ETV Bharat / sitara

ಡಾರ್ಲಿಂಗ್ ಕೃಷ್ಣನೊಂದಿಗೆ ಡ್ಯೂಯೆಟ್ ಹಾಡಲಿದ್ದಾರಾ ರಾಧಿಕಾ ಕುಮಾರಸ್ವಾಮಿ..? - Krishna romance with Radhika

ಡಾರ್ಲಿಂಗ್ ಕೃಷ್ಣ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು ಕೃಷ್ಣನಿಗೆ ನಾಯಕಿಯಾಗಿ ರಾಧಿಕಾ ಕುಮಾರಸ್ವಾಮಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ನಾಗಶೇಖರ್ ನಿರ್ದೇಶಿಸಲಿದ್ದಾರೆ.

Darling krishna committed new movie
ರಾಧಿಕಾ ಕುಮಾರಸ್ವಾಮಿ
author img

By

Published : May 25, 2020, 10:58 PM IST

'ಲವ್​​ ಮಾಕ್​​ಟೈಲ್​​​​' ಸಿನಿಮಾ ನಂತರ ಸ್ಯಾಂಡಲ್​​​​​​​​ವುಡ್​​​​​​ನಲ್ಲಿ ಡಾರ್ಲಿಂಗ್ ಕೃಷ್ಣನಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಲಾಕ್​​ಡೌನ್​ ಆರಂಭವಾದಾಗಿನಿಂದ ಲವ್ ಮಾಕ್​​ಟೈಲ್ ಸೀಕ್ವೆಲ್​ ಸ್ಕ್ರಿಪ್ಟ್​​​ನಲ್ಲಿ ಬ್ಯುಸಿ ಇದ್ದ ಕೃಷ್ಣ, ಸದ್ದಿಲ್ಲದೆ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

Darling krishna committed new movie
ಡಾರ್ಲಿಂಗ್ ಕೃಷ್ಣ

'ಸಂಜು ವೆಡ್ಸ್ ಗೀತಾ' ಹಾಗೂ‌ 'ಮೈನಾ' ಅಂತಹ ರೊಮ್ಯಾಂಟಿಕ್ ಸಿನಿಮಾಗಳನ್ನು ನಿರ್ದೇಶಿಸಿದ್ದ ನಾಗಶೇಖರ್ ಜೊತೆ ಕೃಷ್ಣ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಡಾರ್ಲಿಂಗ್ ಕೃಷ್ಣ ಜೊತೆ ನಿರ್ದೇಶಕ ನಾಗಶೇಖರ್ ಮಾತುಕತೆ ನಡೆಸಿದ್ದು, ಇವರಿಬ್ಬರ ಕಾಂಬಿನೇಷನ್​​​​​​​​​​​​​​ನಲ್ಲಿ ರೊಮ್ಯಾಂಟಿಕ್ ಸಿನಿಮಾ ಬರುವ ಎಲ್ಲಾ ಲಕ್ಷಣಗಳು ಇವೆ ಎನ್ನಲಾಗುತ್ತಿದೆ. ಇನ್ನು ಈ ಚಿತ್ರಕ್ಕೆ 'ಶ್ರೀ ಕೃಷ್ಣ@gmail.Com' ಅಂತಾ ಟೈಟಲ್ ಇಡಲಾಗಿದೆಯಂತೆ. ಈಗಾಗಲೇ ಈ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಕೂಡಾ ಆರಂಭವಾಗಿದೆ ಎನ್ನಲಾಗುತ್ತಿದೆ.

Darling krishna committed new movie
ನಿರ್ದೇಶಕ ನಾಗಶೇಖರ್

ಈ ಗ್ಯಾಪ್​​​​​ನಲ್ಲಿ ನಿರ್ದೇಶಕ ನಾಗಶೇಖರ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ಡಾರ್ಲಿಂಗ್ ಕೃಷ್ಣ ಅವರಿಗೆ ಜೋಡಿ ಮಾಡಲು ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಧಿಕಾ ಕುಮಾರಸ್ವಾಮಿ ಈಗಾಗಲೇ ಕಥೆ ಕೇಳಿದ್ದು ಗ್ರೀನ್ ಸಿಗ್ನಲ್ ನೀಡಿದ್ದಲ್ಲಿ ಕೃಷ್ಣ-ರಾಧಿಕಾ ತೆರೆ ಮೇಲೆ ಡ್ಯೂಯೆಟ್ ಹಾಡುವುದು ಖಂಡಿತ.

Darling krishna committed new movie
ರಾಧಿಕಾ ಕುಮಾರಸ್ವಾಮಿ

ಇದೊಂದು ಲವ್, ಕಾಮಿಡಿ ಸಿನಿಮಾ ಆಗಿದ್ದು ಸದ್ಯಕ್ಕೆ ಈ ಚಿತ್ರದ ಮ್ಯೂಸಿಕ್​​​ಗೆ ಸಂಬಂಧಿಸಿದ ಕೆಲಸಗಳು ಆರಂಭವಾಗಿದೆ. ಚಿತ್ರಕ್ಕೆ ಸತ್ಯ ಹೆಗ್ಡೆ ಕ್ಯಾಮರಾ ಕೆಲಸ ಇದ್ದು, 'ಮೈನಾ' ಚಿತ್ರದಲ್ಲಿ ಹಿಟ್ ಹಾಡುಗಳನ್ನು ನೀಡಿದ್ದ ಜೆಸ್ಸಿ ಗಿಫ್ಟ್ ಸಂಗೀತ ನೀಡಲಿದ್ದಾರೆ. ಸಂದೇಶ್ ನಾಗರಾಜ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ತಮಿಳು ಚಿತ್ರವೊಂದರ ಕೆಲಸ ಮುಗಿಸಿರುವ, ನಾಗಶೇಖರ್ ಲಾಕ್​​​​​​​​​​​​ಡೌನ್ ಮುಗಿದ ನಂತರ ಈ ಹೊಸ ಸಿನಿಮಾ ಶೂಟಿಂಗ್ ಆರಂಭಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

Darling krishna committed new movie
ನಾಗಶೇಖರ್, ಸಂದೇಶ್ ನಾಗರಾಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.