ETV Bharat / sitara

'ದಿಯಾ' ರೀ ರಿಲೀಸ್ ಬಗ್ಗೆ ಸಂತೋಷ ವ್ಯಕ್ತಪಡಿಸಿದ ದೀಕ್ಷಿತ್ ಶೆಟ್ಟಿ - Title song added to Dia movie

ಖುಷಿ ರವಿ, ದೀಕ್ಷಿತ್ ಶೆಟ್ಟಿ, ಪೃಥ್ವಿ ಅಂಬರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ದಿಯಾ' ಸಿನಿಮಾ ಇಂದು ಮತ್ತೆ ಬಿಡುಗಡೆಯಾಗಿದೆ. ಸಿನಿಮಾ ರೀ ರಿಲೀಸ್ ಆಗುತ್ತಿರುವುದಕ್ಕೆ ನಟ ದೀಕ್ಷಿತ್ ಶೆಟ್ಟಿ ಸಂತೋಷ ವ್ಯಕ್ತಪಡಿಸಿದ್ದಾರೆ.

Dia Re release
'ದಿಯಾ' ರೀ ರಿಲೀಸ್
author img

By

Published : Nov 6, 2020, 1:36 PM IST

ಕೆ.ಎಸ್​. ಅಶೋಕ್ ನಿರ್ದೇಶನದ 'ದಿಯಾ' ಸಿನಿಮಾ ಇಂದು ಮರು ಬಿಡುಗಡೆಯಾಗಿದೆ. ಈ ಸಿನಿಮಾ ಇದೇ ವರ್ಷ ಫೆಬ್ರವರಿ 7 ರಂದು ಮೊದಲ ಬಾರಿ ಬಿಡುಗಡೆಯಾಗಿತ್ತು. ಅಭಿಮಾನಿಗಳ ಒತ್ತಾಯದ ಮೇರೆಗೆ, ಸ್ವಲ್ಪ ಬದಲಾವಣೆಯೊಂದಿಗೆ ಸಿನಿಮಾ ಇದೀಗ ಮತ್ತೆ ಚಿತ್ರಮಂದಿರಗಳಲ್ಲಿ ರೀ ರಿಲೀಸ್ ಆಗಿದೆ.

ದಿಯಾ ರೀ ರಿಲೀಸ್ ಬಗ್ಗೆ ದೀಕ್ಷಿತ್ ಶೆಟ್ಟಿ ಪ್ರತಿಕ್ರಿಯೆ

ಮಾರ್ಚ್​ನಿಂದ ಲಾಕ್​ಡೌನ್ ಆರಂಭವಾದ ಕಾರಣ ಸಿನಿಮಾಗೆ ಹೇಳಿಕೊಳ್ಳುವಂತ ಪ್ರತಿಕ್ರಿಯೆ ದೊರೆಯಲಿಲ್ಲ. ಆದರೆ ಈ ಸಿನಿಮಾ ಯಾವಾಗ ಒಟಿಟಿ ಪ್ಲಾಟ್​​ಫಾರ್ಮ್​ನಲ್ಲಿ ಬಿಡುಗಡೆಯಾಯ್ತೋ ಆಗ ಎಲ್ಲರೂ ಸಿನಿಮಾ ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಇಂತ ಒಳ್ಳೆಯ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಲಾಗಲಿಲ್ಲವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಆದರೆ ಇದೀಗ ಹೊಸ ಕ್ಲೈಮ್ಯಾಕ್ಸ್ ಹಾಗೂ ಹೊಸ ಹಾಡಿನೊಂದಿಗೆ 'ದಿಯಾ' ಮತ್ತೆ ಬಿಡುಗಡೆ ಆಗಿದ್ದು ಸಿನಿಪ್ರಿಯರು ಕೂಡಾ ಸಂತೋಷ ವ್ಯಕ್ತಪಡಿಸಿದ್ದಾರೆ.

Dia Re release
'ದಿಯಾ'

'ದಿಯಾ' ರೀ ರಿಲೀಸ್ ಬಗ್ಗೆ ಈ ಚಿತ್ರದಲ್ಲಿ ರೋಹಿತ್ ಪಾತ್ರದಲ್ಲಿ ನಟಿಸಿರುವ ನಟ ದೀಕ್ಷಿತ್ ಶೆಟ್ಟಿ ಥ್ರಿಲ್ ಆಗಿದ್ದಾರೆ. ''ನಮ್ಮ ಸಿನಿಮಾ ಮತ್ತೆ ಬಿಡುಗಡೆ ಆಗುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಈ ಸಿನಿಮಾ ನಿಮಗೂ ಕೂಡಾ ಹೊಸ ಅನುಭವ ನೀಡಲಿದೆ. ಚಿತ್ರದ ಕ್ಲೈಮ್ಯಾಕ್ಸ್ ಬದಲಾಗಿದ್ದು ಹೊಸದೊಂದು ಹಾಡನ್ನು ಕೂಡಾ ಸೇರಿಸಲಾಗಿದೆ. ದಯವಿಟ್ಟು ಎಲ್ಲರೂ ಥಿಯೇಟರ್​​ಗೆ ಬಂದು ಸಿನಿಮಾ ನೋಡಿ'' ಎಂದು ದೀಕ್ಷಿತ್ ಶೆಟ್ಟಿ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.