ನಟ ಧ್ರುವ ಸರ್ಜಾ ಕಳೆದ ಎರಡು ವರ್ಷಗಳಿಂದ ಪೊಗರು ಸಿನಿಮಾಕ್ಕಾಗಿ ಉದ್ದ ಕೂದಲನ್ನು ಬಿಟ್ಟಿದ್ದು, ಆ ಕೂದಲಿಗೆ ಇಂದು ಕತ್ತರಿ ಬಿದ್ದಿದೆ.
ಹೌದು, ಪೊಗರು ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿರುವ ಹಿನ್ನೆಲೆಯಲ್ಲಿ ನಟ ಧ್ರುವ ಸರ್ಜಾ ಇಂದು ಹೇರ್ ಕಟ್ ಮಾಡಿಸಿದ್ದಾರೆ. ಅಲ್ಲದೆ ಕತ್ತರಿಸಿದ ತಮ್ಮ ಕೂದಲನ್ನು ಒಂದು ಮಹಾನ್ ಕಾರ್ಯಕ್ಕೆ ದಾನ ಮಾಡಿದ್ದಾರೆ.
ಹೇರ್ ಕಟ್ ಮಾಡಿಸಿಕೊಳ್ಳುವುದಕ್ಕಿಂತ ಮುಂಚೆ ಮಾತನಾಡಿರುವ ಧ್ರುವ ಸರ್ಜಾ, ತಮ್ಮ ಸ್ನೇಹಿತರ ಸಲಹೆ ಮೇರೆಗೆ ತಮ್ಮ ಕೂದಲನ್ನು ಕ್ಯಾನ್ಸರ್ ಪೀಡಿತರಾಗಿ ಕೂದಲು ಕಳೆದುಕೊಂಡ ಮಕ್ಕಳಿಗೆ ವಿಗ್ ಮಾಡಲು ದಾನ ಮಾಡಿರುವುದಾಗಿ ತಿಳಿಸಿದ್ರು.
ಹತ್ತು ಇಂಚು ಮೇಲಿರುವ ಕೂದಲನ್ನು ಕ್ಯಾನ್ಸರ್ನಿಂದ ಕೂದಲು ಕಳೆದುಕೊಂಡ ಮಕ್ಕಳಿಗೆ ದಾನ ಮಾಡಬಹುದು. ನಾನು ಮಾಡಿದ್ದೇನೆ, ನೀವೂ ಮಾಡಿ ಎಂದು ಪೊಗರು ನಟ ಧ್ರುವ ಸರ್ಜಾ ಕೇಳಿಕೊಂಡಿದ್ದಾರೆ.
ಅಂತೂ ತಮ್ಮ ನೆಚ್ಚಿನ ನಟ ಯಾವಾಗ ಹೇರ್ ಕಟ್ ಮಾಡಿಸುತ್ತಾರೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಇಂದು ಖುಷಿ ಸಿಕ್ಕಿದೆ.
- " class="align-text-top noRightClick twitterSection" data="
">