ETV Bharat / sitara

'ಮುಂದಿನ‌ ನಿಲ್ದಾಣ'ದ ಪೋಸ್ಟರ್​ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ವಿಶ್ ಮಾಡಿದ ರಿಷಭ್​​​​​​​​​​​​​​​​​​ ಶೆಟ್ಟಿ - Mundina Nildana poster

ಸ್ಯಾಂಡಲ್​​​ವುಡ್​​​ನಲ್ಲಿ ವಿಭಿನ್ನ ಟೈಟಲ್, ದಿನನಿತ್ಯದ ಬಳಕೆ ಪದಗಳ ಟೈಟಲ್​​​ ಇರುವ ಸಿನಿಮಾಗಳು ತಯಾರಾಗುತ್ತಿದ್ದು ಇದೀಗ 'ಮುಂದಿನ ನಿಲ್ದಾಣ' ಎಂಬ ಸಿನಿಮಾ ತಯಾರಾಗುತ್ತಿದೆ. ಇಂದು ನಟ, ನಿರ್ದೇಶಕ ರಿಷಭ್ ಶೆಟ್ಟಿ ಚಿತ್ರದ ಹೊಸ ಪೋಸ್ಟರನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

'ಮುಂದಿನ‌ ನಿಲ್ದಾಣ'
author img

By

Published : Aug 12, 2019, 11:00 PM IST

'ಮುಂದಿನ ನಿಲ್ದಾಣ' ಕ್ಯಾಚಿ ಟೈಟಲ್​​​​​​ನಿಂದಲೇ ಸ್ಯಾಂಡಲ್​​​​​​​​​ವುಡ್​​​​​​​​​​​​​​​​​​​ನಲ್ಲಿ ಟಾಕ್ ಆಫ್​​ ದಿ ಟೌನ್ ಎನಿಸಿರುವ ಸಿನಿಮಾ. ಕೆಲವು ದಿನಗಳ ಹಿಂದೆ ಪೋಸ್ಟರೊಂದನ್ನು ಬಿಡುಗಡೆಗೊಳಿಸಿ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿದ್ದ 'ಮುಂದಿನ ನಿಲ್ದಾಣ' ಚಿತ್ರದ ಮತ್ತೊಂದು ಪೋಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

'ಮುಂದಿನ‌ ನಿಲ್ದಾಣ'ದ ಪೋಸ್ಟರ್​ ಬಿಡುಗಡೆಗೊಳಿಸಿದ ರಿಷಭ್​​​​​​​​​​​​​​​​​​ ಶೆಟ್ಟಿ

ಚಿತ್ರದ ನಾಯಕ ಪ್ರವೀಣ್​​​​​​​​ ತೇಜ, ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್ ಹಾಗೂ ಯುವ ನಟಿ ಅನನ್ಯ ಕಶ್ಯಪ್, ನಿರ್ದೇಶಕ ವಿನಯ್ ಭಾರದ್ವಾಜ್, ಹಾಗೂ ಕೋಸ್ಟಲ್ ಫ್ರೀಜ್ ಪ್ರೊಡಕ್ಷನ್ ಸಮ್ಮುಖದಲ್ಲಿ ನಟ, ನಿರ್ದೇಶಕ ರಿಷಭ್​​​​​​​​​​​ ಶೆಟ್ಟಿ ಚಿತ್ರದ ಹೊಸ ಪೋಸ್ಟರನ್ನು ಅನಾವರಣ ಮಾಡಿದರು. ಚಿತ್ರದ ಪೋಸ್ಟರ್ ಹಾಗೂ ತಂಡದ ಬಗ್ಗೆ ರಿಷಭ್​ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರದಲ್ಲಿ ಮೂವರು ಪ್ರಮುಖ ಪಾತ್ರಧಾರಿಗಳಿದ್ದು ಈ ಮೂವರ ಸುತ್ತ ಚಿತ್ರಕಥೆ ಸುತ್ತಲಿದೆ ಎಂದು ಚಿತ್ರತಂಡ ಹೇಳಿದೆ. ಸ್ಟ್ರೈಕರ್ ಖ್ಯಾತಿಯ ಪ್ರವೀಣ್ ತೇಜ ಐಟಿ ಉದ್ಯೋಗಿ ಜೊತೆಗೆ ಪ್ರೋಟೋಗ್ರಾಫರ್ ಆಗಿ ನಟಿಸಿದ್ದಾರೆ. ರಂಗಿತರಂಗ ಚಿತ್ರದ ರಾಧಿಕಾ ಚೇತನ್ ಆರ್ಟ್ ಕ್ಯುರೇಟರ್ ಮೀರಾ ಎಂಬ ಪಾತ್ರ ಮಾಡಿದ್ದು, ಯುವನಟಿ ಅನನ್ಯ ಕಶ್ಯಪ್ ಡಾಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ.

