ಸ್ಯಾಂಡಲ್ವುಡ್ಗೆ ಮತ್ತೆ ಎಂಟ್ರಿ ಕೊಟ್ಟಿರುವ ರಾಧಿಕಾ ಕುಮಾರಸ್ವಾಮಿ ಅಭಿನಯದ ದಮಯಂತಿ ಸಿನಿಮಾ ಮೇಕಿಂಗ್ ಹಂತದಲ್ಲೇ ಬಾರಿ ಸದ್ದು ಮಾಡಿತ್ತು. ಈ ಚಿತ್ರದ ಟೀಸರ್ ಮೊನ್ನೆಯಷ್ಟೇ ರಿಲೀಸ್ ಆಗಿದೆ.
ವಿಶೇಷ ಅಂದ್ರೆ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ 5 ಭಾಷೆಯಲ್ಲಿ ಏಕಕಾಲದಲ್ಲಿ ತಯಾರಾಗಿರೋ ದಮಯಂತಿ ಚಿತ್ರದ ಟೀಸರ್, ಏಕಕಾಲದಲ್ಲೇ ಪಂಚ ಭಾಷೆಯಲ್ಲಿ ರಿಲೀಸ್ ಆಗಿದೆ. ಐದು ಭಾಷೆಯಲ್ಲೂ ರಾಧಿಕಾ ದಮಯಂತಿ ಅವತಾರ ಸಖತ್ ಬೋಲ್ಡ್ ಆಗಿದೆ. ಎಲ್ಲ ರೀತಿಯಿಂದಲೂ ಈ ಬಾರಿ ರಾಧಿಕಾ ಕುಮಾರಸ್ವಾಮಿಯ ಘರ್ಜನೆ ಜೋರಾಗಿದೆ.
ರಾಧಿಕಾ ಕುಮಾರಸ್ವಾಮಿ ಅವರಿಗೆ ಅರುಂಧತಿ ಸಿನಿಮಾದ ರೀತಿ ಪಾತ್ರ ಮಾಡಬೇಕು ಅನ್ನೋದು ಬಹುದಿನದ ಕನಸಾಗಿತ್ತು. ಈಗ ಅದು ದಮಯಂತಿ ಸಿನಿಮಾದ ಮೂಲಕ ಈಡೇರುತ್ತಿದೆ. ಟೀಸರ್ನಲ್ಲಿ ದಯಮಂತಿ ಅವತಾರದ ರಾಧಿಕಾ ಡೈಲಾಗ್ ಡೆಲವರಿ, ಗೆಟಪ್, ಲುಕ್, ಆ್ಯಟಿಟ್ಯೂಡ್ ಖಂಡಿತ ಈ ಸಿನಿಮಾವಗೆ ದೊಡ್ಡ ಮೈಲಿಗಲ್ಲನ್ನ ನೀಡಲಿದೆ ಅನ್ನೋ ಸೂಚನೆ ಕೊಡ್ತಿದೆ.
- " class="align-text-top noRightClick twitterSection" data="">
ಸ್ಯಾಂಡಲ್ವುಡ್ನ ಬಹುಮುಖ ಪ್ರತಿಭೆ, ನಟ, ನಿರ್ದೇಶಕ, ನಿರ್ಮಾಪಕ, ವಿತರಕ ನವರಸನ್ ನಿರ್ದೇಶನದೊಂದಿಗೆ ನಿರ್ಮಾಣ ಮಾಡಿರೋ ಸಿನಿಮಾ ದಮಯಂತಿ. ಶ್ರೀ ಲಕ್ಷ್ಮೀ ವೃಶಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ತಯಾರಾಗಿರೋ ಈ ಸಿನಿಮಾಗೆ ಆರ್.ಎಸ್. ಗಣೇಶ್ ನಾರಾಯಣ್ ಸಂಗೀತ ಸಂಯೋಜಿಸಿದ್ದಾರೆ. ಮಹೇಶ್ ರೆಡ್ಡಿ ಸಂಕಲನವಿರೋ ಈ ಸಿನಿಮಾಗೆ ಪಿಕೆಎಚ್ ದಾಸ್ ಕ್ಯಾಮೆರಾ ಕಣ್ಣಾಗಿದ್ದಾರೆ. ಸದ್ಯ ಟೀಸರ್ ಯೂ ಟ್ಯೂಬ್ನಲ್ಲಿ ಬಾರಿ ಸೌಂಡ್ ಮಾಡುತ್ತಿದೆ.