ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಮೊದಲ ಸಿನಿಮಾ 'ಪಡ್ಡೆಹುಲಿ' ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ತಿಂಗಳ ಹಿಂದೆ ಮೊದಲ ಟ್ರೇಲರ್ ಬಿಡುಗಡೆ ಮಾಡಿದ್ದ ಚಿತ್ರತಂಡ ಇದೀಗ ಮತ್ತೊಂದು ಟ್ರೇಲರ್ ಬಿಡುಗಡೆ ಮಾಡಿದೆ.
- " class="align-text-top noRightClick twitterSection" data="">
ವಿಶೇಷ ಎಂದರೆ ಎರಡನೇ ಟ್ರೇಲರ್ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಮೊದಲ ಟ್ರೇಲರ್ನಲ್ಲಿ ರವಿಚಂದ್ರನ್ ಹಾಗೂ ರಕ್ಷಿತ್ ಶೆಟ್ಟಿ ನೋಡಿದ ಅಭಿಮಾನಿಗಳು ಸಾಕಷ್ಟು ಥ್ರಿಲ್ ಆಗಿದ್ದರು. ಇದೀಗ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ 'ಪಡ್ಡೆಹುಲಿ' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಥ್ರಿಲ್ ನೀಡಿದ್ದಾರೆ.
ಯೋಗರಾಜ್ ಭಟ್, ರವಿಚಂದ್ರನ್, ರಕ್ಷಿತ್ ಶೆಟ್ಟಿ ಹಾಗೂ ಪುನೀತ್ ರಾಜ್ಕುಮಾರ್ ಪಂಚಿಂಗ್ ಡೈಲಾಗ್ನಿಂದ ಶುರುವಾಗುವ 'ಪಡ್ಡೆಹುಲಿ' ಸಿನಿಮಾದ ಎರಡನೇ ಟ್ರೇಲರ್ ನೋಡುಗರನ್ನು ಇಂಪ್ರೆಸ್ ಮಾಡಿದೆ. ಇದು ಪಕ್ಕಾ ಮನರಂಜನೆ ಚಿತ್ರವಾಗಿದ್ದು ಶ್ರೇಯಸ್ ಭರವಸೆ ನಟನಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ ಎಂಬುದು ಟ್ರೇಲರ್ ನೋಡಿದವರ ಅಭಿಪ್ರಾಯ. ಸಿನಿಮಾ ಏಪ್ರಿಲ್ 19 ರಂದು ಬಿಡುಗಡೆಯಾಗುತ್ತಿದೆ.