mundina nildana
'ಮುಂದಿನ‌ ನಿಲ್ದಾಣ' ಚಿತ್ರತಂಡ

ಈ ಚಿತ್ರದ ಪೋಸ್ಟರನ್ನು ಆ್ಯಂಗ್ರಿ ಹನುಮಾನ್ ಖ್ಯಾತಿಯ ಕರಣ್ ಆಚಾರ್ಯ ವಿನ್ಯಾಸ ಮಾಡಿದ್ದು, ಬಾಲಿವುಡ್ ನಟ ಶಾರುಖ್‌ ಖಾನ್‌ ಅವರ ರೆಡ್ ಚಿಲ್ಲೀಸ್ ಪ್ರೊಡಕ್ಷನ್ ಸಂಸ್ಥೆಯಲ್ಲಿರುವ, ಸಿದ್ಧಾರ್ಥ್ ಎಂಬುವರು ಈ ಚಿತ್ರದ ಕಲರ್ ಕರೆಕ್ಷನ್‌ ಮಾಡಿರೋದು ವಿಶೇಷ. ಇಂಜಿನಿಯರಿಂಗ್ ಪದವೀಧರ ಹಾಗೂ ರಿಯಾಲಿಟಿ ಶೋಗಳನ್ನು ಹೋಸ್ಟ್‌ ಮಾಡುತ್ತಿದ್ದ, ವಿನಯ್ ಭಾರದ್ವಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನು ಈ ಚಿತ್ರಕ್ಕೆ 7 ಜನ ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದು, ಪಿಆರ್​​​​​​ಕೆ ಸಂಸ್ಥೆ ಧ್ವನಿಸುರುಳಿ ಹಕ್ಕುಗಳನ್ನು ಪಡೆದಿದೆ. ಚಿತ್ರಕ್ಕೆ ಅಭಿಮನ್ಯು ಸದಾನಂದ ಛಾಯಾಗ್ರಹಣವಿದೆ. ಸದ್ಯದಲ್ಲೇ ಈ ಚಿತ್ರದ ಟ್ರೇಲರನ್ನು ಚಿತ್ರತಂಡ ಬಿಡುಗಡೆ ಮಾಡಲಿದ್ದು ಅಕ್ಟೋಬರ್​​​​ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದೆ.

mundina nildana
'ಮುಂದಿನ‌ ನಿಲ್ದಾಣ' ಮೊಲದ ಪೋಸ್ಟರ್​​

Intro:ಮುಂದಿನ‌ ನಿಲ್ದಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಿಷಬ್ ಶೆಟ್ಟಿ!!

