ETV Bharat / sitara

'ಒನ್​ ಕಟ್​ ಟೂ ಕಟ್' ಹೇಳಿಕೊಡಲು ಬರ್ತಿದ್ದಾರೆ ಗೋಪಿ ಮೇಷ್ಟ್ರು..! - ದಾನಿಶ್​ ಸೇಠ್ ಅಭಿನಯದ ಹೊಸ ಚಿತ್ರ ಒನ್​ ಕಟ್​ ಟೂ ಕಟ್

ಪುನೀತ್​ ಮತ್ತು ದಾನಿಶ್​ ಇನ್ನೊಂದು ಚಿತ್ರದಲ್ಲಿ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಪುನೀತ್​ ತಮ್ಮ ಪಿಆರ್​ಕೆ ಪ್ರೊಡಕ್ಷನ್ಸ್​ನಡಿ ನಿರ್ಮಿಸುತ್ತಿರುವನ 'ಒನ್​ ಕಟ್​ ಟೂ ಕಟ್​' ಎಂಬ ಹೊಸ ಚಿತ್ರದಲ್ಲಿ ದಾನಿಶ್​ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

Danish Sait
ದಾನಿಶ್​ ಸೇಠ್
author img

By

Published : Jan 10, 2021, 11:04 AM IST

ತಮ್ಮ ವಿಚಿತ್ರ ಮ್ಯಾನರಿಸಂ ಮತ್ತು ಮಾತಿನ ಶೈಲಿಯ ಮೂಲಕ ಎಲ್ಲರಿಗೂ ಇಷ್ಟವಾಗುವವರು ದಾನಿಶ್​ ಸೇಠ್​ ಅಲಿಯಾಸ್​ ನೊಗರಾಜ್​. ಅದರಲ್ಲೂ 'ಪವರ್ ಸ್ಟಾರ್​' ಪುನೀತ್​ ರಾಜಕುಮಾರ್​ ಅವರಿಗಂತೂ ದಾನಿಶ್​ ಅಂದರೆ ಬಹಳ ಇಷ್ಟ. ಈ ಹಿಂದೆ, 'ಹಂಬಲ್​ ಪೊಲಿಟಿಶಿಯನ್​ ನೊಗರಾಜ್​' ಚಿತ್ರದಲ್ಲಿ ಪುನೀತ್​ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ದಾನಿಶ್​ ಅಭಿನಯದಲ್ಲಿ 'ಫ್ರೆಂಚ್​ ಬಿರಿಯಾನಿ' ಚಿತ್ರವನ್ನು ನಿರ್ಮಿಸಿದ್ದರು.

ಇದೀಗ ಪುನೀತ್​ ಮತ್ತು ದಾನಿಶ್​ ಇನ್ನೊಂದು ಚಿತ್ರದಲ್ಲಿ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಪುನೀತ್​ ತಮ್ಮ ಪಿಆರ್​ಕೆ ಪ್ರೊಡಕ್ಷನ್ಸ್​ನಡಿ ನಿರ್ಮಿಸುತ್ತಿರುವ 'ಒನ್​ ಕಟ್​ ಟೂ ಕಟ್​' ಎಂಬ ಹೊಸ ಚಿತ್ರದಲ್ಲಿ ದಾನಿಶ್​ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇದೊಂದು ಪಕ್ಕಾ ಕಾಮಿಡಿ ಚಿತ್ರವಾಗಿದ್ದು, ಇಂಗ್ಲೀಷ್​ ಸರಿಯಾಗಿ ಬಾರದ ಇಂಗ್ಲೀಷ್​ ಮೇಷ್ಟ್ರು ಗೋಪಿಯಾಗಿ ದಾನಿಶ್​ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ವಂಸಿಧರ್​ ಭೋಗರಾಜು ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸಿಂಪಲ್ ಆಗಿ ಸೆಟ್ಟೇರಿ ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿದ 'ಸಾವಿತ್ರಿ'

ಸದ್ಯಕ್ಕೆ ಈ ಚಿತ್ರದ ಬಗ್ಗೆ ಇಷ್ಟೇ ಮಾಹಿತಿ ಲಭ್ಯವಾಗಿದ್ದು, ಹೊಸ ವರ್ಷದ ಅಂಗವಾಗಿ ಪುನೀತ್​, ಈ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಿ, ದಾನಿಶ್​ ಜತೆಗೆ ಇನ್ನೊಂದು ಹೊಸ ಚಿತ್ರ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಚಿತ್ರ ಫೆಬ್ರವರಿಯಲ್ಲಿ ಪ್ರಾರಂಭವಾಗಲಿದೆ ಎಂಬ ಮಾಹಿತಿ ಬಿಟ್ಟರೆ, ಮಿಕ್ಕಂತೆ ರಹಸ್ಯವನ್ನು ಕಾಪಾಡಿಕೊಂಡಿದ್ದಾರೆ. ಹಾಗಾಗಿ, 'ಒನ್​ ಕಟ್​ ಟೂ ಕಟ್​' ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದರೆ, ಇನ್ನೊಂದಿಷ್ಟು ಸಮಯ ಕಾಯದೇ ಬೇರೆ ದಾರಿಯಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.