ಕನ್ನಡ ಸಿನಿಮಾ ‘ಕ್ರಿಟಿಕಲ್ ಕೀರ್ತನೆಗಳು’ ಮೂಲಕ ತೆಲುಗು ಧಾರಾವಾಹಿ ‘ಪ್ರೇಮನಗರ’ದ ನಟಿ ದೀಪ ಜಗದೀಶ್ ಕನ್ನಡಕ್ಕೆ ಬಂದಿದ್ದಾರೆ. ದೀಪ ಇದುವರೆಗೂ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರೂ ಅವರಿಗೆ ಹೆಸರು ತಂದುಕೊಟ್ಟಿದ್ದು ಮಾತ್ರ ‘ಪ್ರೇಮನಗರ’ ಧಾರಾವಾಹಿ.
![Deepa Jagadish](https://etvbharatimages.akamaized.net/etvbharat/prod-images/deepa-jagadish-of-critical-kirthanegalu-11579923671752-77_2501email_1579923684_494.jpg)
'ಕ್ರಿಟಿಕಲ್ ಕೀರ್ತನೆಗಳು' ನಾಲ್ಕು ಕಥೆಗಳನ್ನು ಹೊಂದಿರುವ ಸಿನಿಮಾ. 'ಲವ್ಬರ್ಡ್' ಎಂಬ ಭಾಗದಲ್ಲಿ ದೀಪ ಜಗದೀಶ್, ಯಶಸ್ ಎಂಬುವವರ ಜೊತೆ ಅಭಿನಯಿಸಿದ್ದಾರೆ. ದೀಪ ಮೂಲತ: ಧಾರವಾಡ ಮೂಲದ ಹುಡುಗಿ. ತಬಲಾ ನಾಣಿ ಹಾಗೂ ಅಪೂರ್ವ ಈ ನಾಲ್ಕೂ ಕಥೆಗಳಿಗೆ ಪ್ರಮುಖ ಪಾತ್ರಧಾರಿಗಳು. ದೀಪ ಜಗದೀಶ್ ಹಾಗೂ ಯಶಸ್ ಅಭಿ ಪಾತ್ರವನ್ನು ಮಂಗಳೂರು ಪ್ರಾಂತ್ಯಕ್ಕೆ ಹೊಂದಿಸಲಾಗಿದೆ. ದೀಪ ಜಗದೀಶ್ ಅವರಿಗೆ ಕನ್ನಡದಲ್ಲಿ ಸಿಕ್ಕಿರುವ ಈ ಪಾತ್ರ ಬಹಳ ವಿಶೇಷವಾಗಿದೆಯಂತೆ. ಕೇಸರಿ ಫಿಲ್ಮ್ ಕಪ್ಚರ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಕುಮಾರ್. ಎಲ್ ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ. ಇದು ಐಪಿಎಲ್ ಬೆಟ್ಟಿಂಗ್ ಕುರಿತಾದ ಚಿತ್ರವಾಗಿದೆ. ರೇಣುಕ ಸ್ಟುಡಿಯೋದಲ್ಲಿ ಚಿತ್ರದ ಡಬ್ಬಿಂಗ್ ಕೆಲಸ ಮುಗಿದಿದೆ.
![Deepa Jagadish](https://etvbharatimages.akamaized.net/etvbharat/prod-images/deepa-jagadish-of-critical-kirthanegalu-31579923671753-82_2501email_1579923684_519.jpg)
ಬೆಂಗಳೂರು, ಕುಂದಾಪುರ, ಮಂಡ್ಯ, ಬೆಳಗಾವಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಮೂರು ಹಾಡುಗಳಿಗೆ ವೀರ್ ಸಮರ್ಥ ರಾಗ ಸಂಯೋಜಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಕೂಡಾ ಕುಮಾರ್. ಎಲ್ ಅವರದ್ದೇ. ತಬಲಾ ನಾಣಿ-ಅಪೂರ್ವ ‘ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದಲ್ಲಿ ಕೂಡಾ ಜೊತೆಯಾಗಿ ನಟಿಸಿದ್ದರು. ರಾಜೇಶ್ ನಟರಂಗ , ಅಪೂರ್ವ ಭಾರದ್ವಾಜ್ , ತರಂಗ ವಿಶ್ವ, ಸುಚೇಂದ್ರ ಪ್ರಸಾದ್, ಅರುಣ ಬಾಲ್ರಾಜ್, ಧರ್ಮ ದಿನೇಶ್, ಮಂಗಳೂರು, ರಘು ಪಾಂಡವೇಶ್ವರ್, ಗುರುರಾಜ ಹೊಸಕೋಟೆ, ಮಾಸ್ಟರ್ ಮಹೇಂದ್ರ, ಮಾಸ್ಟರ್ ಪುಟ್ಟರಾಜು, ಯಶ್ವಂತ್ ಶೆಟ್ಟಿ ಹಾಗೂ ಇತರರು ತಾರಾಗಣದಲಿದ್ದಾರೆ.