ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿನ್ನೆಯಷ್ಟೇ ರಾಜರಾಜೇಶ್ವರಿ ನಗರದ ನಿವಾಸದಿಂದ ಹತ್ತಕ್ಕೂ ಹೆಚ್ಚು ಸ್ನೇಹಿತರ ಜೊತೆ ಲಾಂಗ್ ಬೈಕ್ ರೈಡಿಂಗ್ ಹೊರಟಿದ್ರು. ಬೆಂಗಳೂರಿನಿಂದ ಮೈಸೂರಿಗೆ ಹೊರಟ ದರ್ಶನ್, ಪ್ರಜ್ವಲ್ ದೇವರಾಜ್, ಚಿಕ್ಕಣ್ಣ, ನಿರ್ಮಾಪಕ ಉಪಮಾತಿ, ಯುವ ನಿರ್ದೇಶಕ ಪನ್ನಗಾಭರಣ ಸೇರಿದಂತೆ ಹಲವು ಸ್ನೇಹಿತರು ಹತ್ತು ಬೈಕ್ಗಳಲ್ಲಿ ಮೈಸೂರಿನಲ್ಲಿರುವ ದರ್ಶನ್ ಫಾರಂ ಹೌಸ್ ತಲುಪಿದ್ದರು.
![darsha plying cricket with friends](https://etvbharatimages.akamaized.net/etvbharat/prod-images/kn-bng-02-friends-jothie-darshan-mastu-cricket-match-video-7204735_18112020162428_1811f_1605696868_856.jpg)
ಅಲ್ಲಿ ದರ್ಶನ್ ಆಪ್ತರೊಬ್ಬರ ಹುಟ್ಟುಹಬ್ಬ ಆಚರಿಸಿ ಮತ್ತೆ ಬೈಕ್ ಏರಿ ಸೀದಾ ಕುಶಾಲನಗರ ಸೇರಿದ್ದಾರೆ. ಕುಶಾಲನಗರದ ರೆಸಾರ್ಟ್ ವೊಂದರಲ್ಲಿ ರಾತ್ರಿ ಬೀಡು ಬಿಟ್ಟಿದ್ದ ದಾಸನ ಟೀಂ, ಬೆಳಗ್ಗೆ ಕ್ರಿಕೆಟ್ ಆಟ ಆಡುವ ಮೂಲಕ ಸಖತ್ ಎಂಜಾಯ್ ಮಾಡಿದೆ.
![darsha plying cricket with friends](https://etvbharatimages.akamaized.net/etvbharat/prod-images/kn-bng-02-friends-jothie-darshan-mastu-cricket-match-video-7204735_18112020162428_1811f_1605696868_531.jpg)
ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಸೇರಿ ಎರಡು ಟೀಂ ಮಾಡಿದ್ದರು. ಈ ತಂಡದಲ್ಲಿ ದರ್ಶನ್ ಟೀಂ, ಉಮಾಪತಿ ತಂಡದ ವಿರುದ್ಧ ಗೆಲುವು ಸಾಧಿಸಿದೆ. ಉಮಾಪತಿ ತಂಡದಲ್ಲಿದ್ದ ಪ್ರಜ್ವಲ್ ದೇವರಾಜ್ ಔಟ್ ಮಾಡಿದಾಗ ದರ್ಶನ್ ತಮ್ಮ ತಂಡದೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ.
ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ. ಮೂರು ದಿನಗಳ ಕಾಲ ದರ್ಶನ್ ಸ್ನೇಹಿತರ ಜೊತೆಗೂಡಿ ಮಡಿಕೇರಿ ಸೇರಿದಂತೆ ಹಲವು ಸ್ಥಳಗಳಿಗೆ ಬೈಕ್ ರೈಡಿಂಗ್ ಹೋಗಲಿದ್ದಾರೆ.