ಯಶಸ್ವಿ ನಿರ್ದೇಶಕ ನಂದಕಿಶೋರ್ ಕಳೆದ 2 ವರ್ಷಗಳಿಂದ ಧ್ರುವಾ ಸರ್ಜಾ ಅಭಿನಯದ 'ಪೊಗರು' ಸಿನಿಮಾದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2019 ಕೊನೆಯ ತಿಂಗಳು ಅಥವಾ 2020 ಸಂಕ್ರಾಂತಿ ವೇಳೆಗೆ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ಇದೀಗ ಆ ದಿನಾಂಕ ಕೂಡಾ ಬದಲಾಗಿದೆ.

ಈ ವರ್ಷ ಮಾರ್ಚ್ನಲ್ಲಿ 'ಪೊಗರು' ಸಿನಿಮಾ ಬಿಡುಗಡೆಗೆ ನಂದಕಿಶೋರ್ ಪ್ಲ್ಯಾನ್ ಮಾಡುತ್ತಿದ್ದಾರೆ. ಸಿನಿಮಾ ಶೂಟಿಂಗ್ ಮುಗಿಸಿ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. 'ಪೊಗರು' ಸಿನಿಮಾ ನಂತರ ನಂದಕಿಶೋರ್ ಹಾಗೂ ಧ್ರುವಾ ಮತ್ತೆ ಒಂದಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾ ಬಿಡುಗಡೆಯಾದ ನಂತರ ನಂದಕಿಶೋರ್ ಧ್ರುವಾ ಜೊತೆ ಮತ್ತೊಂದು ಸಿನಿಮಾ ನಿರ್ದೇಶನ ಮಾಡಲಿದ್ದು, ಈಗಾಗಲೇ ಧ್ರುವಾ ಕೂಡಾ ಕಾಲ್ಶೀಟ್ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಸಿನಿಮಾದ ಇತರ ತಾರಾಗಣ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
‘ಪೊಗರು’ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಕೂಡಾ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ರಾಘಣ್ಣ ಧ್ರುವಾ ಗುರುವಿನ ಪಾತ್ರ ಮಾಡಿದ್ದು ಒಂದು ರೀತಿಯಲ್ಲಿ 'ನಾಗರಹಾವು' ಸಿನಿಮಾದ ಚಾಮಯ್ಯ ಮೇಷ್ಟ್ರು ಹಾಗೂ ರಾಮಾಚಾರಿ ರೀತಿಯ ಸಂಬಂಧ ಎನ್ನಲಾಗಿದೆ. ಇನ್ನು ಈ ಚಿತ್ರಕ್ಕಾಗಿ ಧ್ರುವಾ ಬರೋಬ್ಬ ರಿ 40 ಕಿಲೋ ತೂಕ ಇಳಿಸಿಕೊಂಡಿದ್ದರು. ಮೊದಲು ಶಾಲಾ ಹುಡುಗನ ಹಾಗೆ ಬದಲಾಗಿ ನಂತರ ಮತ್ತೆ ವರ್ಕೌಟ್ ಮಾಡಿ ಬಾಡಿ ಬಿಲ್ಡರ್ ರೀತಿ ತೂಕ ಹೆಚ್ಚಿಸಿಕೊಂಡು ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ಗಳಾದ ಮೋರ್ಗನ್ ಆಸ್ತೆ, ಕೈಗ್ರೀನ್, ಜಾನ್ ಲುಕಾಶ್ ಅಂತಹ ಘಟಾನುಘಟಿಗಳ ಜೊತೆ ಸೆಣಸಾಡಿದ್ದಾರೆ. ಧ್ರುವಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.