ETV Bharat / sitara

ನಾಳೆ ‘ಆನೆಬಲ’ ಧ್ವನಿಸುರಳಿ ಬಿಡುಗಡೆ...ಭಟ್ಟರಿಂದ 2 ಕ್ವಿಂಟಾಲ್ ತೂಕದ ರಾಗಿಮುದ್ದೆ ಅನಾವರಣ - ಜಾನಪದ ಕಲಾವಿದ ಕಂದೆಗಾಲ ಪುಟ್ಟಪ್ಪ

ಸೂನಗಹಳ್ಳಿ ರಾಜು ನಿರ್ದೇಶನದ ಮಂಡ್ಯ ಶೈಲಿಯ ಸಿನಿಮಾ ‘ಆನೆಬಲ’ ಧ್ವನಿಸುರಳಿ ಸಮಾರಂಭ ನಾಳೆ ಸಂಜೆ ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಜರುಗಲಿದೆ. ನಿರ್ದೇಶಕ ಯೋಗರಾಜ್​ ಭಟ್ 2 ಕ್ವಿಂಟಾಲ್ ತೂಕದ ಬೃಹದಾಕಾರದ ರಾಗಿಮುದ್ದೆಯನ್ನು ನಾಳೆ ಅನಾವರಣಗೊಳಿಸಿದ್ದಾರೆ.

ಯೋಗರಾಜ್​ ಭಟ್
author img

By

Published : Oct 5, 2019, 1:19 PM IST

ಹೊಸಬರ ತಂಡ ತಯಾರಿಸಿರುವ ‘ಆನೆಬಲ’ ಸಿನಿಮಾ ಪಕ್ಕಾ ಮಂಡ್ಯ ಸೊಗಡಿನ ಸಿನಿಮಾ. ನಾಳೆ ಮಂಡ್ಯದ ಡಾ. ಅಂಬೇಡ್ಕರ್​​ ಭವನದಲ್ಲಿ ಅದ್ದೂರಿ ಧ್ವನಿಸುರಳಿ ಬಿಡುಗಡೆಯಾಗುತ್ತಿದೆ. ರಾಗಿಮುದ್ದೆ ತಿನ್ನುವ ಸ್ಪರ್ಧೆಯೊಂದಿಗೆ ಜೀವನದ ಮೌಲ್ಯಗಳನ್ನು ಕೂಡಾ ಸಿನಿಮಾದಲ್ಲಿ ತೋರಿಸಲಾಗಿದೆ.

2 ಕ್ವಿಂಟಾಲ್​​ ತೂಗುವ ಬೃಹದಾಕಾರದ ರಾಗಿಮುದ್ದೆಯನ್ನು ನಾಳಿನ ಧ್ವನಿಸುರಳಿ ಸಮಾರಂಭದಲ್ಲಿ ನಿರ್ದೇಶಕ ಯೋಗರಾಜ್​​ ಭಟ್ ಅನಾವರಣಗೊಳಿಸಲಿದ್ದಾರೆ. ಸೂನಗಹಳ್ಳಿ ರಾಜು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರೀಕರಣ ಬಹುತೇಕ ಮುಗಿದಿದ್ದು ಸಿನಿಮಾ ಶೀಘ್ರವೇ ಬಿಡುಗಡೆಯಾಗಲಿದೆ. ಗ್ರಾಮೀಣ ಪರಿಸರ ಕಥೆ, ಯುವಕರ ತುಂಟತನ, ರಾಗಿಯ ಮಹತ್ವ, ಜಾನಪದ ಸಂಸ್ಕೃತಿ, ಸೋಬಾನೆ ಪದಗಳ ಬಳಕೆ ಎಲ್ಲವನ್ನೂ ಈ ಚಿತ್ರದಲ್ಲಿ ತೋರಿಸಲಾಗಿದೆ. ಎ.ವಿ. ವೇಣುಗೋಪಾಲ್ ಅಡಕಮಾರನಹಳ್ಳಿ ಮತ್ತು ಎಂ.ಎಸ್​​​. ರಘುನಂದನ್ ಈ ಚಿತ್ರದ ನಿರ್ಮಾಪಕರು. ಸಾಗರ್ ಹಾಗೂ ರಕ್ಷಿತ ಎಂಬ ಹೊಸ ಪ್ರತಿಭೆಗಳು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶೇ.90 ರಷ್ಟು ಹೊಸ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

ರಾಜ್ಯ ಪ್ರಶಸ್ತಿ ವಿಜೇತ ಪೂರ್ಣಚಂದ್ರ ತೇಜಸ್ವಿ ಚಿತ್ರದ ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಜಾನಪದ ಕಲಾವಿದ ಕಂದೆಗಾಲ ಪುಟ್ಟಪ್ಪ ಜಾನಪದ ಹಾಡು ಹೇಳುವುದರ ಜೊತೆ ಚಿತ್ರದಲ್ಲಿ ಅಭಿನಯ ಕೂಡಾ ಮಾಡಿದ್ದಾರೆ. ಜೆ.ಸಿ. ಬೆಟ್ಟೇಗೌಡ ಈ ಚಿತ್ರದ ಛಾಯಾಗ್ರಾಹಕರು. ನಾಳೆ ಸಂಜೆ 5.30 ಕ್ಕೆ ಚಿತ್ರದ ಹಾಡುಗಳನ್ನು ಮುಂಗಾರು ಮಳೆ ನಿರ್ಮಾಪಕ ಇ. ಕೃಷ್ಣಪ್ಪ ಅನಾವರಣಗೊಳಿಸಲಿದ್ದಾರೆ. ಡಾ.ವಿ. ನಾಗೇಂದ್ರ ಪ್ರಸಾದ್, ಎಸ್ಪಿ ಡಾ ಎ.ಎನ್​​. ಪ್ರಕಾಶ್​​​​ ಗೌಡ, ಮಾಜಿ ಶಾಸಕ ಎ. ರಾಜು, ಡಿ.ಎಂ. ವಿಶ್ವನಾಥ್ ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಆನೆಬಲ ಹಾಡುಗಳ ಬಿಡುಗಡೆ ಭಟ್ಟರು 2 ಕ್ವಿಂಟಾಲ್ ಮುದ್ದೆ ಬಿಡುಗಡೆ ಮಾಡಲಿದ್ದಾರೆ

