ಬಾಲಿವುಡ್ನಲ್ಲಿ ವರುಣ್ ಧವನ್-ನತಾಶ ದಲಾಲ್, ಪ್ರಿಯಾಂಕಾ ಶರ್ಮಾ-ಶಾಜಾ ಮೊರಾನಿ ಮದುವೆ ನಂತ್ರ ಮತ್ತೊಂದು ಗಟ್ಟಿಮೇಳದ ಸದ್ದು ಮೊಳಗಲಿದೆ. ಅರೇ.. ಯಾರಿದು ಮತ್ತೊಂದು ಜೋಡಿ ಅಂದ್ರಾ..? ಅವರೇ ನಟಿ ದಿಯಾ ಮಿರ್ಜಾ ಮತ್ತು ಬಿಸಿನೆಸ್ ಮ್ಯಾನ್ ವೈಭವ್ ರೇಖಿ.
- " class="align-text-top noRightClick twitterSection" data="
">
ಇದೇ ಫೆ. 15ರಂದು ಈ ಜೋಡಿಯ ಮದುವೆಯಾಗುತ್ತಿದ್ದು, ಕೇವಲ ಆಪ್ತರು ಮತ್ತು ಕುಟುಂಬದವರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರಂತೆ. ಈ ಇಬ್ಬರ ಮದುವೆ ಬಗ್ಗೆ ಈಗಗಲೇ ಹಲವು ರೂಮರ್ಗಳು ಹರಿದಾಡುತ್ತಿವೆ. ಆದ್ರೆ ತಮ್ಮ ಮದುವೆ ಬಗ್ಗೆ ನಟಿಯಾಗಲಿ, ವೈಭವ್ ಆಗಲಿ ಅಧಿಕೃತವಾಗಿ ಹೇಳಿಕೊಂಡಿಲ್ಲ.
- " class="align-text-top noRightClick twitterSection" data="
">
ಈ ಹಿಂದೆ ದಿಯಾ, ಸಾಹಿಲ್ ಸಂಘ ಎಂಬುವವರನ್ನು ಮದವೆಯಾಗಿದ್ದರು. 2014ರಲ್ಲಿ ಮದುವೆಯಾಗಿದ್ದು, ಕಳೆದ 2019ರಲ್ಲಿ ಬೇರ್ಪಟ್ಟಿದ್ದಾರೆ. ಇತ್ತ ವೈಭವ್ ಕೂಡ ಯೋಗ ಶಿಕ್ಷಕಿಯಾದ ಸುನೈನಾ ರೇಖಿ ಎಂಬುವವರನ್ನು ಮದುವೆಯಾಗಿದ್ದು, ಈ ದಂಪತಿಗೆ ಮಗಳಿದ್ದಾಳೆ.
ದಿನಾ ತಮ್ಮ ಮುಂದಿನ ತೆಲುಗು ಸಿನಿಮಾದಲ್ಲಿ ನಾಗಾರ್ಜುನ್ ಜೊತೆ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರಕ್ಕೆ ಅಹಿಶೋರ್ ಸೊಲೊಮನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.