ETV Bharat / sitara

ಹಿರಿಯ ನಟ ರಾಜೇಶ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ: ಡಾ. ಭರತ್

author img

By

Published : Feb 14, 2022, 3:45 PM IST

ನಟ ರಾಜೇಶ್ ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅವರಿಗೆ ವೆಂಟಿಲೇಟರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

d-r-bharath
ಹಿರಿಯ ನಟ ರಾಜೇಶ್

ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಆರೋಗ್ಯ ಹದಗೆಟ್ಟಿದ್ದು, ಬೆಂಗಳೂರಿನ ಬಾಣಸವಾಡಿಯ ಜನಪ್ರಿಯ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ, ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರಾಜೇಶ್​ಗೆ ವೆಂಟಿಲೇಟರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ರಾಜೇಶ್ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಅಂತಾ ಬಾಣಸವಾಡಿಯ ಜನಪ್ರಿಯ ಆಸ್ಪತ್ರೆಯಲ್ಲಿ ರಾಜೇಶ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಭರತ್ ಹೇಳಿದ್ದಾರೆ.

ಈ ಕುರಿತು ವೈದ್ಯರು ಮಾತನಾಡಿದ್ದು, 9ನೇ ತಾರೀಖು ರಾಜೇಶ್ ಆಸ್ಪತ್ರೆಗೆ ದಾಖಲಾಗಿದ್ರು. ಅವರಿಗೆ ಉಸಿರಾಟದ ಸಮಸ್ಯೆ ಇತ್ತು. ಹೀಗಾಗಿ, ಐಸಿಯುನಲ್ಲಿ ರಾಜೇಶ್ ಅವರಿಗೆ ಚಿಕಿತ್ಸೆ ನೀಡಲಾಗ್ತಿದೆ. ಹಾಗೆಯೇ, ದೇಹದಲ್ಲಿ ಇನ್​​ಫೆಕ್ಷನ್​​ ಕೂಡ ಆಗಿದೆ. ಇನ್ನು ರಾಜೇಶ್ ಅವರ ಕಿಡ್ನಿ, ಹಾರ್ಟ್ ಗುಡ್ ಕಂಡಿಶನ್​​ನಲ್ಲಿದೆ ಎಂದರು.

ಜೊತೆಗೆ ಶುಗರ್, ಬಿಪಿ ಕೂಡ ನಾರ್ಮಲ್ ಆಗಿದೆ. ಇನ್​​ಫೆಕ್ಷನ್​​ನಿಂದ ಲಂಗ್ಸ್ ಎಫೆಕ್ಟ್ ಆಗಿ ಉಸಿರಾಟದ ಸಮಸ್ಯೆ ಆಗಿದೆ. ಆಂಟಿಬಯೋಟಿಕ್ ಕೊಟ್ಟು ಐಸಿಯೂನಲ್ಲಿ ಚಿಕಿತ್ಸೆ ಕೊಡ್ತಿದ್ದೇವೆ. ನಮ್ಮ ಚಿಕಿತ್ಸೆಗೆ ರಾಜೇಶ್ ಅವರು ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.

9ನೇ ತಾರೀಖು ಕೊರೊನಾ ಟೆಸ್ಟ್ ಕೂಡ ಮಾಡಿದ್ವಿ. ಸದ್ಯ ರಾಜೇಶ್ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಕುಟುಂಬ ವರ್ಗದವರು ಅವರ ಜೊತೆಯಲ್ಲಿ ಇದ್ದಾರೆ. ಇನ್ನೆರಡು ದಿನಗಳಲ್ಲಿ ರಾಜೇಶ್​ ಅವರು ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಓದಿ: ಶಿವಮೊಗ್ಗದಲ್ಲಿ ಪರೀಕ್ಷೆ ಬಹಿಷ್ಕರಿಸಿದ 13 ವಿದ್ಯಾರ್ಥಿನಿಯರು: ಈ ಬಗ್ಗೆ ಜಿಲ್ಲಾ ಉಸ್ತವಾರಿ ಸಚಿವರು ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.