ಮುಂದಿನ ನಿಲ್ದಾಣ..ಕ್ಯಾಚೀ ಟೈಟಲ್ ನಿಂದಲೇ ಸ್ಯಾಂಡಲ್ ವುಡ್ ನಲ್ಲಿ ಲೈಟ್ ಆಗಿ ಸೌಂಡ್ ಮಾಡ್ತಿರೋ ಸಿನಿಮಾ..ಕೆಲ ದಿನಗಳ ಹಿಂದೆ ಹಿಂಬದಿಯ ಪೋಸ್ಟರ್ ಬಿಟ್ಟು, ಸಿನಿ ಪ್ರಿಯರಲ್ಲಿ ಕ್ಯೂರ್ಯಾಸಿಟಿ ಹುಟ್ಟಿಸಿದ ಮುಂದಿನ ನಿಲ್ದಾಣ ಚಿತ್ರದ, ಪೋಸ್ಟರ್ ನ್ನ ಬಿಡುಗಡೆ ಮಾಡಲಾಯಿತು,
ಈ ಚಿತ್ರದ ನಾಯಕ ಪ್ರವೀಣ್ ತೇಜಾ, ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್, ಹಾಗು ಯುವ ನಟಿ ಅನನ್ಯ ಕಶ್ಯಪ್, ನಿರ್ದೇಶಕ ವಿನಯ್ ಭಾರದ್ವಾಜ್, ಹಾಗು ಕೋಸ್ಟಲ್ ಫ್ರೀಜ್ ಪ್ರೊಡಕ್ಷನ್ ಸಮ್ಮುಖದಲ್ಲಿ, ರಾಷ್ಟ್ರ ಪ್ರಶಸ್ತಿ ಪಡೆದಿರುವ, ನಟ, ನಿರ್ದೇಶಕ ರಿಷಬ್ ಶೆಟ್ಟಿ ಅನಾವರಣ ಮಾಡಿ, ಈ ಹೊಸ ಚಿತ್ರದ ಪೋಸ್ಟರ್ ಹಾಗು ತಂಡದ ಬಗ್ಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ರು..ಈ ಮೂರು ವ್ಯಕ್ತಿಗಳ ಲಿಬರೇಟಿಂಗ್ ಜರ್ನಿಯೇ, ಮುಂದಿನ ನಿಲ್ದಾಣಕ್ಕೆ ಬಂದು ಸೇರುತ್ತೆ ಅನ್ನೋದು ಕಥೆ..ಸ್ಟ್ರೈಕರ್ ಖ್ಯಾತಿಯ ಪ್ರವೀಣ್ ತೇಜಾ, ಐಟಿ ಉದ್ಯೋಗಿ ಜೊತೆಗೆ ಪ್ರೋಟೋಗ್ರಾಫರ್ ಆಗಿ ಆಕ್ಟ್ ಮಾಡಿದ್ದಾರೆ..ರಂಗಿತರಂಗ ಚಿತ್ರದ ರಾಧಿಕಾ ಚೇತನ್, ಆರ್ಟ್ ಕ್ಯುರೇಟರ್ ಮೀರಾ ಎಂಬ ಪಾತ್ರವನ್ನ ಮಾಡಿದ್ದು, ಯುವನಟಿ ಅನನ್ಯ ಕಶ್ಯಪ್ ಡಾಕ್ಟರ್ ಪಾತ್ರದಲ್ಲಿ ಕಾಣ್ತಾರೆ..ಈ ಚಿತ್ರದ ಪೋಸ್ಟರ್ ನ್ನ,ಆಂಗ್ರಿ ಹನುಮಾನ್ ಖ್ಯಾತಿಯ ಕರಣ್ ಆಚಾರ್ಯ ಪೋಸ್ಟರ್ ವಿನ್ಯಾಸ ಮಾಡಿದ್ದು, ಶಾರುಖ್‌ ಖಾನ್‌ ರೆಡ್ ಚಿಲ್ಲಿಸ್ ಪ್ರೊಡಕ್ಷನ್ ಸಂಸ್ಥೆಯಲ್ಲಿರುವ, ಸಿದ್ಧಾರ್ಥ್ ಎಂಬುವರು ಈ ಚಿತ್ರದ ಕಲರ್ ಕಲೆಕ್ಷನ್‌ ಮಾಡಿರೋದು ಈ ಚಿತ್ರದ ಹೈಲೆಟ್ಸ್..Body:ಇಂಜಿನಿಯರಿಂಗ್ ಮಾಡಿ ಹಾಗು ರಿಯಾಲಿಟಿ ಶೋಗಳನ್ನ ಹೋಸ್ಟ್‌ ಮಾಡುತ್ತಿದ್ದ, ವಿನಯ್ ಭಾರದ್ವಾಜ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ..ಇನ್ನು ಈ ಚಿತ್ರಕ್ಕೆ 7 ಜನ ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದು, ಪಿಕೆಆರ್ ಧ್ವನಿಸುರುಳಿ ಹಕ್ಕುಗಳನ್ನು ಪಡೆದಿದ್ದು ಅಭಿಮನ್ಯು ಸದಾನಂದ ಛಾಯಾಗ್ರಹಣವಿದೆ.ಸದ್ಯದಲ್ಲೇ ಈ ಚಿತ್ರದ ಟ್ರೈಲರ್ ರಿಲೀಸ್ ಮಾಡಿ, ಅಕ್ಟೋಬರ್ ತಿಂಗಳಲ್ಲಿ ಮುಂದಿನ ನಿಲ್ದಾಣ ಚಿತ್ರ ತೆರೆಗೆ ಬರಲಿದೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.