ETV Bharat / sitara

'ರಂಗನಾಯಕಿ' ಕಾದಂಬರಿ, ಟೀಸರ್​​​​ ಬಿಡುಗಡೆ ಮಾಡಿದ ಡಿಐಜಿ ರೂಪ

ದಯಾಳ್ ಪದ್ಮನಾಭನ್ ನಿರ್ದೇಶನದ 'ರಂಗನಾಯಕಿ' ಕಾದಂಬರಿ ಹಾಗೂ ಸಿನಿಮಾದ ಮೊದಲ ಟೀಸರನ್ನು ಇಂದು ಡಿಐಜಿ ರೂಪ ಬೆಂಗಳೂರಲ್ಲಿ ಲಾಂಚ್ ಮಾಡಿದ್ದಾರೆ. ನಾಳೆಯಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ಆಗಸ್ಟ್​​ನಲ್ಲೇ ಚಿತ್ರ ಬಿಡುಗಡೆಗೆ ದಯಾಳ್ ಪ್ಲಾನ್ ಮಾಡಿದ್ದಾರೆ.

'ರಂಗನಾಯಕಿ' ಕಾದಂಬರಿ, ಟೀಸರ್ ಬಿಡುಗಡೆ
author img

By

Published : Apr 27, 2019, 12:08 AM IST

ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಆರತಿ ಅಭಿನಯಿಸಿದ್ದ 'ರಂಗನಾಯಕಿ' ಸಿನಿಮಾ ಇಂದಿಗೂ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಇದೀಗ ಇದೇ ಹೆಸರಿನ ಸಿನಿಮಾವನ್ನು ನಿರ್ದೇಶಕ ದಯಾಳ್ ಪದ್ಮನಾಭನ್ ನಿರ್ದೇಶಿಸುತ್ತಿದ್ದಾರೆ.

ಇಂದು ದಯಾಳ್ ಅವರ ಕಥೆ ಹೊಂದಿರುವ 'ರಂಗನಾಯಕಿ' ಕಾದಂಬರಿ ಬಿಡುಗಡೆ ಹಾಗೂ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ಜೊತೆಗೆ ಚಿತ್ರದ ಮೊದಲ ಟೀಸರನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ನಗರದ ಕಲಾವಿದರ ಸಂಘದಲ್ಲಿ ನಡೆದ 'ರಂಗನಾಯಕಿ' ಚಿತ್ರದ ಲಾಂಚ್ ಹಾಗೂ ಮೊದಲ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಡೈನಾಮಿಕ್ ಲೇಡಿ, ಡಿಐಜಿ ರೂಪ ಆಗಮಿಸಿದ್ದರು. 'ರಂಗನಾಯಕಿ' ಕಿರು ಕಾದಂಬರಿ ಹಾಗೂ ಚಿತ್ರದ ಫಸ್ಟ್ ಲುಕ್ ಲಾಂಚ್ ಮಾಡಿದ ರೂಪ ಚಿತ್ರತಂಡಕ್ಕೆ ವಿಶ್ ಮಾಡಿದರು.

'ರಂಗನಾಯಕಿ' ಕಾದಂಬರಿ, ಟೀಸರ್ ಬಿಡುಗಡೆ

ನಂತರ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬಹಳ ಕಡಿಮೆಯಾಗುತ್ತಿವೆ. ಇಂತಹ ಸಮಯದಲ್ಲಿ ನಿರ್ದೇಶಕ ದಯಾಳ್ ಮಹಿಳಾ ಪ್ರಧಾನ 'ರಂಗನಾಯಕಿ' ಚಿತ್ರವನ್ನು ಮಾಡುತ್ತಿರುವುದು ಖುಷಿಯ ವಿಚಾರ. ನಾನು 5 ವರ್ಷದವಳಾಗಿದ್ದಾಗ ಪುಟ್ಟಣ್ಣ ಕಣಗಾಲ್ ಅವರ 'ರಂಗನಾಯಕಿ' ಚಿತ್ರವನ್ನು ಅಪ್ಪ-ಅಮ್ಮನ ಜೊತೆ ಚಿತ್ರಮಂದಿರಕ್ಕೆ ಹೋಗಿ ನೋಡಿದ್ದೆ ಎಂದು ಹಳೆಯ ನೆನಪು ಮೆಲುಕು ಹಾಕಿದರು.

