ETV Bharat / sitara

ಮತ್ತೆ ಒಗ್ಗೂಡಿದ 'ಪೃಥ್ವಿ' ಜೋಡಿ: PRK ನಿರ್ಮಾಣದ ಸಿನಿಮಾಗೆ ಪುನೀತ್ ಹೀರೋ - ಪುನೀತ್ ರಾಜ್ ಕುಮಾರ್ ಮುಂದಿನ ಚಿತ್ರ ನಿರ್ದೇಶಿಸಲಿರುವ ಜೇಕಬ್ ವರ್ಗೀಸ್

2010ರಲ್ಲಿ ಜೇಕಬ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಪೃಥ್ವಿ ಸಿನಿಮಾದಲ್ಲಿ ನಟ ಪುನೀತ್ ರಾಜ್​ ಕುಮಾರ್​ ನಟಿಸಿದ್ದರು. ಆದಾದ ಬಳಿಕ ಈ ಜೋಡಿ ಒಗ್ಗೂಡಿರಲಿಲ್ಲ. ಇದೀಗ ಮತ್ತೆ ಜೇಕಬ್ ಪುನೀತ್​​ ಜೊತೆಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ.

Puneet, Jacob Verghese
ಪುನೀತ್ ,ಜೇಕಬ್ ವರ್ಗೀಸ್
author img

By

Published : Oct 20, 2021, 8:38 PM IST

ಯುವರತ್ನ ಸಿನಿಮಾ ಬಳಿಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಜೇಮ್ಸ್ ಚಿತ್ರದ ಶೂಟಿಂಗ್​ನಲ್ಲಿರುವ ಪುನೀತ್​, ಅಭಿನಯ ಜೊತೆಗೆ ತಮ್ಮ ಪಿಆರ್‌ಕೆ ಪ್ರೊಡಕ್ಷನ್ ಹೌಸ್ ಮೂಲಕ ಅನೇಕ ಸಿನಿಮಾಗಳ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.

ಫ್ರೆಂಚ್ ಬಿರಿಯಾನಿ ಚಿತ್ರದ ನಂತರ ಪಿಆರ್​​ಕೆ ಬ್ಯಾನರ್​​​ನಡಿ ಮ್ಯಾನ್ ಆಫ್ ದಿ ಮ್ಯಾಚ್ ಹಾಗೂ ಫ್ಯಾಮಿಲಿ ಪ್ಯಾಕ್ ಸಿನಿಮಾಗಳು ತಯಾರಾಗಿದ್ದು, ಬಿಡುಗಡೆಗೆ ಸಜ್ಜಾಗಿವೆ. ಇನ್ನು ಪಿಆರ್‌ಕೆ ಬ್ಯಾನರ್​​​ನಲ್ಲಿ ಹಲವು ಸಿನಿಮಾಗಳು ನಿರ್ಮಾಣಗೊಂಡು ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಆದರೆ, ತಮ್ಮದೇ ಹೋಂ ಬ್ಯಾನರ್​​ನಲ್ಲಿ ಪುನೀತ್ ರಾಜ್ ಕುಮಾರ್ ಇದುವರೆಗೂ ಒಂದು ಸಿನಿಮಾ ಮಾಡಿಲ್ಲ.ಇದೀಗ ಆ ಕಾಲ ಕೂಡಿ ಬಂದಿದೆ.

Jacob Verghese directed Prithvi Cinema
ಜೇಕಬ್ ವರ್ಗೀಸ್ ನಿರ್ದೇಶನದ ಪೃಥ್ವಿ ಸಿನಿಮಾ

ಸ್ಯಾಂಡಲ್ ವುಡ್​​​ನಲ್ಲಿ ಸವಾರಿ, ಪೃಥ್ವಿ ಹಾಗೂ ಚಂಬಲ್​ನಂತಹ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿರುವ ನಿರ್ದೇಶಕ ಜೇಕಬ್ ವರ್ಗೀಸ್ ಜೊತೆ ಪುನೀತ್ ರಾಜ್ ಕುಮಾರ್ ಸಿನಿಮಾ ಮಾಡುವ ಕಾಲ ಬಂದಿದೆ. 2010ರಲ್ಲಿ ಬಿಡುಗಡೆಗೊಂಡ ಜೇಕಬ್ ನಿರ್ದೇಶನದ ಪೃಥ್ವಿ ಸಿನಿಮಾದಲ್ಲಿ ಪುನೀತ್​, ಒಬ್ಬ ದಕ್ಷ ಪ್ರಾಮಾಣಿಕ ಐಎಎಸ್‌ ಅಧಿಕಾರಿಯಾಗಿ ಬೆಳ್ಳಿ ತೆರೆ ಮೇಲೆ ಅಬ್ಬರಿಸಿದರು. ಚಿತ್ರ ಸೂಪರ್ ಹಿಟ್ ಆಗಿ ಪುನೀತ್​ಗೆ ದೊಡ್ಡ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿತ್ತು.

ಈ ಸಿನಿಮಾದ ನಂತರ ನಿರ್ದೇಶಕ ಜೇಕಬ್ ವರ್ಗೀಸ್ ಹಾಗೂ ಪುನೀತ್ ಒಟ್ಟಿಗೆ ಸಿನಿಮಾ ಮಾಡಲು ಆಗಿರಲಿಲ್ಲ. ಈಗ 11 ವರ್ಷಗಳ ಬಳಿಕ ಪವರ್ ಸ್ಟಾರ್ ಜೊತೆ ನಿರ್ದೇಶಕ ಜೇಕಬ್ ಸಿನಿಮಾ ಮಾಡುವ ಸಮಯ ಬಂದಿದೆ.

ಈಗಾಗಲೇ ನಿರ್ದೇಶಕ ಜೇಕಬ್, ಪುನೀತ್ ರಾಜ್ ಕುಮಾರ್ ಜೊತೆಗೆ ಸಿನಿಮಾ ಮಾತುಕತೆ ನಡೆಸಿದ್ದು, ಪಿಆರ್‌ಕೆ ಬ್ಯಾನರ್‌ನಿಂದಲೇ ಚಿತ್ರ ನಿರ್ಮಾಣ ಆಗುತ್ತಿದೆ. ಪವರ್ ಸ್ಟಾರ್ ಕಥೆಯನ್ನು ಫೈನಲ್ ಮಾಡಿದ್ದು, ಉಳಿದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯಲ್ಲಿ ಚಿತ್ರತಂಡ ನಿರತವಾಗಿದೆ.

ಸದ್ಯ ನಿರ್ದೇಶಕ ಚೇತನ್‌ಕುಮಾರ್ ನಿರ್ದೇಶನದ ಜೇಮ್ಸ್‌ ಸಿನಿಮಾದ ಶೂಟಿಂಗ್‌ನಲ್ಲಿ ಪುನೀತ್​​ ಬ್ಯುಸಿಯಾಗಿದ್ದು, ಅದು ಮುಗಿಯುತ್ತಿದ್ದಂತೆ ನವೆಂಬರ್‌ನಲ್ಲಿ ಪವನ್ ಕುಮಾರ್ ನಿರ್ದೇಶನದ ದ್ವಿತ್ವ ಚಿತ್ರ ಶುರುವಾಗಲಿದೆ. ಈ ಸಿನಿಮಾವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ಈ ಸಿನಿಮಾಗಳ ಮಧ್ಯೆ 2022ಕ್ಕೆ ನಿರ್ದೇಶಕ ಜೇಕಬ್ ಹಾಗೂ ಪವರ್ ಸ್ಟಾರ್ ಕಾಂಬಿನೇಷನ್ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

ಇದನ್ನೂ ಓದಿ: ನೆಟ್ ಫ್ಲಿಕ್ಸ್ ನಲ್ಲಿ 'ಧಮಾಕ' ಚಿತ್ರದ ಟ್ರೈಲರ್ ಬಿಡುಗಡೆ: ಪ್ರೇಕ್ಷಕರಿಂದ ಮೆಚ್ಚುಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.