ETV Bharat / sitara

ಪವರ್​ ಸ್ಟಾರ್​ ಮುಂದಿನ ಚಿತ್ರಕ್ಕೆ ದಿನಕರ್​ ತೂಗುದೀಪ್​ ನಿರ್ದೇಶನ? - Dinakar Thoogudeepa

ಸ್ಯಾಂಡಲ್​ವುಡ್​ನಲ್ಲಿ ಕೆಲ ದಿನಗಳ ಹಿಂದೆ ಪುನೀತ್ ರಾಜ್‍ಕುಮಾರ್​ಗೆ ದರ್ಶನ್ ಸಹೋದರ ದಿನಕರ್ ತೂಗುದೀಪ್ ಸಿನಿಮಾ ನಿರ್ದೇಶನ ಮಾಡ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಪುನೀತ್ ರಾಜ್‍ಕುಮಾರ್ ಈ ಬಗ್ಗೆ ಎಲ್ಲೂ ಬಹಿರಂಗ ಮಾಡಿರಲಿಲ್ಲ. ಈಗ ಅಧಿಕೃತವಾಗಿ ಪವರ್ ಸ್ಟಾರ್ ಮುಂದಿನ ಚಿತ್ರಕ್ಕೆ ದಿನಕರ್ ತೂಗುದೀಪ್ ಆಕ್ಷನ್ ಕಟ್ ಹೇಳೋದು ಪಕ್ಕಾ ಆಗಿದೆ‌.

Punith Rajkuma
ಪುನೀತ್​ ರಾಜ್​ಕುಮಾರ್
author img

By

Published : Mar 12, 2021, 7:49 PM IST

ಕನ್ನಡ ಚಿತ್ರರಂಗದಲ್ಲಿ ಹೈ ಪ್ರೊಫೈಲ್​ ಹೀರೋ ಅಂತಾ ಕರೆಸಿಕೊಂಡಿರುವ ನಟ ಪುನೀತ್ ರಾಜ್‍ಕುಮಾರ್​ ಸದ್ಯ ಯುವರತ್ನ ಸಿನಿಮಾದ ರಿಲೀಸ್ ಪ್ಲಾನ್​ನಲ್ಲಿ ಇರುವಾಗಲೇ ಪವರ್ ಸ್ಟಾರ್ ಮತ್ತೊಂದು ಹೊಸ ಸಿನಿಮಾಕ್ಕೆ ಗ್ರೀನ್​ ಸಿಗ್ನಲ್ ಕೊಟ್ಟಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಕೆಲ ದಿನಗಳ ಹಿಂದೆ ಪುನೀತ್ ರಾಜ್‍ಕುಮಾರ್​ಗೆ ದರ್ಶನ್ ಸಹೋದರ ದಿನಕರ್ ತೂಗುದೀಪ್ ಸಿನಿಮಾ ನಿರ್ದೇಶನ ಮಾಡ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಪುನೀತ್ ರಾಜ್‍ಕುಮಾರ್ ಈ ಬಗ್ಗೆ ಎಲ್ಲೂ ಬಹಿರಂಗ ಮಾಡಿರಲಿಲ್ಲ. ಈಗ ಅಧಿಕೃತವಾಗಿ ಪವರ್ ಸ್ಟಾರ್ ಮುಂದಿನ ಚಿತ್ರಕ್ಕೆ ದಿನಕರ್ ತೂಗುದೀಪ್ ಆ್ಯಕ್ಷನ್ ಕಟ್ ಹೇಳೋದು ಪಕ್ಕಾ ಆಗಿದೆ‌.

Punith Rajkumar
ಅಪ್ಪು ಜೊತೆ ದಿನಕರ್​ ತೂಗುದೀಪ್​

ಜೊತೆ ಜೊತೆಯಲಿ, ನವಗ್ರಹ, ಸಾರಥಿ, ಲೈಫ್ ಜೊತೆ ಒಂದ್ ಸೆಲ್ಫಿ ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ದಿನಕರ್ ತೂಗುದೀಪ್​ಗೆ ಇದೀಗ​ ಪವರ್ ಸ್ಟಾರ್ ಚಿತ್ರಕ್ಕೆ ನಿರ್ದೇಶನ ಮಾಡುವ ಅವಕಾಶ ಸಿಕ್ಕಿದೆ. ಈ ಸಿನಿಮಾವನ್ನು ಜಯಣ್ಣ ಭೊಗೇಂದ್ರ ಹಣ ಹಾಕುತ್ತಿದ್ದು, ಅಧಿಕೃತವಾಗಿ ಪುನೀತ್ ರಾಜ್‍ಕುಮಾರ್ ಜೊತೆ ನಿರ್ದೇಶಕ ದಿನಕರ್ ತೂಗುದೀಪ್, ನಿರ್ಮಾಪಕರಾದ ಜಯಣ್ಣ, ಭೋಗೇಂದ್ರ ಕಾಣಿಸಿಕೊಂಡಿರುವ ಫೋಟೋ ಈಗ ರಿವೀಲ್ ಆಗಿದೆ‌.

ದಿನಕರ್ ತೂಗುದೀಪ್ ಲಾಕ್‌ಡೌನ್ ಅವಧಿಯಲ್ಲಿ ಚಿತ್ರಕತೆಯೊಂದನ್ನು ರಚಿಸಿದ್ದು, ಆ ಚಿತ್ರಕತೆಗೆ ಪುನೀತ್ ರಾಜ್‍ಕುಮಾರ್ ಹೀರೋ ಆಗಲಿದ್ದಾರೆ. ಈ ಸಿನಿಮಾದ ಕಥೆ ಏನು? ಈ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಪಾತ್ರ ಏನು ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.