ETV Bharat / sitara

'ಪದ್ಮಾವತಿ' ಆಯ್ತು ಇದೀಗ ಪಾಂಚಾಲಿಯಾಗ್ತಾರಂತೆ ದೀಪಿಕಾ ಪಡುಕೋಣೆ! - ಮಹಾಭಾರತ ಕಥೆಯಲ್ಲಿ ದೀಪಿಕಾ ಪಡುಕೋಣೆ ದ್ರೌಪದಿ

ಬಾಲಿವುಡ್​​ನ ಖ್ಯಾತ ನಿರ್ಮಾಪಕ ಮಧು ಮಂಥೇನ ಮಹಾಭಾರತ ಕಥೆಯಾಧಾರಿತ ಸಿನಿಮಾ ಮಾಡುತ್ತಿದ್ದು, ಇದರಲ್ಲಿ ದೀಪಿಕಾ ಪಡುಕೋಣೆ ದ್ರೌಪದಿ ಪಾತ್ರವನ್ನು ನಿರ್ವಹಿಸುವುದಾಗಿ ಹೇಳಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ
author img

By

Published : Oct 26, 2019, 12:14 PM IST

ಬಾಲಿವುಡ್​​ನಲ್ಲಿ ಆಗಾಗ್ಗೆ ರಾಮಾಯಣ, ಮಹಾಭಾರತ ಸಿನಿಮಾಗಳ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಈ ಹಿಂದೆ ಮಿಸ್ಟರ್ ಪರ್ಫೆಕ್ಷನಿಸ್ಟ್‌ ಖ್ಯಾತಿಯ ಅಮೀರ್‌​ ಖಾನ್​​​ ರಾಮಾಯಣ ಕಥೆ ಆಧಾರಿತ ಸಿನಿಮಾ ಮಾಡುವುದಾಗಿ ಹೇಳಿದ್ದು, ಈ ಸಿನಿಮಾದಲ್ಲಿ ಹೃತಿಕ್​ ರೋಷನ್​​ ರಾಮ ಮತ್ತು ಸೀತೆಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಸದ್ದು ಮಾಡಿತ್ತು. ಇದೀಗ ದೀಪಿಕಾ ಹೊಸ ಸುದ್ದಿ ಹೊರಹಾಕಿದ್ದು, ಮಹಾಭಾರತ ಸಿನಿಮಾದಲ್ಲಿ ನಟಿಸುವುದಾಗಿ ಪ್ರಕಟಿಸಿದ್ದಾರೆ.

deepika padukone
ದೀಪಿಕಾ ಪಡುಕೋಣೆ

ಈ ಕಥೆಯ ಬಗ್ಗೆ ಮಾತನಾಡಿರುವ ದೀಪಿಕಾ, ಮಹಾಭಾರತದಲ್ಲಿ ಹಲವು ಪ್ರಮುಖ ಪಾತ್ರಗಳು ಬರುತ್ತವೆ. ಇದರಲ್ಲಿ ಪಾಂಡವರು, ಕೌರವರ ಕಥೆಗಳನ್ನು ಹೇಳಲಾಗಿದೆ. ಆದ್ರೆ ಮಧು ಮಂಥೇನ ಮಾಡುತ್ತಿರುವ ಸಿನಿಮಾದಲ್ಲಿ ದ್ರೌಪದಿಯ ಪಾತ್ರವನ್ನು ಹೈಲೆಟ್​​ ಮಾಡಿ ನಿರ್ಮಿಸಲಾಗುತ್ತಿದೆ. ಈ ಚಿತ್ರವನ್ನು 2021ರ ದೀಪಾವಳಿ ಹಬ್ಬಕ್ಕೆ ತೆರೆಗೆ ತರುವ ಪ್ಲಾನ್​​ ಮಾಡಲಾಗಿದ್ದು, ಉಳಿದ ಪಾತ್ರಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಸದ್ಯ 'ಪದ್ಮಾವತಿ' ಕೈಯಲ್ಲಿರುವ 'ಚಪಾಕ್​​' ಮತ್ತು '83' ಸಿನಿಮಾಗಳ ಕೆಲಸ ಮುಗಿದ ಮೇಲೆ ಮಹಾಭಾರತ ಚಿತ್ರದ ಕೆಲಸ ಶುರುವಾಗಲಿದೆ ಎಂದು ತಿಳಿದು ಬಂದಿದೆ.

  • BIGGG NEWS... Deepika Padukone to enact the part of #Draupadi in #Mahabharat... Deepika has teamed up with Madhu Mantena to produce the film... Will be made in multiple parts, with the first one slated for release in #Diwali2021.

    — taran adarsh (@taran_adarsh) October 25, 2019 " class="align-text-top noRightClick twitterSection" data=" ">

Intro:Body:

girisa khali

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.