ETV Bharat / sitara

'ರಂಗನಾಯಕಿ' ಟೀಸರ್​​ ರಿಲೀಸ್​​​​​: ಟ್ಯಾಗ್​​ಲೈನ್ ಬಗ್ಗೆ ಸ್ಪಷ್ಟನೆ ನೀಡಿದ ನಿರ್ದೇಶಕ ದಯಾಳ್​

author img

By

Published : Apr 30, 2019, 1:22 PM IST

ದಯಾಳ್ ಪದ್ಮನಾಭನ್ ನಿರ್ದೇಶನದ 'ರಂಗನಾಯಕಿ' ಸಿನಿಮಾದ ಟ್ಯಾಗ್​​ಲೈನ್​ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದು, ದಯಾಳ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮುಂದಿನ ನನ್ನ ಮಹಿಳಾ ಪ್ರಧಾನ ಚಿತ್ರಗಳಿಗೆ ಇದೇ ಟೈಟಲ್ ಬಳಸಿಕೊಳ್ಳುವುದಾಗಿ ಹೇಳಿದ್ದಾರೆ.

'ರಂಗನಾಯಕಿ'

ಸ್ಯಾಂಡಲ್​ವುಡ್​ನಲ್ಲಿ ಇತ್ತೀಚೆಗೆ ಸಿನಿಮಾ ಹೆಸರಿಗಿಂತ ಟ್ಯಾಗ್​​ಲೈನ್​​ಗಳು ಹೆಚ್ಚು ಸದ್ದು ಮಾಡುತ್ತಿವೆ. ಇತ್ತೀಚೆಗೆ ದಯಾಳ್ ಪದ್ಮನಾಭನ್ ಅವರ ಹೊಸ ಚಿತ್ರ 'ರಂಗನಾಯಕಿ' ಚಿತ್ರದ ಮುಹೂರ್ತ ನೆರವೇರಿದ್ದು, ಅದರ ಟ್ಯಾಗ್​​ಲೈನ್ ಕೂಡಾ ಚರ್ಚೆಗೆ ಗ್ರಾಸವಾಗಿದೆ.

ಟ್ಯಾಗ್​​ಲೈನ್ ಬಗ್ಗೆ ಸ್ಪಷ್ಟನೆ ನೀಡಿದ ದಯಾಳ್ ಪದ್ಮನಾಭನ್

ಮುಹೂರ್ತದಂದು ಚಿತ್ರದ ಟೀಸರ್ ಹಾಗೂ ಮೊದಲ ಪೋಸ್ಟರ್​ ಕೂಡಾ ಬಿಡುಗಡೆಯಾಗಿದ್ದು, 'ವಾಲ್ಯೂಮ್​​ 1 - ವರ್ಜಿನಿಟಿ' ಎಂಬ ಟ್ಯಾಗ್ ಲೈನ್ ನೀಡಲಾಗಿತ್ತು. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಆರತಿ ಅಭಿನಯಿಸಿದ್ದ 'ರಂಗನಾಯಕಿ' ಸಿನಿಮಾ ಇಂದಿಗೂ ಜನರ ಮನಸಿನಲ್ಲಿದ್ದು, ಅದೊಂದು ಉತ್ತಮ ಚಿತ್ರವಾಗಿತ್ತು. ಅಂತಹ ಚಿತ್ರದ ಹೆಸರನ್ನು ಇರಿಸಿಕೊಂಡು ಆ ಚಿತ್ರಕ್ಕೆ ಈ ರೀತಿಯ ಟ್ಯಾಗ್​ಲೈನ್ ನೀಡಿದ್ದಾರೆ ಎಂದು ಕೆಲವರು ಮುಜುಗರ ವ್ಯಕ್ತಪಡಿಸಿದ್ದರು. ಈ ವಿಷಯ ಚರ್ಚೆಗೆ ಕೂಡಾ ಗ್ರಾಸವಾಗಿತ್ತು. ಈಗ ಈ ಕಾಂಟ್ರವರ್ಸಿಗೆ ನಿರ್ದೇಶಕ ದಯಾಳ್ ಪದ್ಮನಾಭನ್ ಸ್ಪಷ್ಟನೆ ನೀಡಿದ್ದಾರೆ.

