ನಿನ್ನೆಯಿಂದ ಸಿನಿ ರಂಗದಲ್ಲಿ ದಚ್ಚು ಹವಾ ಸೃಷ್ಟಿಯಾಗಿದೆ. ಸಾವಿರಾರು ಚಿತ್ರಮಂದಿರಗಳಲ್ಲಿ ‘ರಾಬರ್ಟ್’ ಚಿತ್ರ ಅಬ್ಬರಿಸುತ್ತಿದೆ. ಕೇವಲ ಥಿಯೇಟರ್ಗಳಲ್ಲಿ ಮಾತ್ರವಲ್ಲದೆ ಬಾಕ್ಸ್ ಆಫೀಸ್ನಲ್ಲಿ ಸಹ ಧೂಳೆಬ್ಬಿಸಿದೆ.
ಕರ್ನಾಟಕದಲ್ಲಿ ಮೊದಲ ದಿನವೇ ಅಬ್ಬರದ ಓಟದಿಂದ ರಾಬರ್ಟ್ ಸುದ್ದಿಯಾಗಿದೆ. ಎರಡು ವರ್ಷಗಳ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಬಿಡುಗಡೆಯಾಗಿದ್ದು, 1200 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಾಬರ್ಟ್ ಪ್ರದರ್ಶನ ಶುರುವಾಗಿದೆ. ರಾಬರ್ಟ್ ಸಿನಿಮಾ ಹಾಡುಗಳೂ ಸಹ ಸೂಪರ್ ಹಿಟ್ ಆಗಿವೆ. ತೆಲುಗು ವರ್ಷನ್ ಮತ್ತು ಕನ್ನಡ ವರ್ಷನ್ ಹಾಡುಗಳು ಎಲ್ಲೆಡೆ ವೈರಲ್ ಆಗಿ ಸದ್ದು ಮಾಡುತ್ತಿವೆ.
ಈ ಮಧ್ಯೆ ಚಿತ್ರದ ಮೊದಲ ದಿನದ ಕಲೆಕ್ಷನ್ ಎಲ್ಲರ ಹುಬ್ಬೇರುವಂತಿದೆ. ಒಂದೇ ದಿನದಲ್ಲಿ 17 ಕೋಟಿಗೂ ಹೆಚ್ಚು ಗಳಿಸಿದ ರಾಬರ್ಟ್, ಆಂಧ್ರ -ತೆಲಂಗಾಣದಲ್ಲಿ 3 ಕೋಟಿಗೂ ಅಧಿಕ ಹಣವನ್ನು ಗಳಿಸಿದೆ. ಇದನ್ನು ಅಧಿಕೃತವಾಗಿ ಸಿನಿಮಾ ತಂಡವೇ ಅನೌನ್ಸ್ ಮಾಡಿದ್ದು, ಎಲ್ಲೆಡೆ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಕರ್ನಾಟಕದ ಪ್ರದೇಶವಾರು ಕಲೆಕ್ಷನ್:
- ಬಿಕೆಟಿ ಮತ್ತು ಸೌತ್ ಕೆನರಾ - 7 ಕೋಟಿ ರೂಪಾಯಿ
- ಎಂಎಂಸಿಎಚ್ - 2 ಕೋಟಿ ರೂಪಾಯಿ
- ದುರ್ಗ ಮತ್ತು ದಾವಣಗೆರೆ -2.24 ಕೋಟಿ ರೂಪಾಯಿ
- ಶಿವಮೊಗ್ಗ -1 ಕೋಟಿ ರೂಪಾಯಿ
- ಹೈದರಾಬಾದ್ ಕರ್ನಾಟಕ - 3 ಕೋಟಿ ರೂಪಾಯಿ
- ಬಾಂಬೆ ಕರ್ನಾಟಕ - 2 ಕೋಟಿ ರೂಪಾಯಿ