ಅತ್ಯಂತ ಜನಪ್ರಿಯ ಕನ್ನಡ ಧಾರಾವಾಹಿ 'ಜೊತೆ ಜೊತೆಯಲಿ' ನಿರ್ದೇಶಕ ಆರೂರು ಜಗದೀಶ್ ಅನಾರೋಗ್ಯದ ಹಿನ್ನೆಲೆ, ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜೆಎಸ್ ಪ್ರೊಡಕ್ಷನ್ನ ಒಡತಿ, ಜೊತೆ ಜೊತೆಯಲಿ ಧಾರಾವಾಹಿಯ ನಿರ್ಮಾಪಕಿ ಸ್ಮಿತಾ ಜಗದೀಶ್ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಬಹಿರಂಗಪಡಿಸಿದ್ದಾರೆ. ನನ್ನ ಪತಿ ಅನಾರೋಗ್ಯದಿಂದ ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಅವರ ಬದಲಿಗೆ ಪತ್ನಿಯಾದ ನಾನು, ಇಂದು ಪತಿಯ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಸಂದೇಶ ನೀಡಿದ್ದಾರೆ.
ಜಗದೀಶ್ ಲಾಕ್ಡೌನ್ ನಂತರ ಏಪ್ರಿಲ್ 25ರಿಂದ ಆರಂಭವಾದ ಶೂಟಿಂಗ್ನಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಸತತವಾಗಿ ಶೂಟಿಂಗ್ನಲ್ಲೂ ಕೂಡ ತೊಡಗಿಸಿಕೊಂಡಿದ್ದರು. ಕಳೆದ ಒಂದು ವಾರದ ಹಿಂದೆಯಷ್ಟೇ ಅನಾರೋಗ್ಯಕ್ಕೆ ತುತ್ತಾದರು. ಇದೀಗ ಲಾಕ್ಡೌನ್ ಇರುವ ಕಾರಣ ಶೂಟಿಂಗ್ ಕೂಡ ನಡೆಯುತ್ತಿಲ್ಲ ಎನ್ನಲಾಗಿದೆ.