  • " class="align-text-top noRightClick twitterSection" data="">

ಇದರಲ್ಲಿ ಮುಜುಗರವಾಗುವಂತಹ ಅಂಶ ಇಲ್ಲ. ಅಂದಿನ 'ರಂಗನಾಯಕಿ' ಮಹಿಳಾ ಪ್ರಧಾನ ಚಿತ್ರವಾಗಿತ್ತು. ಅದೇ ರೀತಿ ಈ ರಂಗನಾಯಕಿ ಚಿತ್ರವೂ ಸಹ ಮಹಿಳಾ ಪ್ರಧಾನ ಚಿತ್ರವಾಗಿದೆ. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ನೂರು ಚಿತ್ರಗಳನ್ನು ಮಾಡಬಹುದಾದಂತ ಟೈಟಲನ್ನು ನಮಗೆ ಕೊಟ್ಟು ಹೋಗಿದ್ದಾರೆ. 'ರಂಗನಾಯಕಿ' ಟೈಟಲ್​​​​​​​​​ನಿಂದ ನೂರಾರು ನಾಯಕಿಯರನ್ನು ಹುಟ್ಟು ಹಾಕ‌ಬಹುದು. ಅಲ್ಲದೆ ನಾನು ಮುಂದಿನ‌ ದಿನಗಳಲ್ಲಿ ಇದೇ ಟೈಟಲ್ ಬಳಸಿ ಮತ್ತೆ ಮಹಿಳಾ ಪ್ರಧಾನ ಸಿನಿಮಾ ಮಾಡಲು ನಿರ್ಧರಿಸಿದ್ದೇನೆ. ಆ ಕಾರಣಕ್ಕಾಗಿ 'ವಾಲ್ಯೂಮ್​​ 1 - ವರ್ಜಿನಿಟಿ' ಎಂದು ಚಿತ್ರಕ್ಕೆ ಟ್ಯಾಗ್​​​​​​​​​​ಲೈನ್ ಕೊಡಲಾಗಿದೆ ಎಂದು ಹೇಳಿದ್ದಾರೆ.

ಅಲ್ಲದೆ ಈ ಚಿತ್ರ ಅತ್ಯಾಚಾರಕ್ಕೆ ಒಳಗಾದ ಹೆಣ್ಣಿನ‌ ಸುತ್ತ ಹೆಣೆದಿರುವ ಕಥೆಯಾಗಿದ್ದು, 'ವರ್ಜಿನಿಟಿ' ಸೂಕ್ತವಾದ ಟ್ಯಾಗ್​​​​​​​​​​​​​​​​​​​​​​​​​​​​​​ಲೈನ್​​. ಈಗಾಗಲೇ ನಾನು ನಾಲ್ಕೈದು ಮಹಿಳಾ ಪ್ರಧಾನ ಸಿನಿಮಾ ಕಥೆಗಳನ್ನು ರೆಡಿ ಮಾಡಿಕೊಂಡಿದ್ದೇನೆ. ವರ್ಷಕ್ಕೆ ಒಂದೊಂದು ಸಿನಿಮಾ ಮಾಡುತ್ತೇನೆ ಎಂದು ದಯಾಳ್ ಸ್ಪಷ್ಟನೆ ನೀಡಿದ್ದಾರೆ.

Intro:ಸ್ಯಾಂಡಲ್ ವುಡ್ವನಲ್ಲಿ ಇತ್ತೀಚಿನ ದಿನಗಳಲ್ಲಿ ಟೈಟಲ್ ಗಿಂತ ಹೆಚ್ಚಾಗಿ ಸಿನಿಮಾದ ಸಬ್ ಟೈಟಲ್ ಗಳು ಸಖತ್ ಸದ್ದು ಮಾಡ್ತಿವೆ.ಅದೇ ರೀತಿ ನಿರ್ದೇಶಕ ದಯಾಳ್ ಪದ್ಮನಾಭನ್ ಅವರ‌ ನೂತನ ಚಿತ್ರ "ರಂಗನಾಯಕಿ" ಚಿತ್ರದ ಸಬ್ ಟೈಟಲ್ ಸ್ವಲ್ಪ ಚರ್ಚೆಗೆ ಗ್ರಾಸವಾಗಿತ್ತು.ಎಸ್ "ರಂಗನಾಯಕಿ" ವಾಲ್ಯೂಮ್ ೧ : ವರ್ಜಿನಿಟಿ ಎಂಬ ಟ್ಯಾಗ್ ಲೈನ್ ಕೆಲವರ ಕೆಂಗಣ್ಣಿಗೆ ಗುರಿಯಾಗಿತ್ತು.ಯಾಕಪ್ಪ‌ ಅಂದ್ರೆ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ರಂಗನಾಯಕಿ ಚಿತ್ರ ಇಂದಿಗೂ ಸಹ ಎವರ್ ಗ್ರೀನ್ ಸಿನಿಮಾ.ಇಂತ ಸಿನಿಮಾದ‌ ಟೈಟಲ್ ಬಳಸಿ ಮುಜುಗರವಾಗುವಂತ ಟ್ಯಾಗ್ ಲೈನ್ ಇಟ್ಟಿದಕ್ಕೆ ಚರ್ಚೆಗೆ ಗ್ರಾಸವಾಗಿತ್ತು.

Body:ಅದ್ರೆ ಈ ಕಾಂಟ್ರವರ್ಸಿಗೆ ನಿರ್ದೇಶಕ ದಯಾಖ್ ಕ್ಲಾರಿಟಿ ಕೊಟ್ಟಿದ್ದು ಇದರಲ್ಲಿ ಯಾವುದೇ ಮುಜುಗರವಾಗುವಂತಹ ಅಂಶ ಇಲ್ಲ ಎಂದು ಹೇಳಿದ್ದಾರೆ.ಎಸ್ ಅಂದಿನ ರಂಗನಾಯಕಿ ಮಹಿಳಾ ಪ್ರಧಾನ ಚಿತ್ರವಾಗಿತ್ತು.ಅದೇ ರೀತಿ ನಮ್ಮ ರಂಗನಾಯಕಿ ಚಿತ್ರವೂ ಸಹ ಮಹಿಳಾ ಪ್ರಧಾನ ಚಿತ್ರವಾಗಿದೆ.ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ನೂರು ಚಿತ್ರಗಳ ಮಾಡುವಂತ ಟೈಟಲ್ ಅನ್ನು ನಮಗೆ ಕೊಟ್ಟು ಹೋಗಿದ್ದಾರೆ. ರಂಗ ನಾಯಕಿ ಟೈಟಲ್ ನಿಂದ ನೂರಾರು ನಾಯಕಿಯರನ್ನು ಹುಟ್ಟು ಹಾಕ‌ ಬಹುದು.ಅಲ್ಲದೆ ನಾನು ಮುಂದಿನ‌ದಿನಗಳಲ್ಲಿ ಇದೇ ಟೈಟಲ್ ಬಳಸಿ ಮಹಿಳಾ ಪ್ರಧಾನ ಸಿನಿಮಾ ಮಾಡೋಣ ಅಂತ ಇದ್ದೀನಿ ಅದಕ್ಕಾಗಿ .ವಾಲ್ಯುಮ್ ೧ ವರ್ಜಿನಿಟಿ.ಎಂದು ಈ ಚಿತ್ರಕ್ಕೆ ಟ್ಯಾಗ್ ಲೈನ್ ಕೊಟ್ಟಿದ್ದೀನಿ.ಅಲ್ಲದೆ ಈ ಚಿತ್ರ ಅತ್ಯಾಚಾರಕ್ಕೆ ಒಳಗಾದ ಹೆಣ್ಣಿನ‌ ಸುತ್ತ ಹೆಣೆದಿರುವ ಕಥೆಯಾಗಿದ್ದು.ವರ್ಜಿನಿಟಿ ಸೂಕ್ತವಾದ ಟ್ಯಾಗ್ ಲೈನ್ .ಅಲ್ಲದೆ ಮುಂದಿನ‌ ದಿನಗಳಲ್ಲಿ ನಾನು ರಙಗನಾಯಕಿ ಟೈಟಲ್ ಬಳಸಿ ಟ್ಯಾಗ್ ಲೈನ್ ನಲ್ಲಿ ವಾಲ್ಯೂಮ್ ೨ ಎಂದು ಬಳಸಿ ಬೇರೋಂದು ಕಥೆವಹೇಳ್ತಿನಿ.ಅಲ್ಲದೆ ಈಗಾಗಲೇ ನನ್ನ ಬಳಿ ನಾಲ್ಕೈದು ಮಹಿಳಾ ಪ್ರಧಾನ ಕಥೆಗಳ ರೆಡಿಮಾಡಿಕೊಂಡಿದ್ದು ವರ್ಷಕ್ಕೊಂದು ಸಿನಿಮಾ ಮಾಡ್ತಿನಿ ಎಂದು ದಯಾಳ್ ಪದ್ಮನಾಭನ್ ತಿಳಿಸಿದ್ರು.

ಸತೀಶ ಎಂಬಿ.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.