ETV Bharat / sitara

ಶ್ರೀನಿವಾಸ್​ ಮೂರ್ತಿ ನಿರ್ದೇಶನದಲ್ಲಿ ರಾವಣ ಆಗಿ ನಟಿಸ್ತಾರಾ ದರ್ಶನ್​​​...? - Sandalwood actor Darshan

ಹಿರಿಯ ನಟ ಶ್ರೀನಿವಾಸ್​ ಮೂರ್ತಿ 'ರಾವಣೇಶ್ವರ' ಎಂಬ ಚಿತ್ರವನ್ನು ನಿರ್ದೇಶಿಸಲು ಮುಂದಾಗಿದ್ದು ಈ ಪಾತ್ರಕ್ಕೆ ದರ್ಶನ್ ಬಿಟ್ಟರೆ ಬೇರೆ ಯಾವ ನಟ ಕೂಡಾ ಸರಿ ಹೊಂದುವುದಿಲ್ಲ ಎಂದು ಶ್ರೀನಿವಾಸ್ ಮೂರ್ತಿ ನಿರ್ಧರಿಸಿದ್ದಾರೆ.

Darshan may act as Ravana
ದರ್ಶನ್
author img

By

Published : Jul 8, 2020, 12:12 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. 'ಕುರುಕ್ಷೇತ್ರ' ಚಿತ್ರದಲ್ಲಿ ದುರ್ಯೋಧನನಾಗಿ ನಟಿಸಿರುವ ದರ್ಶನ್ ಇದೀಗ ರಾವಣನ ಪಾತ್ರ ಮಾಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

Darshan may act as Ravana
ಶ್ರೀನಿವಾಸ್ ಮೂರ್ತಿ

'ಕುರುಕ್ಷೇತ್ರ' ಚಿತ್ರದ ಆರಂಭದ ದಿನಗಳಲ್ಲೇ ಹಿರಿಯ ನಟ ಶ್ರೀನಿವಾಸ ಮೂರ್ತಿ ರಾವಣನ ಪಾತ್ರದ ಬಗ್ಗೆ ದರ್ಶನ್ ಅವರೊಂದಿಗೆ ಚರ್ಚಿಸಿದ್ದರು ಎನ್ನಲಾಗಿದೆ. ಶ್ರೀನಿವಾಸ ಮೂರ್ತಿ ಎಂದರೆ ದರ್ಶನ್​​​​ಗೆ ಎಲ್ಲಿಲ್ಲದ ಗೌರವ. ಏಕೆಂದರೆ ತಮ್ಮ ತಂದೆ ತೂಗುದೀಪ ಶ್ರೀನಿವಾಸ್ ಅವರ ಕಾಲದಿಂದಲೂ ಕಲಾಸೇವೆ ಮಾಡಿಕೊಂಡು ಬಂದಿರುವುದು. ಜೊತೆಗೆ ತಮ್ಮ ತಂದೆಯ ಹೆಸರು ಅದೇ ಆಗಿರುವುದು ಕೂಡಾ. ಶ್ರೀನಿವಾಸ್ ಮೂರ್ತಿ ಅವರ ಪ್ರಕಾರ ದುರ್ಯೋಧನ ಪಾತ್ರಕ್ಕೆ ದರ್ಶನ್ ಬಿಟ್ಟರೆ ಬೇರೆ ಯಾವ ನಟ ಕೂಡಾ ಆ ಪಾತ್ರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅದೇ ರೀತಿ ಈಗ ರಾವಣ ಪಾತ್ರ ಕೂಡಾ ಅವರಿಗೆ ಹೊಂದುತ್ತದೆ ಎನ್ನುತ್ತಾರೆ ಶ್ರೀನಿವಾಸಮೂರ್ತಿ.

Darshan may act as Ravana
ಶ್ರೀನಿವಾಸ್ ಮೂರ್ತಿ, ದರ್ಶನ್

ಇನ್ನು ದರ್ಶನ್ ಯಾವುದೇ ಪಾತ್ರವನ್ನು ಅಳೆದು ತೂಗಿ ಒಪ್ಪಿಕೊಳ್ಳುತ್ತಾರೆ ಎಂಬ ವಿಚಾರ ಶ್ರೀನಿವಾಸ್ ಮೂರ್ತಿ ಅವರಿಗೆ ಚೆನ್ನಾಗಿ ಗೊತ್ತು. ಆದ್ದರಿಂದ ರಾವಣೇಶ್ವರನ ಬಗ್ಗೆ ಹಲವಾರು ಪುಸ್ತಗಳನ್ನು ಓದಿದ್ದಾರೆ. ಸುಮಾರು 2 ವರ್ಷಗಳಿಂದ ಶ್ರೀನಿವಾಸ್​​ ಮೂರ್ತಿ ಸುಮಾರು 18 ಬಾರಿ 'ರಾವಣೇಶ್ವರ' ಕಥಾವಸ್ತು, ಚಿತ್ರಕಥೆಯನ್ನು ತಿದ್ದಿ ಸರಿಪಡಿಸಿದ್ದಾರೆ.

Darshan may act as Ravana
ದುರ್ಯೋಧನ ಪಾತ್ರದಲ್ಲಿ ದರ್ಶನ್​

'ರಾವಣೇಶ್ವರ' ಚಿತ್ರವನ್ನು ಶ್ರೀನಿವಾಸ್​ ಮೂರ್ತಿ ಅವರೇ ನಿರ್ದೇಶಿಸುತ್ತಿರುವುದು ದರ್ಶನ್ ಅವರಿಗೆ ಬಹಳ ಖುಷಿಯಾಗಿದೆಯಂತೆ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಸಂಭಾಷಣೆ ಹೇಳುವಾಗ ಅದರ ಬಗ್ಗೆ ದರ್ಶನ್ ಶ್ರೀನಿವಾಸ್​​ ಮೂರ್ತಿ ಅವರೊಂದಿಗೆ ಚರ್ಚಿಸುತ್ತಿದ್ದರಂತೆ.

ಇನ್ನು 'ರಾವಣೇಶ್ವರ' ಚಿತ್ರವನ್ನು ಯಾರು ನಿರ್ಮಿಸುತ್ತಿದ್ದಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ ರಾವಣನ ಪಾತ್ರವನ್ನು ದರ್ಶನ್ ಬಿಟ್ಟರೆ ಬೇರೆ ಯಾವ ನಟ ಕೂಡಾ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಶ್ರೀನಿವಾಸ್​ ಮೂರ್ತಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.