ಸ್ಯಾಂಡಲ್ವುಡ್ನಲ್ಲಿ ಮನಸಾಲಾಜಿ ಸಿನಿಮಾ ಮೂಲಕ ಗಮನ ಸೆಳೆದ ನಿರ್ದೇಶಕ ದೀಪಕ್ ಅರಸ್ ಬಹಳ ವರ್ಷಗಳ ಬಳಿಕ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಈ ಚಿತ್ರಕ್ಕೆ 'ಶುಗರ್ ಫ್ಯಾಕ್ಟರಿ' ಎಂಬ ಟೈಟಲ್ ಇಡಲಾಗಿದೆ.
ಸದ್ಯ ಗಾಂಧಿನಗರದಲ್ಲಿ ಶೀರ್ಷಿಕೆಯಿಂದ ಗಮನ ಸೆಳೆಯುತ್ತಿರುವ ಈ ಚಿತ್ರಕ್ಕೆ 'ಲವ್ ಮಾಕ್ಟೈಲ್ದಿಂದ ಬೇಡಿಕೆ ಹೆಚ್ಚಿಸಿಕೊಂಡಿರುವ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮೂವರು ನಾಯಕಿಯರು ಅಭಿನಯಿಸುತ್ತಿದ್ದು, ಮೊದಲ ನಾಯಕಿಯಾಗಿ ಸೋನಾಲ್ ಮಾಂಟೆರೊ ಆಯ್ಕೆಯಾಗಿದ್ದಾರೆ. ದ್ವಿತೀಯ ನಾಯಕಿಯಾಗಿ ಗ್ಲಾಮರ್ ಬೆಡಗಿ ಅದ್ವಿತಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.

ತಮ್ಮ ಅಮೋಘ ಅಭಿನಯದ ಮೂಲಕ ಮನೆಮಾತಾಗಿರುವ ಅದ್ವಿತಿ ಶೆಟ್ಟಿ, ಶುಗರ್ ಫ್ಯಾಕ್ಟರಿ ಸೇರಿಕೊಂಡು ಡಾರ್ಲಿಂಗ್ ಕೃಷ್ಣ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಇನ್ನು ಮೂರನೇ ನಾಯಕಿ ಯಾರು? ಎಂಬುದು ಸದ್ಯದಲ್ಲೇ ತಿಳಿಯಲಿದೆ. ಕಬೀರ್ ರಫಿ ಸಂಗೀತ ನಿರ್ದೇಶನ ಹಾಗೂ ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿರುವ, ಶುಗರ್ ಫ್ಯಾಕ್ಟರಿಗೆ ಬಹದ್ದೂರ್ ಚೇತನ್ ಕುಮಾರ್ ಸಂಭಾಷಣೆ ಬರೆಯುತ್ತಿದ್ದಾರೆ.

ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್. ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮುಂದಿನ ವರ್ಷದಿಂದ ಶುಗರ್ ಫ್ಯಾಕ್ಟರಿ ಸಿನಿಮಾ ಚಿತ್ರೀಕರಣ ಆರಭವಾಗಲಿದೆ.