ETV Bharat / sitara

ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮಗ ಕೋವಿಡ್‌ಗೆ ಬಲಿ - Director Puttanna Kanagal son Ramu Kanagal dead

Director Puttanna Kanagal's son Ramu Kanagal is no more
ರಾಮು ಕಣಗಾಲ್ ಕೋವಿಡ್‌ಗೆ ಬಲಿ
author img

By

Published : Apr 28, 2021, 9:48 AM IST

Updated : Apr 28, 2021, 10:56 AM IST

09:45 April 28

ಕನ್ನಡದ ಪ್ರಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪುತ್ರ ರಾಮು ಕಣಗಾಲ್ ನಿಧನರಾಗಿದ್ದಾರೆ.

ಬೆಂಗಳೂರು: ಸ್ಯಾಂಡಲ್​ವುಡ್​​ ಚಿತ್ರಬ್ರಹ್ಮ ಎಂದೇ ಖ್ಯಾತರಾದ ನಿರ್ದೇಶಕ ದಿ. ಪುಣ್ಣಣ್ಣ ಕಣಗಾಲ್ ಅವರ ಮಗ ರಾಮು ಕಣಗಾಲ್ (54) ನಿಧನರಾಗಿದ್ದಾರೆ. ಕೊರೊನಾ ಸೋಂಕಿಗೆಗೆ ಒಳಗಾಗಿದ್ದ ರಾಮು ಕಳೆದ ಎರಡು ದಿನಗಳಿಂದ ಕೊರೊನಾಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ರಾಮು ಕಣಗಾಲ್ ಇಹಲೋಕ ತ್ಯಜಿಸಿದ್ದಾರೆ. 

ಕಳೆದ 20 ವರ್ಷಗಳಿಂದ ಭರತನಾಟ್ಯ ಕಲಾವಿದರಾಗಿದ್ದ ರಾಮು, 'ಕಣಗಾಲ್ ನೃತ್ಯಾಲಯ' ಎಂಬ ನಾಟ್ಯಶಾಲೆ ನಡೆಸುತ್ತಿದ್ದರು. ಚೆನ್ನೈನಲ್ಲಿ ವಿದ್ಯಾಭ್ಯಾಸ ಪಡೆದಿದ್ದ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಕೆಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, 'ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ಬದುಕು ಕಟ್ಟಿಕೊಂಡಿದ್ದೇವೆ. ಪುಟ್ಟಣ್ಣ ಹೆಸರಿನಲ್ಲಿ ನೀಡುವ ಪ್ರಶಸ್ತಿ ನೀಡುವ ಸಮಾರಂಭಕ್ಕೆ ಸೌಜನ್ಯಕ್ಕೂ ನಮ್ಮ ಕುಟುಂಬಕ್ಕೆ ಆಹ್ವಾನ ನೀಡಲ್ಲ' ಎಂದು ಚಿತ್ರರಂಗದ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು.

ಇದನ್ನೂ ನೋಡಿ: ಚಿಲ್ಲರೆ ಅಂಗಡಿ ವ್ಯಾಪಾರಿ ಕೋಟಿ ನಿರ್ಮಾಪಕ ಆಗಿದ್ದು ಹೀಗೆ..!

Last Updated : Apr 28, 2021, 10:56 AM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.