ETV Bharat / sitara

ಮೂರು ವರ್ಷಗಳ ನಂತ್ರ ತೆರೆ ಮೇಲೆ ಧ್ರುವ... ನಾಳೆ 'ಪೊಗರು' ಹವಾ ಶುರು

author img

By

Published : Feb 18, 2021, 7:25 PM IST

ನಾಳೆ 800ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆ ಆಗುತ್ತಿರುವ 'ಪೊಗರು' ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಮೂರು ವರ್ಷಗಳ ನಂತ್ರ ನಾಳೆ ತೆರೆ ಮೇಲೆ 'ಪೊಗರು' ಧ್ರುವ

ಭರ್ಜರಿ ಸಿನಿಮಾ ಬಳಿಕ ಧ್ರುವ ಸರ್ಜಾ, ಬರೋಬ್ಬರಿ ಮೂರು ವರ್ಷಗಳ ನಂತರ ಸಿಲ್ವರ್ ಸ್ಕ್ರೀನ್ ಮೇಲೆ ಪೊಗರು ಸಿನಿಮಾ ಮೂಲಕ ಮಿಂಚೋದಕ್ಕೆ ರೆಡಿಯಾಗಿದ್ದಾರೆ‌. ನಾಳೆ 800ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆ ಆಗುತ್ತಿರುವ 'ಪೊಗರು' ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಇನ್ನು ಧ್ರುವ ಸರ್ಜಾ ಅಭಿಮಾನಿಗಳು, ಧ್ರುವನ ಸಿನಿಮಾ ನೋಡಿ ಮೂರು ವರ್ಷಗಳು ಆಗ್ತಾ ಇದೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ಔಟ್ ಅಂಟ್ ಔಟ್ ಮಾಸ್ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ‌. ನಾಳೆ ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಪೊಗರು ಸಿನಿಮಾ ಬೆಳಗ್ಗೆ 7 ಗಂಟೆಗೆ ಶೋ ಆರಂಭ ಆಗುತ್ತಿದ್ದು, 300 ಚಿತ್ರಮಂದಿಗಳಲ್ಲಿ ಮುಂಜಾನೆ ಶೋ ಆರಂಭ ಆಗುತ್ತಿದೆ. ಆ್ಯಕ್ಷನ್ ಜೊತೆಗೆ ಫ್ಯಾಮಿಲಿ‌ ಸೆಂಟಿಮೆಂಟ್ ಕಥೆಯನ್ನು ಪೊಗರು ಸಿನಿಮಾ ಒಳಗೊಂಡಿದೆ.

ಇದೇ ಮೊದಲ ಬಾರಿಗೆ ಧ್ರುವ ಸರ್ಜಾ ಜೊತೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್ ಮಾಡಿದ್ದಾರೆ. ಧ್ರುವ ಮತ್ತು ರಶ್ಮಿಕಾ ಮಂದಣ್ಣ ಅಲ್ಲದೇ ರಾಘವೇಂದ್ರ ರಾಜಕುಮಾರ್, ತಾರಾ ಅನುರಾಧ, ರವಿಶಂಕರ್, ಪವಿತ್ರ ಲೋಕೇಶ್, ಡಾಲಿ ಧನಂಜಯ, ಶಂಕರ್ ಅಶ್ವಥ್, ಗಿರಿಜಾ ಲೋಕೇಶ್, ಮಯೂರಿ, ತಬಲಾ ನಾಣಿ, ಚಿಕ್ಕಣ್ಣ, ಧರ್ಮ, ಕುರಿ ಪ್ರತಾಪ್, ಕರಿಸುಬ್ಬು ಮುಂತಾದವರಿದ್ದಾರೆ. ದಿವಂಗತ ಬುಲೆಟ್ ಪ್ರಕಾಶ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಶ್ರೀ ಜಗದ್ಗುರು ಮೂವೀಸ್ ಲಾಂಛನದಲ್ಲಿ ಬಿ.ಕೆ.ಗಂಗಾಧರ್ ನಿರ್ಮಿರುವ ಈ ಚಿತ್ರವನ್ನು ನಂದ ಕಿಶೋರ್ ನಿರ್ದೇಶಿಸಿದ್ದಾರೆ. ಅರುಣ್ ಬಾಲಾಜಿ ಕಥೆ ಬರೆದು, ಸಹ ನಿರ್ದೇಶನ ಮಾಡಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಹಿನ್ನೆಲೆ ಸಂಗೀತ ನೀಡಿದ್ದಾರೆ. ಅಲ್ಲದೆ ವಿಜಯ್ ಮಿಲ್ಟನ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮುರಳಿ,‌ ಹರ್ಷ ನೃತ್ಯ ನಿರ್ದೇಶನ, ಗಣೇಶ್, ಅನಲ್ ಅರಸು, ಜಾಲಿ ಬಾಸ್ಟಿನ್ ಸಾಹಸ‌ ನಿರ್ದೇಶನ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.