ETV Bharat / sitara

ರಾಜಕುಮಾರ್​ ಮೊಮ್ಮಗಳು ಧನ್ಯಾ ನಟಿಸಿರೋ 'ನಿನ್ನ ಸನಿಹಕೆ' ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್ - ಅಕ್ಟೋಬರ್​​ 8ಕ್ಕೆ ನಿನ್ನ ಸನಿಹಕೆ ಚಿತ್ರ ಬಿಡುಗಡೆ

ಸೂರಜ್‌ ಗೌಡ ಹಾಗೂ ಧನ್ಯಾ ರಾಮ್‌ ಕುಮಾರ್‌ ಅಭಿನಯದ 'ನಿನ್ನ ಸನಿಹಕೆ' ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 8ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್​ ಆಗಲಿದೆ.

Ninna sanihake movie release date fix
ನಿನ್ನ ಸನಿಹಕೆ' ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್
author img

By

Published : Sep 25, 2021, 7:54 PM IST

ಮದುವೆಯ ಮಮತೆಯ ಕರೆಯೋಲೆ ಚಿತ್ರದ ಖ್ಯಾತಿಯ ಸೂರಜ್ ಗೌಡ ನಟಿಸಿ, ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರ ಇದಾಗಿದೆ. ದೊಡ್ಮನೆಯ ಕುಡಿ ಧನ್ಯಾ ರಾಮ್​​​ ಕುಮಾರ್ ನಾಯಕಿಯಾಗಿ ನಟಿಸುತ್ತಿದ್ದು, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ರಘು ದೀಕ್ಷಿತ್‌ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ವಾಸುಕಿ ವೈಭವ್ ಸಾಹಿತ್ಯವಿದೆ. ಚಿತ್ರದ ಹಾಡುಗಳು ಈಗಾಗಲೇ ಕನ್ನಡ ಸಿನಿಪ್ರಿಯರ ಮನ ಸೆಳೆಯುತ್ತಿವೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಸಾಕಷ್ಟು ಖ್ಯಾತಿಗಳಿಸಿವೆ. ವಿಶೇಷವೆಂದರೆ ಲಾಕ್‌ ಡೌನ್‌ ಸಮಯದಲ್ಲಿ ಕವರ್‌ ಸಾಂಗ್ಸ್‌ ಮೂಲಕ ಈ ಚಿತ್ರದ ನೀ ಪರಿಚಯ ಎಂಬ ಹಾಡು ಸುದ್ದಿಯಾಗಿತ್ತು.

  • " class="align-text-top noRightClick twitterSection" data="">

ವೈಟ್ ಅಂಡ್ ಗ್ರೇ ಪಿಕ್ಚರ್ ಬ್ಯಾನರ್​​ನಡಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿದ್ದಾರೆ. ಸಾಕಷ್ಟು ವಿಶೇಷ ವಿಚಾರಗಳಿಂದ ಸುದ್ದಿ ಮಾಡ್ತಿರೋ ಈ ಚಿತ್ರ ಕೆಆರ್​​​ಜಿ‌ ಸ್ಟುಡಿಯೋಸ್ ವಿತರಣೆಯಲ್ಲಿ ಅಕ್ಟೋಬರ್ 8ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ಮೂಲಕ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನಗಳ ಭರ್ತಿಯ ನಂತರ ರಿಲೀಸ್​ ಆಗ್ತಿರೋ ಮೊದಲ ಸಿನಿಮಾವಾಗಿದೆ.

ಇದನ್ನೂ ಓದಿ: ‘ಸೇನಾಪುರ’ದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಸಿಂಗರ್​​ ಅನನ್ಯ ಭಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.