ETV Bharat / sitara

'ರಾಬರ್ಟ್' ರಿಲೀಸ್​​​​​​ಗೂ ಮುನ್ನವೇ ಹೊಸ ದಾಖಲೆ ಮಾಡಲು ಹೊರಟ ದಚ್ಚು ಅಭಿಮಾನಿಗಳು..! - Darshan cutouts In front of Theatres

'ರಾಬರ್ಟ್' ಬಿಡುಗಡೆಗೆ ಮುನ್ನ ದರ್ಶನ್ ಅಭಿಮಾನಿಗಳು ಚಿತ್ರಮಂದಿರದ ಮುಂದೆ ದರ್ಶನ್ ಅಭಿನಯದ 13 ವಿಭಿನ್ನ ಸಿನಿಮಾಗಳ ಕಟೌಟ್ ನಿಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಸಿನಿಮಾ ಮಾರ್ಚ್ 11 ರಂದು ಬಿಡುಗಡೆಯಾಗುತ್ತಿದೆ.

Darshan cutouts
ದರ್ಶನ್ ಕಟೌಟ್
author img

By

Published : Mar 4, 2021, 7:49 PM IST

ಕನ್ನಡ ಚಿತ್ರರಂಗ ಮಾತ್ರವಲ್ಲದೆ ತೆಲುಗು ಸಿನಿಮಾ ರಂಗದಲ್ಲೂ ಸದ್ಯಕ್ಕೆ ಸುದ್ದಿಯಲ್ಲಿರುವ ಸಿನಿಮಾ ಎಂದರೆ ದರ್ಶನ್ ಅಭಿನಯದ 'ರಾಬರ್ಟ್'. ಮಾರ್ಚ್ 11 ರ ಶಿವರಾತ್ರಿಯಂದು ಸಿನಿಮಾ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆಗೆ 7 ದಿನಗಳಷ್ಟೇ ಬಾಕಿ ಉಳಿದಿದ್ದು ಚಿತ್ರತಂಡ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿ ಇದೆ.

ದರ್ಶನ್ ಕಟೌಟ್​​​ಗಳು

ಇದನ್ನೂ ಓದಿ: ವಿಶೇಷ ಚೇತನ ಮಕ್ಕಳ ಮುಂದೆ ಬೊಂಬಾಟ್ ಡೈಲಾಗ್ ಹೊಡೆದ 'ರಾಬರ್ಟ್'...!

ಮತ್ತೊಂದೆಡೆ ದರ್ಶನ್ ಅಭಿಮಾನಿಗಳು 'ರಾಬರ್ಟ್' ಸಿನಿಮಾ ಬಿಡುಗಡೆಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಜೆ. ಪಿ.ನಗರದ ಡಿ ಬಾಸ್ ಅಭಿಮಾನಿಗಳ ಸಂಘದ ವತಿಯಿಂದ ಸಿದ್ದೇಶ್ವರ ಚಿತ್ರಮಂದಿರ ಒಂದರಲ್ಲೇ 13 ಕಟೌಟ್ ಹಾಕುವ ಮೂಲಕ ಹೊಸ ದಾಖಲೆ ನಿರ್ಮಿಸಲು ಪ್ಲ್ಯಾನ್ ಮಾಡಿದ್ದಾರೆ. ಇವು ದರ್ಶನ್ ಅಭಿನಯದ ಬೇರೆ ಬೇರೆ ಸಿನಿಮಾದ ಕಟೌಟ್​​ಗಳಾಗಿವೆ. ಈ ವಿಡಿಯೋವನ್ನು ದರ್ಶನ್ ಫ್ಯಾನ್ಸ್ ಕ್ಲಬ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ರಾಬರ್ಟ್' ಚಿತ್ರವನ್ನು ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಿಸಿದ್ದು ತರುಣ್ ಸುಧೀರ್ ನಿರ್ದೇಶಿಸಿದ್ದಾರೆ. ನಾಯಕಿಯಾಗಿ ಶಿವಮೊಗ್ಗ ಚೆಲುವೆ ಆಶಾಭಟ್ ನಟಿಸಿದ್ದಾರೆ. ಇವರೊಂದಿಗೆ ಜಗಪತಿ ಬಾಬು, ದೇವರಾಜ್, ರವಿಶಂಕರ್, ವಿನೋದ್ ಪ್ರಭಾಕರ್ ಹಾಗೂ ಇನ್ನಿತರರು ನಟಿಸಿದ್ದಾರೆ.

Darshan cutouts
ಥಿಯೇಟರ್​ ಬಳಿ ನಿಲ್ಲಿಸಲು ಸಿದ್ಧವಾದ ಕಟೌಟ್​​ಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.