ದಕ್ಕೂ ನೀನು ಬೆಳೆದಿರುವುದಕ್ಕೂ ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಐ ಲವ್ ಯೂ ಎಂದಿದ್ದಾರೆ.

ಇನ್ನು ನಟಿ ದಿಶಾ ಪಟಾನಿ ಕೊನೆಯದಾಗಿ ಮಲಾಂಗ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಅವರ ಮುಂದಿನ ಚಿತ್ರ ಸಲ್ಮಾನ್ ಅಭಿನಯದ ರಾಧೆ.