ಲೈಟ್ಮ್ಯಾನ್ ಆಗಿ ಚಿತ್ರರಂಗದಲ್ಲಿ ಕೆಲಸ ಆರಂಭಿಸಿ ಈಗ ಅಭಿಮಾನಿಗಳ ಮೆಚ್ಚಿನ ಚಾಲೆಂಜಿಂಗ್ ಸ್ಟಾರ್ ಆಗಿರುವ ನಟ ದರ್ಶನ್, ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟು 23 ವರ್ಷಗಳೇ ಕಳೆದಿವೆ. ಈ ಸುಧೀರ್ಘ ಜರ್ನಿಯಲ್ಲಿ ದರ್ಶನ್ 52 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಡಿ ಬಾಸ್, ದಾಸ, ಯಜಮಾನ ಎಂದೆಲ್ಲಾ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ದರ್ಶನ್ ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದರ್ಶನ್ ಚಿತ್ರರಂಗದಲ್ಲಿ 23 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಅಲ್ಲದೆ ಇದೇ ಖುಷಿಯಲ್ಲಿ ರಾಜ್ಯಾದ್ಯಂತ ಪೂಜೆ ಪುನಸ್ಕಾರ ಮಾಡಿಸಿ ಮೆಚ್ಚಿನ ನಟನಿಗೆ ಶುಭ ಕೊರಿದ್ದಾರೆ. ಮೈಸೂರಿನ ದರ್ಶನ್ ಆಭಿಮಾನಿ ಬಳಗ ಅನಾಥಾಶ್ರಮವೊಂದಕ್ಕೆ ಭೇಟಿ ನೀಡಿ, ಅನಾಥ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿಸಿದ್ದಾರೆ. ಅಲ್ಲದೆ ಕೊರೊನಾದಿಂದ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅನಾಥ ಮಕ್ಕಳಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ನೀಡುವ ಮೂಲಕ ಜನ ಮೆಚ್ಚುವ ಕೆಲಸ ಮಾಡಿದ್ದಾರೆ.