ETV Bharat / sitara

ಹೊಸ ವೆಬ್​ ಸೀರೀಸ್ ಮೂಲಕ ಮತ್ತೆ ನಗಿಸಲು ಬರ್ತಿದ್ದಾರೆ 'ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್' - ದಾನೀಶ್ ಸೇಠ್ ಅಭಿನಯದ ಹಂಬಲ್ ಪೊಲಿಟಿಷಿಯನ್ ನೊಗ್ ರಾಜ್ ವೆಬ್​ ಸೀರೀಸ್ ರೀಲಿಸ್​

ಈ ವೆಬ್‌ ಸೀರೀಸ್‌ ಅಧಿಕಾರದ ದುರಾಸೆ ಮತ್ತು ಭ್ರಷ್ಟಾಚಾರವನ್ನು ವಿಡಂಬನಾತ್ಮಕವಾಗಿ ನಿರೂಪಿಸುವ ಮೂಲಕ ಪ್ರೇಕ್ಷಕರನ್ನು ನಗಿಸುವ ಭರವಸೆ ಮೂಡಿಸಿದೆ.

ಹಂಬಲ್ ಪೊಲಿಟಿಷಿಯನ್ ನೊಗ್ ರಾಜ್
ಹಂಬಲ್ ಪೊಲಿಟಿಷಿಯನ್ ನೊಗ್ ರಾಜ್
author img

By

Published : Jan 4, 2022, 9:32 PM IST

ಕನ್ನಡ ಚಿತ್ರರಂಗದಲ್ಲಿ ಬೆಳ್ಳಿ ತೆರೆಯ ಮೇಲೆ ಪ್ರೇಕ್ಷಕರನ್ನು ‌ರಂಜಿಸಿದ ಸಿನಿಮಾ ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್​​​. ನಟ ಹಾಗೂ ನಿರೂಪಕ ದಾನೀಶ್ ಸೇಠ್ ಈ ಚಿತ್ರದಲ್ಲಿ ಕಾರ್ಪೊರೇಟರ್‌ ಆಗಲು ಏನೆಲ್ಲಾ ಗಿಮಿಕ್ ಗಳನ್ನು ಮಾಡಿದರು ಅನ್ನೋದನ್ನು ನೋಡಿದ್ವಿ. ಈಗ ಹೊಸ ಅವತಾರದಲ್ಲಿ ದಾನೀಶ್ ಸೇಠ್ ಮತ್ತೆ ರಂಜಿಸಲು ಬರುತ್ತಿದ್ದಾರೆ.

ಹಂಬಲ್ ಪೊಲಿಟಿಷಿಯನ್ ನೊಗ್ ರಾಜ್

ಹಂಬಲ್ ಪೊಲಿಟಿಷಿಯನ್‌ ನೊಗ್‌ರಾಜ್ ವೆಬ್ ಸೀರೀಸ್​​​ನಲ್ಲಿ ದಾನೀಶ್​​ ಸೇಠ್ ಒಬ್ಬ ಭ್ರಷ್ಟ ಹಾಗೂ ಸ್ವಯಂ ಸೇವೆಯ ರಾಜಕಾರಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾದ್‌ಖಾನ್ ಕಥೆ ಬರೆದು, ನಿರ್ದೇಶನ ಮಾಡಿದ್ದಾರೆ.

ಹಂಬಲ್ ಪೊಲಿಟಿಷಿಯನ್ ನೊಗ್ ರಾಜ್

ನಟ ದಾನೀಶ್ ಸೇಠ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಸೋಶಿಯಲ್​ ಮೀಡಿಯಾದಲ್ಲಿ ಕಾಮಿಡಿ ವಿಡಿಯೋಗಳ ಮೂಲಕ ಅವರು ಆಗಾಗ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ.

ಹಂಬಲ್ ಪೊಲಿಟಿಷಿಯನ್ ನೊಗ್ ರಾಜ್

ಇದು ಒಟ್ಟು 10 ಎಪಿಸೋಡ್‌ಗಳನ್ನು ಹೊಂದಿರುವ ಕಾಮಿಡಿ ಆಧಾರಿತ ವೆಬ್‌ಸೀರೀಸ್. ನೊಗ್‌ರಾಜ್​ ಒಬ್ಬ ಸ್ವಯಂಸೇವಕನಾಗಿ ಸೇವೆ ಸಲ್ಲಿಸುತ್ತಾ ರಾಜಕೀಯ ಕ್ಷೇತ್ರಕ್ಕೆ ಕಾಲಿಡುತ್ತಾನೆ. ನಂತರ ಮುಖ್ಯಮಂತ್ರಿ ಸ್ಥಾನಕ್ಕೇರಲು ಏನೆಲ್ಲಾ ಸರ್ಕಸ್ ಮಾಡಲಿದ್ದಾನೆ ಎಂಬುದು ಇಲ್ಲಿನ ಹೈಲೈಟ್ಸ್‌​.

ಈ ವೆಬ್‌ ಸೀರೀಸ್‌ ಅಧಿಕಾರದ ದುರಾಸೆ ಮತ್ತು ಭ್ರಷ್ಟಾಚಾರವನ್ನು ವಿಡಂಬನಾತ್ಮಕವಾಗಿ ನಿರೂಪಿಸುವ ಮೂಲಕ ಪ್ರೇಕ್ಷಕರನ್ನು ನಗಿಸುವ ಭರವಸೆ ಮೂಡಿಸಿದೆ.

ಹಂಬಲ್ ಪೊಲಿಟಿಷಿಯನ್ ನೊಗ್ ರಾಜ್

ಈ ಸರಣಿಯಲ್ಲಿ ಪ್ರಕಾಶ್ ಬೆಳವಾಡಿ, ವಿಜಯ್ ಚೆಂಡೂರ್ ಮತ್ತು ದಿಶಾ ಮದನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.