ವಾಷಿಂಗ್ಟನ್ [ಯುಎಸ್]: ಡಿಸಿ ಯೂನಿವರ್ಸ್ ಅಭಿಮಾನಿಗಳು 'ಜಸ್ಟೀಸ್ ಸೊಸೈಟಿ: ವಿಶ್ವ ಸಮರ II' ಅನ್ನು ಸಹ ಇಷ್ಟ ಪಡಲು ಒಂದು ಕಾರಣವಿದೆ.
ದಿ ಹಾಲಿವುಡ್ ರಿಪೋರ್ಟರ್ ಪ್ರಕಾರ, 'ಜಸ್ಟೀಸ್ ಸೊಸೈಟಿ: ವಿಶ್ವ ಸಮರ II' ನಲ್ಲಿ ವಂಡರ್ ವುಮನ್ ಪಾತ್ರದಲ್ಲಿ ಸ್ಟಾನಾ ಕ್ಯಾಟಿಕ್ ಮತ್ತು ದಿ ಫ್ಲ್ಯಾಶ್ ಆಗಿ ಮ್ಯಾಟ್ ಬೊಮರ್ ಪಾತ್ರ ನಿರ್ವಹಿಸಿದ್ದಾರೆ. ಇವರಿಬ್ಬರ ಧ್ವನಿಯಲ್ಲಿ ಈ ಪಾತ್ರಗಳು ಅದ್ಭುತವಾಗಿ ಮೂಡಿ ಬಂದಿವೆ.
'ಜಸ್ಟೀಸ್ ಸೊಸೈಟಿ: ವಿಶ್ವ ಸಮರ II' ಯೂನಿವರ್ಸ್ನ 42 ಚಲನಚಿತ್ರಗಳಲ್ಲಿ ಮೊದಲನೆಯದು. ಜಸ್ಟೀಸ್ ಸೊಸೈಟಿ ಆಫ್ ಅಮೆರಿಕ ಡಿಸಿ ಕಾಮಿಕ್ಸ್ ಪ್ರಕಟಿಸಿದ ಅಮೆರಿಕನ್ ಕಾಮಿಕ್ ಪುಸ್ತಕಗಳಲ್ಲಿ ಕಾಣಿಸಿಕೊಳ್ಳುವ ಸೂಪರ್ ಹೀರೋ ತಂಡವಾಗಿದೆ.
ಇದನ್ನೂ ಓದಿ:ಹಣ ವರ್ಗಾವಣೆ ಆರೋಪ: ಸಿಸಿಬಿ ವಿಚಾರಣೆಗೆ ನಟಿ ರಾಧಿಕಾ ಹಾಜರು
ಸ್ಟೀವ್ ಟ್ರೆವರ್ ಪಾತ್ರದಲ್ಲಿ ಕ್ರಿಸ್ ಡಯಾಮಂಟೋಪೌಲೋಸ್, ಜೇ ಗ್ಯಾರಿಕ್ ಪಾತ್ರದಲ್ಲಿ ಅರ್ಮೆನ್ ಟೇಲರ್, ಬ್ಲ್ಯಾಕ್ ಕ್ಯಾನರಿ ಪಾತ್ರದಲ್ಲಿ ಎಲಿಸಿಯಾ ರೋಟಾರು, ಹಾಕ್ಮನ್ ಪಾತ್ರದಲ್ಲಿ ಓಮಿಡ್ ಅಬ್ತಾಹಿ, ಅಕ್ವಾಮನ್ ಪಾತ್ರದಲ್ಲಿ ಲಿಯಾಮ್ ಮ್ಯಾಕ್ಇಂಟೈರ್, ಡಾ. ಫೇಟ್ ಪಾತ್ರದಲ್ಲಿ ಕೀತ್ ಫರ್ಗುಸನ್, ಆಶ್ಲೀಗ್ ಲಾಥ್ರಾಪ್ ಐರಿಸ್ ವೆಸ್ಟ್, ಮತ್ತು ರೂಸ್ವೆಲ್ಟ್ ಪಾತ್ರದಲ್ಲಿ ಡಾರಿನ್ ಡಿ ಪಾಲ್ ನಟಿಸಿದ್ದಾರೆ.
ಈ ಚಿತ್ರವನ್ನು ಮೇಘನ್ ಫಿಟ್ಜ್‌ಮಾರ್ಟಿನ್ ಮತ್ತು ಜೆರೆಮಿ ಆಡಮ್ಸ್ ಚಿತ್ರಕಥೆಯಿಂದ ಜೆಫ್ ವಾಮೆಸ್ಟರ್ ನಿರ್ದೇಶಿಸುತ್ತಿದ್ದಾರೆ. 'ಜಸ್ಟೀಸ್ ಸೊಸೈಟಿ: ವಿಶ್ವ ಸಮರ II' ಅನ್ನು ವಾರ್ನರ್ ಬ್ರದರ್ಸ್ ಆನಿಮೇಷನ್, ಡಿಸಿ ಮತ್ತು ವಾರ್ನರ್ ಬ್ರದರ್ಸ್ ಹೋಮ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ.