ETV Bharat / sitara

ಕಷ್ಟಕ್ಕೆ ಸ್ಪಂದಿಸಿದ ನಾಗಿಣಿ...ಕೊರೊನಾ ಪರಿಹಾರ ನಿಧಿಗೆ ಹಣಸಹಾಯ ಮಾಡಿದ ದೀಪಿಕಾ - Deepika das donated money to corona Relief Fund

'ನಾಗಿಣಿ' ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್ ಕೂಡಾ ಇದೀಗ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಮುಖ್ಯಮಂತ್ರಿ ಕೊರೊನಾ ಪರಿಹಾರ ನಿಧಿಗೆ ದೀಪಿಕಾ ದಾಸ್ 5 ಲಕ್ಷ ರೂಪಾಯಿ ಹಣವನ್ನು ನೀಡಲು ನಿರ್ಧರಿಸಿದ್ದಾರೆ. ಸದ್ಯದಲ್ಲೇ ಮುಖ್ಯಮಂತ್ರಿ ಬಿ.ಎಸ್​​​​. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಈ‌ 5 ಲಕ್ಷ ರೂಪಾಯಿ ಚೆಕ್​​​​​ ಹಸ್ತಾಂತರ ಮಾಡಲಿದ್ದಾರೆ.

Deepika das
ದೀಪಿಕಾ ದಾಸ್
author img

By

Published : Mar 31, 2020, 6:09 PM IST

ಇಡೀ ವಿಶ್ವವೇ ಕೊರೊನಾ ವೈರಸ್ ದಾಳಿಯಿಂದ ತತ್ತರಿಸುತ್ತಿದೆ. ಜನಸಾಮಾನ್ಯರು, ಸೆಲಬ್ರಿಟಿಗಳು ಕೆಲಸ ಬಿಟ್ಟು ಮನೆಯಲ್ಲೇ ಕುಳಿತಿದ್ದಾರೆ. ಇನ್ನು ದಿನಕೂಲಿ ನೌಕರರು ಈ ಲಾಕ್​​​ ಡೌನ್​​ನಿಂದ ಒಂದು ಹೊತ್ತಿನ ಊಟಕ್ಕೆ ಕೂಡಾ ಕಷ್ಟಪಡುತ್ತಿದ್ದಾರೆ. ಈ ವೇಳೆ ಬಡವರಿಗೆ ಸಹಾಯ ಮಾಡಲು ಎಷ್ಟೋ ಸಂಘಸಂಸ್ಥೆಗಳು ಹಾಗೂ ಸೆಲಬ್ರಿಟಿಗಳು ಮುಂದೆ ಬಂದಿದ್ದಾರೆ.

Deepika das
5 ಲಕ್ಷ ರೂಪಾಯಿ ದೇಣಿಗೆ ನೀಡುತ್ತಿರುವ ನಾಗಿಣಿ

'ನಾಗಿಣಿ' ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್ ಕೂಡಾ ಇದೀಗ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಮುಖ್ಯಮಂತ್ರಿ ಕೊರೊನಾ ಪರಿಹಾರ ನಿಧಿಗೆ ದೀಪಿಕಾ ದಾಸ್ 5 ಲಕ್ಷ ರೂಪಾಯಿ ಹಣವನ್ನು ನೀಡಲು ನಿರ್ಧರಿಸಿದ್ದಾರೆ. ಸದ್ಯದಲ್ಲೇ ಮುಖ್ಯಮಂತ್ರಿ ಬಿ.ಎಸ್​​​​. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಈ‌ 5 ಲಕ್ಷ ರೂಪಾಯಿ ಚೆಕ್​​​​​ ಹಸ್ತಾಂತರ ಮಾಡಲಿದ್ದಾರೆ. ಈ ಬಗ್ಗೆ ಮಾತನಾಡಿರುವ ದೀಪಿಕಾ ದಾಸ್, ಕೊರೊನಾ ಸಮಸ್ಯೆ ಬಗೆಹರಿಸುವಲ್ಲಿ ಸಿಎಂ ಯಡಿಯೂರಪ್ಪ ಬ್ಯುಸಿ ಇದ್ದಾರೆ. ಆದ್ದರಿಂದ ಅವರನ್ನು ಇದುವರೆಗೂ ಭೇಟಿ ಮಾಡಲು ಸಾಧ್ಯವಾಗಿಲ್ಲ. ಇನ್ನು 2-3 ದಿನಗಳಲ್ಲಿ ಅವರನ್ನು ಭೇಟಿ ಮಾಡಿ ಅವರಿಗೆ ಈ ಚೆಕ್ ನೀಡಲಿದ್ಧೇನೆ ಎಂದಿದ್ದಾರೆ.

Deepika das
ನಾಗಿಣಿ ಖ್ಯಾತಿಯ ದೀಪಿಕಾ ದಾಸ್

ದೀಪಿಕಾ ಬಿಗ್​ ಬಾಸ್ ಸೀಸನ್ 7ರಲ್ಲಿ ಭಾಗವಹಿಸಿ ಹೊರ ಬಂದ ನಂತರ ಮತ್ತಷ್ಟು ಖ್ಯಾತಿ ಪಡೆದಿದ್ದಾರೆ. ಇನ್ನು ಪ್ರತಿದಿನ ಸಿನಿಮಾ ತಾರೆಯರು ಕೊರೊನಾ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದುಇತ್ತೀಚೆಗಷ್ಟೇ ನಟ ಪುನೀತ್ ರಾಜ್​​ಕುಮಾರ್ ಕೂಡಾ ಮುಖ್ಯಮಂತ್ರಿ ಅವರ ಧವಳಗಿರಿ ನಿವಾಸಕ್ಕೆ ತೆರಳಿ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು.

Deepika das
ಕೊರೊನಾ ಪರಿಹಾರ ನಿಧಿಗೆ ದೀಪಿಕಾ ಹಣ ಸಹಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.