ಈ ಸಿನಿಮಾ ದಯಾಳ್ ನಿರ್ದೇಶನದ 17 ನೇ ಚಿತ್ರವಾಗಿದೆ. ಬರೋಬ್ಬರಿ ಏಳು ವರ್ಷಗಳಿಂದ ಚಿತ್ರಕಥೆಯನ್ನು ರೆಡಿ ಮಾಡಿದ್ದು 'ರಂಗನಾಯಕಿ' ಎಂಬ ಕಿರು ಕಾದಂಬರಿಯನ್ನೂ ಸಹ ಬರೆದು ಈಗ ಅದೇ ಕಾದಂಬರಿಯನ್ನು ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಈ ಕಾದಂಬರಿಗೆ 2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣವೇ ಸ್ಫೂರ್ತಿಯಾಗಿದ್ದು, ಒಂದು ಹೆಣ್ಣಿನ ಮೇಲೆ ಆಕಸ್ಮಿಕವಾಗಿ ಅತ್ಯಾಚಾರವಾದರೆ ಆ ಹೆಣ್ಣು ಈ ಸಮಾಜವನ್ನು ಯಾವ ರೀತಿ ಎದುರಿಸಬೇಕು, ಅಂತಹ ಹೆಣ್ಣನ್ನು ನಮ್ಮ ಸಮಾಜ ಯಾವ ರೀತಿ ನೋಡುತ್ತದೆ ಎಂಬುದರ ಸುತ್ತ ಚಿತ್ರದ ಕಥೆ ಹೆಣೆದಿರುವುದಾಗಿ ದಯಾಳ್ ಪದ್ಮನಾಭನ್ ತಿಳಿಸಿದರು.

ಚಿತ್ರದಲ್ಲಿ ರಂಗನಾಯಕಿಯಾಗಿ ಅಧಿತಿ ಪ್ರಭುದೇವ ನಟಿಸುತ್ತಿದ್ದು, ನಾನು ಒಬ್ಬ ಪರಿಪೂರ್ಣ ನಟಿ ಎಂಬುದನ್ನು ಪ್ರೂವ್​​​​​ ಮಾಡಲು ನನಗೆ ಈ ಚಿತ್ರ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು. ಚಿತ್ರದಲ್ಲಿ ಇಬ್ಬರು ನಾಯಕರಿದ್ದು, ಬೀರ್​​​ಬಲ್ ಖ್ಯಾತಿಯ ನಟ, ನಿರ್ದೇಶಕ ಶ್ರೀನಿ ಹಾಗೂ ಕಿರುತೆರೆಯ ನಟ ತ್ರಿವಿಕ್ರಮ್ ನಟಿಸಿದ್ದಾರೆ. ಬಿಗ್​​​​​​​​​ಬಾಸ್ ಖ್ಯಾತಿಯ ಲಾಸ್ಯ ಕೂಡಾ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ನಾಳೆಯಿಂದ ಚಿತ್ರದ ಶೂಟಿಂಗ್ ಆರಂಭವಾಗುತ್ತಿದೆ. 30 ದಿನಗಳಲ್ಲಿ ಶೂಟಿಂಗ್ ಮುಗಿಸಲು ದಯಾಳ್ ಪ್ಲಾನ್ ಮಾಡಿದ್ದಾರೆ. ಇನ್ನು ಈ ಚಿತ್ರವನ್ನು 'ತ್ರಯಂಬಕಂ' ಚಿತ್ರ ನಿರ್ಮಿಸಿದ್ದ ಎಸ್​​​​.ವಿ. ನಾರಾಯಣ್ ನಿರ್ಮಿಸುತ್ತಿದ್ದಾರೆ. ಆಗಸ್ಟ್​​​ನಲ್ಲೇ ಸಿನಿಮಾ ಬಿಡುಗಡೆ ಮಾಡಲು ದಯಾಳ್ ತಯಾರಿ ಮಾಡಿಕೊಂಡಿದ್ದಾರೆ.

