ಸ್ಯಾಂಡಲ್ವುಡ್ ಡಿ ಬಾಸ್ ದರ್ಶನ್, ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿಯನ್ನು ಭೇಟಿಯಾಗಿದ್ದಾರೆ. ಹಾಗಾದ್ರೆ ಇವರಿಬ್ಬರ ಕಾಂಬಿನೇಷನ್ನಲ್ಲಿ ಸಿನಿಮಾ ಏನಾದ್ರೂ ಬರ್ತಿದ್ಯಾ ಅಂತ ಅಂದ್ಕೊಂಡ್ರಾ? ಹಾಗೇನು ಇಲ್ಲ.

ಸದ್ಯ ಮೈಸೂರಿನಲ್ಲಿ ರಿಷಬ್ ಶೆಟ್ಟಿ ನಟನೆಯ ಹರಿಕಥೆ ಅಲ್ಲಾ... ಗಿರಿಕಥೆ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈ ಸಲುವಾಗಿ ದರ್ಶನ್ ಸಿನಿಮಾ ಸೆಟ್ಗೆ ಭೇಟಿ ನೀಡಿ ಮತುಕತೆ ನಡೆಸಿದ್ದಾರೆ. ಮೈಸೂರಿನಲ್ಲಿ ಯಾವುದೇ ಸಿನಿಮಾ ಶೂಟ್ ಆದ್ರೂ ಕೂಡ ದರ್ಶನ್ ಶೂಟಿಂಗ್ ಸೆಟ್ಗೆ ಭೇಟಿ ಕೊಟ್ಟು ಚಿತ್ರತಂಡಕ್ಕೆ ಶುಭ ಕೋರುತ್ತಾರೆ.
ಸೆಟ್ಗೆ ಹೋಗಿದ್ದ ದರ್ಶನ್ ಜೊತೆ ರಿಷಬ್ ಶೆಟ್ಟಿ ಕಾರ್ ಡ್ರೈವ್ ಹೋಗಿದ್ದಾರೆ. ಈ ಖುಷಿಯನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿರುವ ರಿಷಬ್, ದರ್ಶನ್ ಜೊತೆ ಕಾರಿನಲ್ಲಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಫೋಟೋಗಳನ್ನು ಹಾಕಿರುವ ಕಿರಿಕ್ ಪಾರ್ಟಿ ನಿರ್ದೇಶಕ, ನನ್ನ ಡ್ರೀಮ್ ಕಾರ್ ಫಾರ್ಡ್ಮುಸ್ಟಾರ್. ನಿನ್ನೆ ಸಂಜೆ ದರ್ಶನ್ ಸರ್ ತಮ್ಮ ಕಾರು ಮುಸ್ಟಾಂಗ್ ಜಿ.ಟಿ.ಯಲ್ಲಿ ಒಂದು ಡ್ರೈವ್ ಕರೆದುಕೊಂಡು ಹೋದಾಗ ಆದ ಖುಷಿ ಅಷ್ಟಿಷ್ಟಲ್ಲ. ಧನ್ಯವಾದಗಳು ದರ್ಶನ್ ಎಂದು ಬರೆದಿದ್ದಾರೆ.


ಇನ್ನು ಇತ್ತೀಚೆಗೆ ರಿಷಬ್ ಅಭಿನಯದ ಹರಿಕಥೆ ಅಲ್ಲಾ... ಗಿರಿಕಥೆ ಚಿತ್ರದಲ್ಲಿ ಬದಲಾವಣೆಯೊಂದು ಆಗಿತ್ತು. ಚಿತ್ರದ ನಿರ್ದೇಶಕ ಗಿರಿಕೃಷ್ಣ ಅನಾರೋಗ್ಯದ ಕಾರಣದಿಂದ ಚಿತ್ರತಂಡದಿಂದ ದೂರ ಉಳಿದಿದ್ದು, ಅವರ ಸ್ಥಾನಕ್ಕೆ ಕರಣ್ ಅನಂತ್ ಮತ್ತು ಅನಿರುದ್ಧ ಮಹೇಶ್ ಸೇರಿಕೊಂಡಿದ್ದಾರೆ.