ಬಾಲಿವುಡ್ನಲ್ಲಿ 'ದಿಲ್ ಸೇ' ಎಂಬ ಸಿನಿಮಾ ಬಂದಿತ್ತು.ಇದೀಗ ಸ್ಯಾಂಡಲ್ವುಡ್ನಲ್ಲಿ ಕೂಡಾ ಅದೇ ಹೆಸರಿನ ಸಿನಿಮಾ ತಯಾರಾಗುತ್ತಿದೆ. 'ನವಗ್ರಹ' ಸಿನಿಮಾ ಖ್ಯಾತಿಯ ಚಾಕೋಲೆಟ್ ಹೀರೋ ಧರ್ಮ ಕೀರ್ತಿರಾಜ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರೊಮ್ಯಾಂಟಿಕ್ ಶೀರ್ಷಿಕೆ ಹೊಂದಿರುವ 'ದಿಲ್ ಸೇ' ಚಿತ್ರದ ಮುಹೂರ್ತ ಇಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು.
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಧರ್ಮಕೀರ್ತಿರಾಜ್ಗೆ ಸಾಥ್ ನೀಡಿದ್ದಾರೆ. 'ದಿಲ್ ಸೇ' ಚಿತ್ರದ ಮುಹೂರ್ತಕ್ಕೆ ಬಂದು ಕ್ಲಾಪ್ ಮಾಡುವ ಮೂಲಕ ಪುನೀತ್, ಕ್ಯಾಡ್ಬರಿ ಧರ್ಮ ಕೀರ್ತಿರಾಜ್ಗೆ ಸಪೋರ್ಟ್ ಮಾಡಿದ್ದಾರೆ. ನಂತರ ಮಾತನಾಡಿದ ಪವರ್ ಸ್ಟಾರ್, ಧರ್ಮ ಕೀರ್ತಿರಾಜ್ ಸಿನಿಮಾಗೆ ಒಳ್ಳೆದಾಗಲಿ ಎಂದು ಹಾರೈಸಿದರು. ಧರ್ಮ ಕೀರ್ತಿರಾಜ್ ಈ ಸಿನಿಮಾದಲ್ಲಿ ಮೂರು ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
![Dil se](https://etvbharatimages.akamaized.net/etvbharat/prod-images/5990318_dharma.jpg)
ಕನ್ನಡದಲ್ಲಿ ಹಲವಾರು ಚಿತ್ರಗಳಿಗೆ ಸಹ ನಿರ್ದೇಶಕನಾಗಿ, ಕೆಲಸ ಮಾಡಿರುವ ರಾಕ್ ಮಾದೇಶ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಸಂಪೂರ್ಣ ಲವ್ ಸ್ಟೋರಿಯಾಗಿದ್ದು ಧರ್ಮ ಕೀರ್ತಿರಾಜ್ಗೆ ಜೋಡಿಯಾಗಿ ತೆಲುಗಿನ ಶ್ರೀ ಪಲ್ಲವಿ ನಟಿಸಲಿದ್ದಾರೆ. ವಿ. ಮನೋಹರ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದು, ಕಿರಣ್ ಕುಮಾರ್ ಕೊಂಡ ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ. ಹರೀಶ್ ಮತ್ತು ರಾಮ್. ಕೆ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದು ಇದೇ ತಿಂಗಳು, ಬೆಂಗಳೂರು, ಮೈಸೂರು, ಮಲೆನಾಡಿನ ಭಾಗಗಳಲ್ಲಿ ಚಿತ್ರೀಕರಣ ಮಾಡಲು ನಿರ್ದೇಶಕ ರಾಕ್ ಮಾದೇಶ್ ಪ್ಲಾನ್ ಮಾಡಿದ್ದಾರೆ. ಉದ್ಯಮಿ ಶಿವಶರಣ್ ಗೌಡ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಈ ಚಿತ್ರ ಧರ್ಮ ಅವರಿಗೆ ಬ್ರೇಕ್ ನೀಡಲಿದೆಯಾ ಕಾದು ನೋಡಬೇಕು.