Intro:ಕನ್ನಡ ನಾಡಿನ ರಸಿಕರ ಮನವ ಸೂರೆಗೊಳಿಸಿದ್ದ ನಾಯಕಿ ಅಂದ್ರೆ ನಮಗೆ ಥಟ್ ಅಂತ ನೆನಪಾಗೋದು " ರಂಗನಾಯಕಿ" ಸಿನಿಮಾ.ಇನ್ನೂ ಈ ಸಿನಿಮಾವನ್ನು ಚಿತ್ರ ಬ್ರಹ್ಮ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶನ ಮಾಡಿದ್ರು.ಹಾಗೂ " "ರಂಗನಾಯಕಿ" ಪಾತ್ರದಲ್ಲಿ ಆರತಿ ನಟಿಸಿದ್ದರು.ಇನ್ನೂ ಚಿತ್ರ ಬಿಡುಗಡೆಯಾಗಿ ೩೮ ವರ್ಷಗಳಾದ್ರು ಸಹ ಸಿನಿಪ್ರಿಯರ ಮನಸ್ಸಿನಲ್ಲಿ ಹಚ್ಚಹಸಿರಾಗಿದೆ.ಇಗೀರುವಾಗಲೇ ಮತ್ತೆ" ರಂಗನಾಯಕಿ" ಟೈಟಲ್ ಅನ್ನು ಬಳಸಿ ಸಿನಿಮಾ ಮಾಡಲು ನಿರ್ದೇಶಕ ದಯಾಳ್ ಪದ್ಮನಾಭನ್ ರೆಡಿಯಾಗಿದ್ದು ಇಂದು ಚಿತ್ರವು ಲಾಂಚ್ ಆಗಿದೆ.ಅಲ್ಲದೆ ಚಿತ್ರದ ಮೊದಲ‌ ಟೀಸರ್ ಅನ್ನು ಚಿತ್ರತಂಡ ಲಾಂಚ್ ಮಾಡಿತು.ಎಸ್ ನಗರದ ಕಲಾವಿದರ ಸಂಘದಲ್ಲಿ ನಡೆದ " ರಂಗನಾಯಕಿ" ಚಿತ್ರದ ಲಾಂಚ್ ಹಾಗೂ ಫಸ್ಟ್ ಟೀಸರ್ ಕಾರ್ಯಕ್ರಮಕ್ಕೆ ಡೈನಾಮಿಕ್ ಲೇಡಿ ಪೊಲೀಸ್ ಆಫೀಸರ್ ಡಿಐಜಿ ರೂಪ ಅವರು ಆಗಮಿಸಿ ರಂಗನಾಯಕಿ ಕಿರು ಕಾದಂಬರಿ ಹಾಗೂ ಚಿತ್ರದ ಫಸ್ಟ್ ಲುಕ್ ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ರು.ಅಲ್ಲದೆ ಇತ್ತೀಚಿನ ದಿನಗಳಲ್ಲಿ ಮಹಿಳಾ ಪ್ರಧಾನ ಚಿತ್ರಗಳು ತುಂಭಾ ಕಡಿಮೆಯಾಗುತಿವೆ.ಇಂತಹ ಸಮಯದಲ್ಲಿ ನಿರ್ದೇಶಕ ದಯಾಳ್ ಅವರು ಮಹಿಳಾ ಪ್ರಧಾನ "ರಂಗನಾಯಕಿ" ಚಿತ್ರವನ್ನು ಮಾಡುತ್ತಿರುವು ಖುಷಿಯ ವಿಚಾರ ಅಲ್ಲದೆ ನಾನು ಪುಟ್ಟಣ ಅವರ ರಂಗನಾಯಕಿ ಚಿತ್ರವನ್ನು ಐದು ವರ್ಷದವಳಾಗಿದ್ದಾಗ ಅಪ್ಪ ಅಮ್ಮನ ಜೊತೆ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿದ್ದೆ ಎಂದು ಹಳೆಯ ನೆನೆಪು ಮೆಲುಕು ಹಾಕುವುದರೊಂದಿಗೆ ಚಿತ್ರತಂಡಕ್ಕೆ ಶುಭಹಾರೈಸಿದ್ರು.

