ETV Bharat / sitara

ಯಶ್​​​ ಅಭಿಮಾನಿಗಳಿಗೆ ಗುಡ್​​​ ನ್ಯೂಸ್​​​​...'ಕೆಜಿಎಫ್​​ 2' ಟೀಸರ್ ಬಿಡುಗಡೆಗೆ ದಿನಾಂಕ ಫಿಕ್ಸ್​​​​​​​​​​ - Prashant neel direction KGF 2

ಯಶ್ ಅಭಿಮಾನಿಗಳಿಗೆ ಕೊನೆಗೂ ಗುಡ್​​ನ್ಯೂಸ್ ಸಿಕ್ಕಿದೆ. ಕೆಜಿಎಫ್​​​ 2 ಟೀಸರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು 2021 ಜನವರಿ 8 ರಂದು ಯಶ್ ಬರ್ತ್​ಡೇಗೆ ಟೀಸರ್​ ಬಿಡುಗಡೆಯಾಗಲಿದ್ದು ಸಿನಿಮಾ ಯುಗಾದಿ ವೇಳೆಗೆ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ.

Date fixed for KGF 2 teaser release
ಯಶ್
author img

By

Published : Dec 4, 2020, 8:53 AM IST

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್​​​-2' ಚಿತ್ರ ನೋಡಲು ಸಿನಿಪ್ರಿಯರಂತೂ ಒಂದು ವರ್ಷದಿಂದ ಕಾಯುತ್ತಿದ್ದಾರೆ. ಈ ಕೊರೊನಾ ಕಾರಣದಿಂದ ಸಿನಿಮಾ ಮುಂದಕ್ಕೆ ಹೋಗುತ್ತಿದೆ. ಕನಿಷ್ಠ ಪಕ್ಷ ಟೀಸರ್ ಆದರೂ ಬಿಡುಗಡೆ ಮಾಡಿ ಎಂದು ಅಭಿಮಾನಿಗಳು ಬಹಳ ದಿನಗಳಿಂದ ಕೇಳುತ್ತಿದ್ದರು. ಇದೀಗ ಯಶ್ ಅಭಿಮಾನಿಗಳಿಗೆ ಗುಡ್​​​ ನ್ಯೂಸ್ ಸಿಕ್ಕಿದ್ದು ಕೆಜಿಎಫ್ -2 ಟೀಸರ್ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ.

Date fixed for KGF 2 teaser release
'ಕೆಜಿಎಫ್​​ 2' ಚಿತ್ರದಲ್ಲಿ ರವೀನಾ ಟಂಡನ್

ಜನವರಿ 8, ಯಶ್ ಹುಟ್ಟುಹಬ್ಬವಾಗಿದ್ದು 2021 ಜನವರಿ 8 ರಂದು ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. ಸಂಜಯ್ ದತ್ ಈ ಚಿತ್ರದಲ್ಲಿ ಅಧೀರನ ಪಾತ್ರದಲ್ಲಿ ನಟಿಸುತ್ತಿದ್ದು ರವೀನಾ ಟಂಡನ್, ಪ್ರಧಾನಮಂತ್ರಿ ರಮಿಕಾ ಸೇನ್​​​​​​ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಂಜಯ್ ದತ್ ಹಾಗೂ ರವೀನಾ ಹುಟ್ಟುಹಬ್ಬಕ್ಕಾಗಿ ಅವರ ಫಸ್ಟ್​​​ಲುಕ್ ಬಿಡುಗಡೆ ಮಾಡಲಾಗಿದೆ. ಚಿತ್ರದ ಬಗ್ಗೆ ಮಾತನಾಡಿರುವ ಯಶ್, 'ಇದು ಮೊದಲ ಭಾಗಕ್ಕಿಂತ ಐದು ಪಟ್ಟು ನಿಮಗೆ ಮನರಂಜನೆ ನೀಡುತ್ತದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Date fixed for KGF 2 teaser release
ರಾಕಿಂಗ್ ಸ್ಟಾರ್ ಯಶ್

ಒಂದು ವೇಳೆ ಕೊರೊನಾ ಇಲ್ಲದಿದ್ದರೆ ಈ ಸಮಯದಲ್ಲಿ ಕೆಜಿಎಫ್​-2 ಬಿಡುಗಡೆಯಾಗುತ್ತಿತ್ತು. ಪ್ರಸ್ತುತ ಸಿನಿಮಾದ ಕೊನೆಯ ಶೆಡ್ಯೂಲ್​​​​​​​ ಚಿತ್ರೀಕರಣ ಜರುಗುತ್ತಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಮುಂದಿನ ವರ್ಷ ಯುಗಾದಿ ವೇಳೆಗೆ ಸಿನಿಮಾ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ. ಚಿತ್ರದಲ್ಲಿ ಯಶ್ ಜೊತೆಗೆ ಶ್ರೀನಿಧಿ ಶೆಟ್ಟಿ, ರಾವ್ ರಮೇಶ್, ವಸಿಷ್ಠ ಸಿಂಹ, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಟಿ.ಎಸ್. ನಾಗಾಭರಣ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ರವಿ ಬಸ್ರೂರು ಸಂಗೀತ ನೀಡುತ್ತಿದ್ದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.