ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಸಿನಿಮಾ 'ರಾಬರ್ಟ್' ಮೋಷನ್ ಪೋಸ್ಟರ್ ಹಾಗೂ ದರ್ಶನ್ ಅವರ ಲುಕ್ನಿಂದಲೇ ಎಲ್ಲರ ಗಮನ ಸೆಳೆದಿರುವ ಸಿನಿಮಾ. ಚಿತ್ರತಂಡ ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬ್ಯುಸಿಯಾಗಿದೆ.
ಚಿತ್ರದ ಶೂಟಿಂಗ್ ವೇಳೆ ನಟ,ನಟಿಯರು , ತಂತ್ರಜ್ಞರು ಸಖತ್ ಎಂಜಾಯ್ ಮಾಡಿದ್ದಾರೆ. ಇದೀಗ ರಾಬರ್ಟ್ ಚಿತ್ರದ ನಾಯಕಿ ಆಶಾ ಭಟ್, ಈ ಚಿತ್ರದ ಕೊನೆಯ ದಿನದ ಶೂಟಿಂಗ್ನಲ್ಲಿ ನಿರ್ದೇಶಕ ತರುಣ್ ಸುಧೀರ್ ಹಾಗು ಕ್ಯಾಮರಾಮ್ಯಾನ್ ಸುಧಾಕರ್ಗೆ ಕಾಲು ಎಳೆಯುವ ಮೂಲಕ ಸಖತ್ ತಮಾಷೆ ಮಾಡಿದ್ದಾರೆ. ತರುಣ್ ಸುಧೀರ್ ಹಾಗೂ ಕ್ಯಾಮರಾಮ್ಯಾನ್ ಸುಧಾಕರ್ ಜೊತೆ ತರ್ಲೆ ತಮಾಷೆ ಮಾಡುತ್ತಿರುವ ಫೋಟೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ, ಈ ಫೋಟೋಗೆ ಏನು ಕಾಮೆಂಟ್ ಕೊಡ್ತಿರಾ..? ಎಂದು ಅಭಿಮಾನಿಗಳಿಗೆ ಕೇಳಿದ್ದಾರೆ. ಆಶಾ ಭಟ್ ಮೂಲತಃ ಭದ್ರಾವತಿ ಹುಡುಗಿ ಆಗಿದ್ದು, ದರ್ಶನ್ ಹೈಟ್ಗೆ ಮ್ಯಾಚ್ ಆಗುವ ಕನ್ನಡದ ಕುವರಿ. ನಿರ್ಮಾಪಕ ಉಮಾಪತಿ ಅದ್ಧೂರಿಯಾಗಿ ಚಿತ್ರವನ್ನು ನಿರ್ಮಿಸಿದ್ದು, ತರುಣ್ ಸುಧೀರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಹಾಗೂ ಕ್ಯಾಮರಾಮ್ಯಾನ್ ಜೊತೆ ಆಶಾಭಟ್ ತರ್ಲೆ, ತಮಾಷೆ ಪೋಟೋಗಳು ವೈರಲ್ ಆಗಿವೆ.