ETV Bharat / sitara

ಅಲ್ಲಿ ಆಗದಿರುವ ಸಮಸ್ಯೆ ಇಲ್ಲಿ ಏಕೆ....ಧ್ರುವ ಸರ್ಜಾ

ಮೂರು ಭಾಷೆಗಳಲ್ಲಿ 'ಪೊಗರು' ಸಿನಿಮಾ ಬಿಡುಗಡೆಯಾಗಿದ್ದು ಬೇರೆ ಭಾಷೆಗಳಲ್ಲಿ ಆಗದ ಸಮಸ್ಯೆ ಇಲ್ಲಿ ಏಕೆ ಆಗುತ್ತಿದೆ ಎಂದು ಧ್ರುವ ಪ್ರಶ್ನಿಸಿದ್ದಾರೆ. ಬೇರೆ ಭಾಷೆಗಳಲ್ಲಿ ಈ ರೀತಿ ಸಮಸ್ಯೆ ಆಗದಿರುವುದು ಸಂತೋಷ. ಮುಂದೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಆ ಭಾಷೆಗಳಲ್ಲಿ ಕೂಡಾ ಎಡಿಟ್ ಮಾಡಲಾಗುತ್ತಿದೆ ಎಂದು ಧ್ರುವ ಹೇಳಿದ್ದಾರೆ.

Dhuva sarja
ಧ್ರುವ ಸರ್ಜಾ
author img

By

Published : Feb 26, 2021, 12:24 PM IST

ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವುದಲ್ಲದೆ, ಆ ದೃಶ್ಯಗಳಿಗೆ ಕತ್ತರಿ ಕೂಡಾ ಹಾಕಲಾಗಿದೆ. ಎಡಿಟ್ ಮಾಡಿರುವುದರಿಂದ ಸುಮಾರು 8 ನಿಮಿಷ ಅವಧಿ ಕಡಿಮೆಯಾಗಿದೆ. ಇನ್ಮುಂದೆ ಚಿತ್ರದಲ್ಲಿ ಹೊಸ ದೃಶ್ಯಗಳನ್ನು ನೋಡಬಹುದಾಗಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಧ್ರುವ ಬೇಸರ ವ್ಯಕ್ತಪಡಿಸಿದ್ದಾರೆ.

"ಸಿನಿಮಾ ಮಾಡುವುದು ಪ್ರೇಕ್ಷಕರಿಗಾಗಿ, ಅವರಿಗೆ ನಮ್ಮ ಚಿತ್ರದಿಂದ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ನಿನ್ನೆ ಪ್ರೆಸ್​​ಮೀಟ್​​ನಲ್ಲಿ ಧ್ರುವ ಕ್ಷಮೆ ಕೇಳಿದ್ದರು. ಆದರೆ ಇದೇ ಸಿನಿಮಾ ಬೇರೆ ಭಾಷೆಗಳಲ್ಲಿ ಕೂಡಾ ಬಿಡುಗಡೆಯಾಗಿದೆ. ಅಲ್ಲಿ ಆಗದಿರುವ ಸಮಸ್ಯೆ ಇಲ್ಲೇಕೆ ಆಗಿದೆ ಎಂದು ಧ್ರುವ ಪ್ರಶ್ನಿಸಿದ್ದಾರೆ. ಚಿತ್ರದಲ್ಲಿ ಯಾರಿಗೂ ಉದ್ದೇಶಪೂರ್ವಕವಾಗಿ ನೋವು ಮಾಡಿಲ್ಲ. ಚಿತ್ರದ ಕಥೆ ಇರುವುದು 'ಮಾನವ ವರ್ಸಸ್ ದಾನವ' ಎಂಬ ಕಾನ್ಸೆಪ್ಟ್ ಬಗ್ಗೆ. ನಾನು ದಾನವನ ಪಾತ್ರ ಮಾಡಿದ್ದೇನೆ. ಅದಕ್ಕೆ ತಕ್ಕಂತೆ ಚಿತ್ರದಲ್ಲಿ ದೃಶ್ಯಗಳಿದ್ದವು. ಇದರಿಂದ ಕೆಲವರಿಗೆ ನೋವಾಗಿರಬಹುದು. ಅದನ್ನು ಹೇಳಿದ್ದರೆ ನಾವು ತೆಗೆಯುತ್ತಿದ್ದೆವು. ಇಷ್ಟು ಗಲಾಟೆ ಮಾಡುವ ಅವಶ್ಯಕತೆ ಇರಲಿಲ್ಲ".

ಇದನ್ನೂ ಓದಿ: ಮೊದಲ ಬಾರಿಗೆ ಮಾಲಿವುಡ್​​ಗೆ ಹಾರಿದ ಶಾನ್ವಿ...ನಾಯಕ ಯಾರು ಗೊತ್ತಾ...?

"ಬೇಡಿಕೆಯಂತೆ ನಾವು ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದಿದ್ದೇವೆ. ನಾನು ನಿಮ್ಮ ಮನೆ ಮಗ ಇದ್ದಂತೆ, ನನ್ನಿಂದ ನೋವಾಗಿದ್ದರೆ ತಪ್ಪನ್ನು ಹೊಟ್ಟೆಗೆ ಹಾಕಿಕೊಂಡು ಕ್ಷಮಿಸಿ" ಎಂದು ಧ್ರುವ ಕ್ಷಮೆ ಕೇಳಿದ್ದಾರೆ. ಇನ್ನು ಕನ್ನಡದಲ್ಲಿ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದಿರುವಂತೆ ತೆಲುಗು ಮತ್ತು ತಮಿಳಿನಲ್ಲೂ ತೆಗೆಯಲಾಗುವುದಾ ಎಂಬ ಪ್ರಶ್ನೆ ಸಹಜವೇ. ಈ ಪ್ರಶ್ನೆಯನ್ನು ಧ್ರುವ ಮುಂದಿಟ್ಟರೆ, "ನಮ್ಮಲ್ಲಿ ಆಗಿರುವ ಸಮಸ್ಯೆ ಬೇರೆ ಭಾಷೆಗಳಲ್ಲಿ ಆಗಿಲ್ಲ ಎನ್ನುವುದು ಬಹಳ ಸಂತೋಷ. ಮುಂದೆ ಅಲ್ಲೂ ತೊಂದರೆ ಆಗಬಾರದು ಎಂಬ ಕಾರಣಕ್ಕೆ ತೆಲುಗು, ತಮಿಳಿನಲ್ಲೂ ಆ ದೃಶ್ಯಗಳನ್ನು ಎಡಿಟ್ ಮಾಡುತ್ತಿದ್ದೇವೆ" ಎನ್ನುತ್ತಾರೆ ಧ್ರುವ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.