Body:ಇನ್ನೂ " ರಂಗನಾಯಕಿ " ಸಿನಿಮಾ ದಯಾಳ್ ನಿರ್ದೇಶನದ ೧೭ ನೇ ಚಿತ್ರವಾಗಿದ್ದು.ಬರೋಬರಿ ಏಳು ವರ್ಷಗಳಿಂದ ಚಿತ್ರಕಥೆಯನ್ನು ರೆಡಿಮಾಡಿದ್ದು.ರಂಗನಾಯಕಿ ಎಂಬ ಕಿರು ಕಾದಂಬರಿಯನ್ನು ಸಹ ಬರೆದು ಈಗ ಅದೇ ಕಾಧಂಬರಿಯನ್ನು ಸಿನಿಮಾ ಮಾಡಲು ರೆಡಿಯಾಗಿದ್ದಾರೆ.ಇನ್ನೂ ಈ ಕಾದಂಬರಿಗೆ ೨೦೧೨ ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣವೇ ಸ್ಪೂರ್ತಿಯಾಗಿದ್ದು ಒಂದು ಹೆಣ್ಣಿನ ಮೇಲೆ ಆಕಸ್ಮಿಕವಾಗಿ ಅತ್ಯಾಚಾರ ವಾದರೇ ಆ ಹೆಣ್ಣು ಈ ಸಮಾಜವನ್ನು ಯಾವ ರೀತಿ ಎದುರಿಸ ಬೇಕು.ಹಾಗೂ ಅಂತಹ ಹೆಣ್ಣನ್ನು ನಮ್ಮ ಸಮಾಜ ಯಾವರೀತಿ ನೋಡುತ್ತದೆ ಎಂಬುದರ ಸುತ್ತ ಚಿತ್ರದ ಕಥೆ ಹೆಣೆದಿರುವುದಾಗಿ ನಿರ್ದೇಶಕ ದಯಾಳ್ ಪದ್ಮನಾಭನ್ ತಿಳಿಸಿದ್ರು.ಅಲ್ಲದೆ ಚಿತ್ರದ ಕಥೆಗಾಗಿ ನಿರ್ಭಯ ಪ್ರಕರಣದಿಂದ ಕಾನೂನಿನಲ್ಲಿ ಕೆಲವು ಬದಲಾವಣೆ ಮಾಡಲಾಯಿತು.ಆ ೪೧ ಪುಟಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಚಿತ್ರದ ಕಥೆ ಮಾಡಿರುವುದಾಗಿ ದಯಾಳ್ ತಿಳಿಸಿದ್ರು.

