ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಸಿನಿಮಾದ ಆಫೀಶಿಯಲ್ ಟೀಸರ್ ರಿಲೀಸ್ ಆಗಿದೆ. ಈ ಟೀಸರ್‌ನ ಡಿಸಿಎಂ ಅಶ್ವತ್ಥ್ ನಾರಾಯಣ್, ಕೆ ಜಿ ರಸ್ತೆಯಲ್ಲಿರೋ ಸಂತೋಷ್ ಚಿತ್ರಮಂದಿರದಲ್ಲಿ ಅನಾವರಣ ಮಾಡಿದ್ದಾರೆ.
ಟೀಸರ್ನಲ್ಲಿ ರಗ್ಬಿ ಆಟಗಾರನ ಲುಕ್‌ನಲ್ಲಿ ಅಪ್ಪು ಕಾಣಿಸಿಕೊಂಡಿದ್ದಾರೆ. ಡಾಲಿ ಧನಂಜಯ್, ವಿನಯ್ ರಾಜ್ ಕುಮಾರ್, ನಿರ್ದೇಶಕ ಎಸ್.ಕೃಷ್ಣ ಟೀಸರ್ ಲಾಂಚ್ಗೆ ಸಾಕ್ಷಿಯಾದ್ರು. ಪವರ್ ಸ್ಟಾರ್ನ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಯುವರತ್ನ ಚಿತ್ರದ ಟೀಸರ್ ಲಾಂಚ್ ಮಾಡಿದ್ರು.
ಇನ್ನೊಂದು ಕಡೆ ಸಂತೋಷ್ ಥಿಯೇಟರ್‌ನಲ್ಲಿ ಯುವರತ್ನ ಚಿತ್ರದ ಟೀಸರ್ ರಿಲೀಸ್ ಆಗ್ತಿದ್ದಾಂತೆ, ಚಿತ್ರಮಂದಿರದ ಹೊರಗಡೆ ನೂರಾರು ಅಭಿಮಾನಿಗಳು ಯುವರತ್ನ ಸಿನಿಮಾ ಪೋಸ್ಟರ್ ಹಿಡಿದು ಕುಣಿದು ಕುಪ್ಪಳಿಸಿದ್ರು. ರಾಜಕುಮಾರ ಚಿತ್ರದ ನಂತ್ರ, ನಿರ್ದೇಶಕ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿದ್ದಾರೆ. ಯುವರತ್ನಾ ಸಿನಿಮಾ ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಿದ್ದು, ದಸರಾ ಹಬ್ಬಕ್ಕೆ ಪವರ್ ಸ್ಟಾರ್ ಫ್ಯಾನ್ಸ್ಗೆ ಈ ಟೀಸರ್ ಉಡುಗೊರೆಯಾಗಿದೆ.