ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಸೀಟು ಭರ್ತಿಗೆ ಸರ್ಕಾರ ಅವಕಾಶ ನೀಡಿದ್ದು ನಿನ್ನೆ ಪ್ರಜ್ವಲ್ ದೇವರಾಜ್ ಅಭಿನಯದ 'ಇನ್ಸ್ಪೆಕ್ಟರ್ ವಿಕ್ರಂ' ಸಿನಿಮಾ ಸೇರಿದಂತೆ ಮೂರು ಕನ್ನಡ ಸಿನಿಮಾಗಳು ಬಿಡುಗಡೆಯಾಗಿದೆ. ಅಭಿಮಾನಿಗಳು ಕೂಡಾ ಸಿನಿಮಾಗೆ ಬಂದು ಪ್ರಜ್ವಲ್ ದೇವರಾಜ್ ಆ್ಯಕ್ಟಿಂಗ್ಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ.
-
ಇನ್ಸ್ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಡಿ ಬಾಸ್ ಎಂಟ್ರಿಗೆ ಚನ್ನಪಟ್ಟಣದ ಅಭಿಮಾನಿಗಳು ಪೂಜೆ ಸಲ್ಲಿಸಿ ಅಭಿಮಾನ ಮೆರೆದ ಕ್ಷಣದ ವಿಡಿಯೋ 🔥#nammachitraranga #Inspectorvikram #prajwaldevaraj #DBoss #entry pic.twitter.com/i5lv88BVS8
— Nammachitraranga (@n_chitraranga) February 5, 2021 " class="align-text-top noRightClick twitterSection" data="
">ಇನ್ಸ್ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಡಿ ಬಾಸ್ ಎಂಟ್ರಿಗೆ ಚನ್ನಪಟ್ಟಣದ ಅಭಿಮಾನಿಗಳು ಪೂಜೆ ಸಲ್ಲಿಸಿ ಅಭಿಮಾನ ಮೆರೆದ ಕ್ಷಣದ ವಿಡಿಯೋ 🔥#nammachitraranga #Inspectorvikram #prajwaldevaraj #DBoss #entry pic.twitter.com/i5lv88BVS8
— Nammachitraranga (@n_chitraranga) February 5, 2021ಇನ್ಸ್ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಡಿ ಬಾಸ್ ಎಂಟ್ರಿಗೆ ಚನ್ನಪಟ್ಟಣದ ಅಭಿಮಾನಿಗಳು ಪೂಜೆ ಸಲ್ಲಿಸಿ ಅಭಿಮಾನ ಮೆರೆದ ಕ್ಷಣದ ವಿಡಿಯೋ 🔥#nammachitraranga #Inspectorvikram #prajwaldevaraj #DBoss #entry pic.twitter.com/i5lv88BVS8
— Nammachitraranga (@n_chitraranga) February 5, 2021
ವಿಶೇಷ ಎಂದರೆ 'ಇನ್ಸ್ಪೆಕ್ಟರ್ ವಿಕ್ರಂ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ದರ್ಶನ್ ಎಂಟ್ರಿಯಾಗುತ್ತಿದ್ದಂತೆ ನಾನೂ ಕೂಡಾ ಸೀಟಿ ಹೊಡೆದು ಸಂಭ್ರಮಿಸಿದೆ ಎಂದು ಸ್ವತ: ಪ್ರಜ್ವಲ್ ದೇವರಾಜ್ ನಿನ್ನೆ ಹೇಳಿದ್ದರು. ಚನ್ನಪಟ್ಟಣದಲ್ಲಿ ಅಭಿಮಾನಿಗಳು ದರ್ಶನ್ ಎಂಟ್ರಿಯನ್ನುಇನ್ನೂ ವಿಭಿನ್ನ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಸಿನಿಮಾದಲ್ಲಿ ದರ್ಶನ್ ಎಂಟ್ರಿ ಆಗುತ್ತಿದ್ದಂತೆ ಅಭಿಮಾನಿಗಳು ಸ್ಕ್ರೀನ್ಗೆ ಆರತಿ ಮಾಡಿ , ಹೂ ಎರಚಿ ಕುಂಬಳಕಾಯಿ ಹೊಡೆದಿದ್ದಾರೆ. ಲಾಕ್ಡೌನ್ ತೆರವಾದ ನಂತರ ದರ್ಶನ್ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಇದಾಗಿದೆ. ಅಭಿಮಾನಿಗಳು ಹೀಗೆ ಸ್ಕ್ರೀನ್ ಮೇಲೆ ದರ್ಶನ್ಗೆ ಆರತಿ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ದರ್ಶನ್ ಎಂಟ್ರಿಯಾದಾಗ ಶಿಳ್ಳೆ ಹೊಡೆದ್ರಂತೆ ಪ್ರಜ್ವಲ್ ದೇವರಾಜ್
ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ಮಾರ್ಚ್ 11 ರಂದು ಮಹಾಶಿವರಾತ್ರಿಯಂದು ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ತೆಲುಗು ಟೀಸರ್ ಕೂಡಾ ಬಿಡುಗಡೆಯಾಗಿದ್ದು ಆಂಧ್ರ ಹಾಗೂ ತೆಲಂಗಾಣದಲ್ಲಿ ಟೀಸರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ 'ರಾಬರ್ಟ್' ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದಾರೆ. ದರ್ಶನ್ ಜೊತೆಯಾಗಿ ಆಶಾಭಟ್ ನಟಿಸಿದ್ದು ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ.