ಆರಂಭದಿಂದಲೂ ಕುತೂಹಲ ಕೆರಳಿಸಿದ್ದ ‘ಗರ’ ಸಿನಿಮಾ ಬಿಡುಗಡೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಆರ್.ಕೆ. ನಾರಾಯಣ್ ಅವರ ಕಿರು ಕತೆಯನ್ನು ಕೆ.ಆರ್. ಮುರಳಿಕೃಷ್ಣ ನಿರ್ಮಿಸಿ, ನಿರ್ದೇಶಿಸಿ ಸಿನಿಮಾ ಮಾಡಿದ್ದಾರೆ.
![gara movie](https://etvbharatimages.akamaized.net/etvbharat/images/3025398_gara.jpg)
ಖಾಸಗಿ ವಾಹಿನಿಯಲ್ಲಿ ನಿರೂಪಕನಾಗಿ ಕೆಲಸ ಮಾಡುತ್ತಿದ್ದ ರೆಹಮಾನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೊನೆಗೂ ಈ ಸಿನಿಮಾ ಮೇ 3ರಂದು ಬಿಡುಗಡೆಯಾಗುತ್ತಿದೆ. ಹಿರಿಯ ಗಾಯಕಿ ಮಂಜುಳಾ ಗುರುರಾಜ್ ಅವರ ಪುತ್ರ ಸೂರಜ್ ಗುರುರಾಜ್ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸೂರಜ್ ತನ್ನ ತಾಯಿ ಮಂಜುಳಾ ಅವರಿಂದ ಒಂದು ಹಾಡು ಕೂಡಾ ಹಾಡಿಸಿದ್ದಾರೆ. ಬಾಲಿವುಡ್ ಖ್ಯಾತ ಕೊರಿಯೋಗ್ರಾಫರ್ ಸರೋಜ್ ಖಾನ್ ಹಾಡುಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ.
ಇನ್ನು ಬಾಲಿವುಡ್ ಖ್ಯಾತ ಹಾಸ್ಯ ನಟ ಜಾನಿಲಿವರ್ ಈ ಚಿತ್ರದಲ್ಲಿ ಸಾಧು ಕೋಕಿಲ ಜೊತೆಯಾಗಿದ್ದಾರೆ. ಇದೆಲ್ಲಾ ಈ ಚಿತ್ರದ ವಿಶೇಷ. ಹೆಚ್.ಸಿ. ವೇಣು ಛಾಯಾಗ್ರಹಣ ಈ ಚಿತ್ರಕ್ಕಿದೆ. ಆವಂತಿಕ, ಆರ್ಯನ್, ನೇಹಾ ಪಾಟೀಲ್. ಪ್ರಶಾಂತ್ ಸಿದ್ದಿ, ರಾಮಕೃಷ್ಣ, ರೂಪಾದೇವಿ, ಮನದೀಪ್ ರಾಯ್, ತಬಲಾ ನಾಣಿ, ರೋಹಿತ್, ಸುನೇತ್ರ ಪಂಡಿತ್, ನಿರಂಜನ್, ರಾಜೇಶ್ ರಾವ್, ಸೋನು, ದಯಾನಂದ, ಗುರುರಾಜ್ ಹಾಗೂ ಇನ್ನಿತರರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.