ETV Bharat / sitara

ಸ್ನೇಹಿತನ ಕುಟುಂಬಕ್ಕೆ ಆಧಾರಸ್ತಂಭವಾದ ದೊಡ್ಡ ಮನಸಿನ ದಚ್ಚು.. ಬುಲೆಟ್ ಪ್ರಕಾಶ್ ಪತ್ನಿಗೆ ಹೇಳಿದ್ದಿಷ್ಟು.. - ಬುಲೆಟ್​​ ಪ್ರಕಾಶ ನಿಧನಕ್ಕೆ ದರ್ಶನ್​ ಕಂಬನಿ

ಒಂದು ಕಾಲದಲ್ಲಿ ಆಪ್ತ ಸ್ನೇಹಿತರಾಗಿದ್ದ ದರ್ಶನ್​ ಮತ್ತು ಬುಲೆಟ್​ ಪ್ರಕಾಶ್​​ ಕೆಲ ಕಾರಣಗಳಿಂದ ಮನಸ್ತಾಪ ಉಂಟಾಗಿ ಬೇರೆ ಬೇರೆಯಾಗಿದ್ರು. ಇದಾದ ಬಳಿಕ ಮತ್ತೆ ದರ್ಶನ್ ಹಾಗೂ ಬುಲೆಟ್ ಪ್ರಕಾಶ್ ತಮ್ಮ ಸ್ನೇಹ ಮುಂದುವರೆಸಿ, ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ರು.

Darshan expressing condolence about bullet prakash death
ಸ್ನೇಹಿತನ ನಿಧನಕ್ಕೆ ದರ್ಶನ್​ ಸಂತಾಪ
author img

By

Published : Apr 7, 2020, 11:05 AM IST

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಮ್ಯಾನರಿಸಂನಿಂದಲೇ ನಕ್ಕು ನಲಿಸುತ್ತಿದ್ದ ಬುಲೆಟ್ ಪ್ರಕಾಶ್ ಇನ್ನೂ ನೆನಪು ಮಾತ್ರ.. ಕಿಡ್ನಿ ಹಾಗೂ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಬುಲೆಟ್ ಪ್ರಕಾಶ್ ನಿನ್ನೆ ಆಸ್ಪತ್ರೆಯಲ್ಲಿ ನಿಧನರಾದರು.

Darshan expressing condolence about bullet prakash death
ಸ್ನೇಹಿತನ ನಿಧನಕ್ಕೆ ದರ್ಶನ್​ ಸಂತಾಪ..

ಈ ವಿಷ್ಯ ತಿಳಿದ ದರ್ಶನ್​ ಕಂಬನಿ ಮಿಡಿದಿದ್ದಾರೆ. ತಮ್ಮ ಟ್ವಿಟರ್​ ಖಾತೆಯಲ್ಲಿ ಗೆಳೆಯನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿರುವ ಅವರು, ಇದೀಗ ಮತ್ತೊಂದು ಜವಾಬ್ದಾರಿ ಹೊತ್ತು ಕೊಂಡಿದ್ದಾರೆ. ಬುಲೆಟ್ ಪ್ರಕಾಶ್​ ಮಗಳ ಮದುವೆಯ ಜವಾಬ್ದಾರಿಯನ್ನ ದರ್ಶನ್ ವಹಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಆಪ್ತ ಸ್ನೇಹಿತರಾಗಿದ್ದ ದರ್ಶನ್​ ಮತ್ತು ಬುಲೆಟ್​ ಪ್ರಕಾಶ್​​ ಕೆಲ ಕಾರಣಗಳಿಂದ ಮನಸ್ತಾಪ ಉಂಟಾಗಿ ಬೇರೆ ಬೇರೆಯಾಗಿದ್ರು. ಇದಾದ ಬಳಿಕ ಮತ್ತೆ ದರ್ಶನ್ ಹಾಗೂ ಬುಲೆಟ್ ಪ್ರಕಾಶ್ ತಮ್ಮ ಸ್ನೇಹ ಮುಂದುವರೆಸಿ, ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ರು.

ಈಗ ಗೆಳೆಯನ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿರೋ ದರ್ಶನ್​​, ಪ್ರಕಾಶ್​ ಅವರ ಮಗಳ ಮದುವೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದು ನಿರ್ಮಾಪಕ ರಾಮಮೂರ್ತಿ ಹೇಳಿದ್ದಾರೆ. ನಿನ್ನೆ ಆಸ್ಪತ್ರೆಯಲ್ಲಿ ಇರುವಾಗಲೇ ದರ್ಶನ್ ಬುಲೆಟ್ ಪ್ರಕಾಶ್ ಪತ್ನಿ ಮಂಜುಳಾಗೆ ಮಗಳ ಮದುವೆಯ ಹೊಣೆ ನಾನು ವಹಿಸಿಕೊಳ್ಳುತ್ತೀನಿ ಅಂತಾ ಫೋನ್‌ನಲ್ಲೇ ಹೇಳಿದ್ರಂತೆ. ಇದನ್ನ ಸ್ವತಃ ದರ್ಶನ್ ಆತ್ಮೀಯರಲ್ಲೊಬ್ಬರಾದ ನಿರ್ಮಾಪಕ ರಾಮಮೂರ್ತಿ ಹೇಳಿಕೊಂಡಿದ್ದಾರೆ. ಗೆಳೆಯನ ಅಂತಿಮ ದರ್ಶನ ಪಡೆಯುವುದಾಗಿ ಹೇಳಿದರು. ಆದರೆ, ಎಲ್ಲಾ ಕಡೆ ಕೊರೊನಾ ಭೀತಿ ಹೆಚ್ಚಾಗಿರೋದ್ರಿಂದ ತನ್ನಿಂದ ತೊಂದರೆ ಆಗಬಾರದು ಅಂತಾ ದರ್ಶನ್, ಬುಲೆಟ್ ಪ್ರಕಾಶ್‌ ಅಂತಿಮ ದರ್ಶನ ಪಡೆಯುತ್ತಿಲ್ವಂತೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.