ETV Bharat / sitara

'ಅಪ್ಪು' ಸಾರ್ ಅಭಿಮಾನಿಗಳಿಗೆ ನೋವುಂಟಾಗಿದ್ದರೆ ಕ್ಷಮೆ ಇರಲಿ : ನಿರ್ದೇಶಕ ಜೋಗಿ ಪ್ರೇಮ್ - ekloveya

ಪುನೀತ್ ಭಾವಚಿತ್ರದ ಮುಂದೆ ಶಾಂಪೇನ್ ಓಪನ್(champagne open) ಮಾಡಿ ಅವಮಾನ ಮಾಡಿದ್ದಾರೆ ಎಂದು ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು(Puneeth rajkumar fans outrage) ಆಕ್ರೋಶ ಹೊರ ಹಾಕಿದ ಬೆನ್ನಲ್ಲೇ ನಿರ್ದೇಶಕ ಪ್ರೇಮ್(Director Prem)​ ಅಪ್ಪು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ..

Director prem Apologise Puneeth Rajkumar fans
ನಿರ್ದೇಶಕ ಜೋಗಿ ಪ್ರೇಮ್
author img

By

Published : Nov 13, 2021, 4:57 PM IST

Updated : Nov 13, 2021, 6:36 PM IST

'ಏಕ್ ಲವ್ ಯಾ' (ekloveya)ಸ್ಯಾಂಡಲ್​​ವುಡ್​​ನಲ್ಲಿ ಒಂದಲ್ಲ ಒಂದು ವಿಷ್ಯಕ್ಕೆ ಸದ್ದು ಮಾಡ್ತಿರೋ ಸಿನಿಮಾ. ನಿರ್ದೇಶಕ ಜೋಗಿ ಪ್ರೇಮ್(Jogi Prem) ನಿರ್ದೇಶನದ ಏಕ್ ಲವ್ ಯಾ ಸಿನಿಮಾದ 'ಎಣ್ಣೆಗೂ ಹೆಣ್ಣಿಗೂ ಏನು ಸಂಬಂಧ' ಎಂಬ ಹಾಡನ್ನ ನಿನ್ನೆ ಖಾಸಗಿ ಹೋಟೆಲ್​​ನಲ್ಲಿ ಬಿಡುಗಡೆ ಮಾಡಲಾಯಿತು. ಮೊದಲಿಗೆ ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ (Power star Puneeth Rajkumar)ಭಾವಚಿತ್ರಕ್ಕೆ ನಿರ್ದೇಶಕ ಪ್ರೇಮ್, ನಿರ್ಮಾಪಕಿ ರಕ್ಷಿತಾ ಪ್ರೇಮ್(Rakshitha Prem), ಸಹೋದರ ರಾಣಾ ಹಾಗೂ ನಟಿಯರಾದ ರೀಷ್ಮಾ ನಾಣಯ್ಯ ಪುಷ್ಪ ನಮನ ಅರ್ಪಿಸಿದರು.

Director prem Apologise Puneeth Rajkumar fans
ನಿರ್ದೇಶಕ ಜೋಗಿ ಪ್ರೇಮ್

ಆದರೆ, ಅದೇ ವೇದಿಕೆಯಲ್ಲಿ ಪುನೀತ್ ಭಾವಚಿತ್ರದ ಎದುರು ಚಿತ್ರತಂಡದವರು ಶಾಂಪೇನ್ ಬಾಟಲ್ (champagne bottle )ತೆರೆದು ಸಂಭ್ರಮಾಚರಣೆ ಮಾಡಿ ಹಾಡು ಬಿಡುಗಡೆ ಮಾಡಿದ್ರು. ಇದು ಪುನೀತ್ ರಾಜ್​​ಕುಮಾರ್ ಅಭಿಮಾನಿಗಳು ಹಾಗೂ ರಾಜ್​​ಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ನಿರ್ದೇಶಕ ಜೋಗಿ ಪ್ರೇಮ್ ಕ್ಷಮೆಯಾಚನೆ

ಪುನೀತ್ ನಿಧನರಾಗಿ 16 ದಿನಗಳು ಕಳೆಯುತ್ತಿವೆ. ಅಪ್ಪು ಕುಟುಂಬ ಹಾಗೂ ಅಭಿಮಾನಿಗಳು ನೋವಿನಲ್ಲಿದ್ದಾರೆ. ಇಂತಹ ಸಮಯದಲ್ಲಿ ಏಕ್ ಲವ್ ಯಾ ಚಿತ್ರತಂಡ, ಪುನೀತ್ ಭಾವಚಿತ್ರದ ಮುಂದೆ ಶಾಂಪೇನ್ ಓಪನ್ ಮಾಡಿ ಅವಮಾನ ಮಾಡಿರೋದು ಅವ್ರ ಅಭಿಮಾನಿಗಳ ನೋವಿಗೆ ಕಾರಣವಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರೋ ನಿರ್ದೇಶಕ ಜೋಗಿ ಪ್ರೇಮ್(Director Jogi prem), ಆ ಸಂದರ್ಭದಲ್ಲಿ ಶಾಂಪೇನ್ ಬಾಟಲ್ ಓಪನ್ ಮಾಡಿ, ಸಂಭ್ರಮಾಚರಣೆ ಮಾಡಿದರೆ ಜನರಿಗೆ ಹಾಗೂ ಅಪ್ಪು ಅಭಿಮಾನಿಗಳಿಗೆ ನೋವುಂಟಾಗಬಹುದು ಎಂಬ ಅರಿವು ಇರಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಏಕ್​ ಲವ್​ ಯಾ ಸಿನಿಮಾದ ಕಿಕ್ಕೇರಿಸುವ 'ಎಣ್ಣೆ' ಹಾಡು ಬಿಡುಗಡೆ

ಪುನೀತ್ ಸಾರ್ ಯಾವಾಗಲೂ ಕೆಲಸವನ್ನು ಇಷ್ಟಪಡುತ್ತಿದ್ದರು. ಚಿತ್ರರಂಗದಲ್ಲಿ ಕೆಲಸ ಮಾಡಲು ನನಗೆ ಅವರೇ ಸ್ಫೂರ್ತಿ. ಏನೇ ಸಮಸ್ಯೆಯಾದರೂ ಶೋ ಮಸ್ಟ್ ಗೋ ಆನ್ ಎಂದು ಅಪ್ಪು ಹೇಳುತ್ತಿದ್ದರು.

ಎಷ್ಟೇ ಕಷ್ಟವಾದರೂ, ಏನೇ ಅಡೆತಡೆಗಳು ಬಂದರೂ ನಮ್ಮ ಕೆಲಸ ಮುಂದುವರಿಸಬೇಕೆಂದು ಹೇಳುತ್ತಿದ್ದ ಅಪ್ಪು ಅವರನ್ನು ಕಾರ್ಯಕ್ರಮದ ಆರಂಭದಲ್ಲಿ ನೆನೆದು ನಂತರ ಕೊನೆಗೆ ಶಾಂಪೇನ್ ಸಂಭ್ರಮ ಮಾಡಿದ್ದೇವೆ.

ರಕ್ಷಿತಾ ಪ್ರೇಮ್​ ಕ್ಷಮೆಯಾಚನೆ

ಅದು ಉದ್ದೇಶ ಪೂರ್ವಕವಾಗಿ ಮತ್ತು ಯಾರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶ ನಮಗಿರಲಿಲ್ಲ, ನಮ್ಮ ನಡವಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ, ಯಾರಿಗಾದರೂ ತೊಂದರೆಯಾಗಿದ್ದರೆ ದಯವಿಟ್ಟು ಕ್ಷಮಿಸಿ(Apologise) ಎಂದು ನಿರ್ದೇಶಕ ಪ್ರೇಮ್ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಇದರ ಜೊತೆಗೆ ಈ ಚಿತ್ರದ ನಿರ್ಮಾಪಕಿ, ನಟಿ ರಕ್ಷಿತಾ ಪ್ರೇಮ್ ಕೂಡ ತಮ್ಮ ಫೇಸ್​​ಬುಕ್​​ನಲ್ಲಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

Last Updated : Nov 13, 2021, 6:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.