ಸಾರಥಿ, ದಾಸ, ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ಎಂದೆಲ್ಲಾ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಲ್ಪಡುವ ದರ್ಶನ್ ಇಂದು 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದರ್ಶನ್ ಹುಟ್ಟುಹಬ್ಬದ ವಿಶೇಷವಾಗಿ ಇಂದು 'ರಾಬರ್ಟ್' ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಟ್ರೇಲರ್ ಬಿಡುಗಡೆಯಾಗಿ 20 ನಿಮಿಷಗಳ ಅವಧಿಯಲ್ಲಿ ಸುಮಾರು 3.50 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
- " class="align-text-top noRightClick twitterSection" data="">
ಇದನ್ನೂ ಓದಿ: ಶಿಲ್ಪಾ ಶೆಟ್ಟಿ ಮಗಳು ಸಮಿಶಾ ಹುಟ್ಟುಹಬ್ಬದ ಸಂಭ್ರಮ: ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ
2:20 ನಿಮಿಷ ಅವಧಿಯ ಟ್ರೇಲರ್ "ನನ್ನನ್ನು ಸಂಹಾರ ಮಾಡ್ತೀನಿ ಅಂತ ಬರೋನು ನನಗಿಂತ ದೊಡ್ಡ ಕ್ರಿಮಿನಲ್ ಆಗಿರಬೇಕು" ಎಂಬ ಧ್ವನಿಯಿಂದ ಆರಂಭವಾಗುತ್ತದೆ. "ಒಬ್ಬರ ಲೈಫಲ್ಲಿ ನಾವು ಹೀರೋ ಆಗಬೇಕು ಎಂದರೆ ಮತ್ತೊಬ್ಬರ ಲೈಫಲ್ಲಿ ವಿಲನ್ ಆಗಬೇಕು" , "ನಾನು ಮಾಸ್ಗೇ ಬಾಸ್" ಎಂಬ ದರ್ಶನ್ ಡೈಲಾಗ್ಗಳು ಅಭಿಮಾನಿಗಳು ಫಿದಾ ಆಗಿದ್ದಾರೆ. ಟ್ರೇಲರ್ನಲ್ಲಿ ವಿನೋದ್ ಪ್ರಭಾಕರ್ ಕೂಡಾ ಕಾಣಿಸಿಕೊಂಡಿದ್ದಾರೆ. ಸಿನಿಮಾ ತೆಲುಗಿನಲ್ಲಿ ಕೂಡಾ ಬಿಡುಗಡೆಯಾಗುತ್ತಿದ್ದು ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದ ತೆಲುಗು ಟೀಸರ್ ನೋಡಿ ತೆಲುಗು ಸಿನಿಪ್ರಿಯರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮಾರ್ಚ್ 11 ಶಿವರಾತ್ರಿಯಂದು ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಿಸಿದ್ದು ತರುಣ್ ಸುಧೀರ್ ನಿರ್ದೇಶಿಸಿದ್ದಾರೆ. ಆಶಾ ಭಟ್, ಜಗಪತಿ ಬಾಬು, ರವಿ ಕಿಶನ್, ರವಿಶಂಕರ್ ಹಾಗೂ ಇನ್ನಿತರರು ನಟಿಸಿದ್ದಾರೆ.
![Robert trailer released](https://etvbharatimages.akamaized.net/etvbharat/prod-images/kn-bng-01-darshan-robeert-trailer-release-7204735_16022021103012_1602f_1613451612_422.jpg)