ಆನೆಬಲ ಸಂಪೂರ್ಣ ಮಂಡ್ಯ ಸೊಗಡಿನ ಸಿನಿಮಾ ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯೊಂದಿಗೆ ಜೀವನದ ಮೌಲ್ಯಗಳನ್ನು ಸಹ ಸಾರುವ ಸಿನಿಮಾ ಭಾನುವಾರ ಅಕ್ಟೋಬರ್ 6 ರಂದು ಮಂಡ್ಯದ ಡಾ ಅಂಬೇಡ್ಕರ್ ಭವನದಲ್ಲಿ ಅದ್ದೂರಿಯಾಗಿ ಧ್ವನಿ ಸುರುಳಿ ಬಿಡುಗಡೆ ಮಾಡಿಕೊಳ್ಳಲಿದೆ. ಈ ಕಾರ್ಯಕ್ರಮದ ವಿಶೇಷ ಏನಪ್ಪಾ ಅಂದರೆ 2 ಕ್ವಿಂಟಾಲ್ ತೂಗುವ ಒಂದು ಬೃಹತಾದ ರಾಗಿ ಮುದ್ದೆಯನ್ನು ಅಂದು ಮುಂಗಾರು ಮಳೆ ಖ್ಯಾತಿಯ ನಿರ್ದೇಶಕ ಯೋಗರಾಜ ಭಟ್ಟರು ಅನವರಣಗೊಳಿಸಲಿದ್ದಾರೆ.

ನಿರ್ದೇಶಕ ಸೂನಗಹಳ್ಳಿ ರಾಜು ಜನತಾ ಟಾಕೀಸ್ ನಿರ್ಮಾಣದ ಸಿನಿಮಾ ಬಿಡುಗಡೆಯ ಹಂತಕ್ಕೆ ತಲುಪಿದೆ. ಗ್ರಾಮೀಣ ಪರಿಸರ ಕಥೆ, ಯುವಕರ ತುಂಟತನ, ರಾಗಿಯ ಮಹತ್ವ, ಜಾನಪದ ಸಂಕೃತಿ, ಸೋಬಾನೆ ಪದಗಳ ಬಳಕೆ ಸಹ ಚಿತ್ರಕತೆಯಲ್ಲಿ ಸೇರಿಕೊಂಡಿದೆ.

ಎ ವಿ ವೇಣುಗೋಪಾಲ್ ಅಡಕಿಮಾರನಹಳ್ಳಿ ಮತ್ತು ಎಂ ಎಸ್ ರಘುನಂದನ್ ಈ ಚಿತ್ರದ ನಿರ್ಮಾಪಕರುಗಳು. ಸಾಗರ್ ಹಾಗೂ ರಕ್ಷಿತಾ ಮುಖ್ಯ ತಾರಗಣದ ಚಿತ್ರ. 90 ಪರ್ಸೆಂಟ್ ಹೊಸ ಕಲಾವಿದರೆ ಈ ಚಿತ್ರದಲ್ಲಿ ಅಭಿನಯಿಸಿರುವುದು.

ರಾಜ್ಯ ಪ್ರಶಸ್ತಿ ವಿಜೇತ ಪೂರ್ಣಚಂದ್ರ ತೇಜಸ್ವಿ ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಜನಪದ ಕಲಾವಿದೆ ಕಂದೆಗಾಲ ಪುಟ್ಟಪ್ಪ ಜಾನಪದ ಹಾಡು ಹೇಳುವುದರ ಜೊತೆ ಅಭಿನಯ ಸಹ ಮಾಡಿರುವರು. ಜೆ ಸಿ ಬೆಟ್ಟೆ ಗೌಡ ಈ ಚಿತ್ರದ ಛಾಯಾಗ್ರಾಹಕರು.

ಅಕ್ಟೋಬರ್ 6 ರಂದು 5.30 ಕ್ಕೆ ಹಾಡುಗಳನ್ನು ಮುಂಗಾರು ಮಳೆ ನಿರ್ಮಾಪಕ ಈ ಕೃಷ್ಣಪ್ಪ ಅನವರಣಗೊಳಿಸಲಿದ್ದಾರೆ. ಡಾ ವಿ ನಾಗೇಂದ್ರ ಪ್ರಸಾದ್, ಎಸ್ಪಿ ಡಾ ಎ ಎನ್ ಪ್ರಕಾಷ್ ಗೌಡ, ಮಾಜಿ ಶಾಸಕ ಎ ರಾಜು ಡಿ ಎಂ ವಿಶ್ವನಾಥ್ ಸಮಾರಂಭದಲ್ಲಿ ಹಾಜರಿರುತ್ತಾರೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.