Conclusion:ಇನ್ನೂ ಚಿತ್ರದಲ್ಲಿ ರಂಗನಾಯಕಿಯಾಗಿ ಅದಿತಿ ಪ್ರಭುದೇವ್ ನಟಿಸ್ತಿದ್ದು.ನಾನು ಒಬ್ಬ ಪರಿಪೂರ್ಣ ನಟಿ ಎಂಬುದನ್ನು ಪ್ರೂ ಮಾಡಲು ನನಗೆ ಈ ಚಿತ್ರ ಉತ್ತಮ ವೇದಿಕೆಯಾಗಿದೆ.ಅಲ್ಲದೆ ಚಿತ್ರದಲ್ಲು ಅತ್ಯಾಚಾರಕ್ಕೆ ಒಳಗಾದ ಹುಡುಗಿ ಪಾತ್ರದಲ್ಲಿ ನಾನು ನಟಿಸ್ತಿರುವುದಾಗಿ ಅದಿತಿ ತಿಳಿಸಿದ್ರು.ಇನ್ನೂ ಚಿತ್ರದಲ್ಲಿ ಇಬ್ಬರು ನಾಯಕರಿದ್ದು ಬೀರ್ ಬಲ್ ಖ್ಯಾತಿಯ ನಟ ನಿರ್ದೇಶಕ ಶ್ರೀನಿ ಹಾಗೂ ಕಿರುತೆರೆಯ ನಟ ತ್ರಿವಿಕ್ರಮ್ "ರಂಗನಾಯಕಿ " ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡ್ತಿದ್ದಾರೆ.ಇನ್ನೂ ಚಿತ್ರದ ಕಥೆಯೂ ಅದ್ಬುತವಾಗಿ ಮೂಡಿಬಂದಿದದೆ ಆ ಕಾರಣಕ್ಕೆ ಚಿತ್ರದಲ್ಲಿ ನಟಿಸಕು ಗ್ರೀನ್ ಸಿಗ್ನಲ್ ಕೊಟ್ಟೆ ಎಂದು ಶ್ರೀನಿ ತಿಳಿಸಿದ್ರು.ಅಲ್ಲದೆ ಕಿರುತೆರೆಯಲ್ಲಿ ಸಕ್ಸಸ್ ಕಂಡಿದ್ದು ಬಿಗ್ ಸ್ಕ್ರೀನ್ ಗೆ ಎಂಟ್ರಿಕೊಡಲು ಉತ್ತಮ ವೇದಿಕೆಗಾಗಿ ಕಾಯ್ತಿದ್ದೆ ಸೋ ನನಗೆ ಈ ಚಿತ್ರ ಉತ್ತಮ ವೇದಿಕೆ ಎನಿಸಿತು ಅದಕ್ಕಾಗಿ ರಂಗನಾಯಕಿ ಚಿತ್ರದಲ್ಲಿ ಬಣ್ಣ ಹಚ್ಚುತಿದ್ದು ಒಬ್ಬ ಶಿಕ್ಷಕನ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸ್ತಿರುವುದಾಗಿ ತ್ರಿವಿಕ್ರಮ್ ತಿಳಿಸಿದ್ರು. ಇನ್ನೂ ರಂಗನಾಯಕಿ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಲಾಸ್ಯ ವಿಶೇಷ ಪಾತ್ರದಲ್ಲಿ ಕಾಣಿಸ್ತಿದ್ದು, ನಾಳೆಯಿಂದ ಚಿತ್ರದ ಶೂಟಿಂಗ್ ಸ್ಟಾರ್ಟ್ ಆಗ್ತಿದ್ದು ಮೂವತ್ತು ದಿನಗಳಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಲು ದಯಾಳ್ ಪ್ಲಾನ್ ಮಾಡಿದ್ದಾರೆ. ಇನ್ನೂ ಈ ಚಿತ್ರವನ್ನು ತ್ರಯಂಬಕ ಚಿತ್ರ ನಿರ್ಮಾಣ ಮಾಡಿದ್ದ ಎಸ್ ವಿ ನಾರಾಯಣ್ ನಿರ್ಮಾಣ ಮಾಡ್ತಿದ್ದಾರೆ.ಇನ್ನೂ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನವಿದ್ರೆ. ಎಂದಿನಂತೆ ನವೀನ್ ಕೃಷ್ಣ ಸಂಭಾಷಣೆ ಚಿತ್ರಕ್ಕಿದ್ದೂ ಆಗಸ್ಟ್ ನಲ್ಲಿ ಸಿನಿಮಾ ಬಿಡುಗಡೆ ಮಾಡಲು ದಯಾಳ್ ತಯಾರಿ ಮಾಡಿಕೊಂಡೆ ಅಖಾಡಕ್ಕೆ ಧುಮುಕಿದ್ದಾರೆ. ಸತೀಶ ಎಂಬಿ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.