ಮುಂಬೈ: ದೇಶಾದ್ಯಂತ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದ ಚಿತ್ರೋದ್ಯಮಕ್ಕೂ ಹೊಡೆತ ಬಿದ್ದಿದ್ದು, ಇದೀಗ ನಟ ಪ್ರಭಾಸ್ ಹಾಗೂ ನಟಿ ಪೂಜಾ ಹೆಗ್ಡೆ ಅಭಿನಯದ ‘ರಾಧೆ-ಶ್ಯಾಮ್’ (Radhe Shyam) ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಈ ಬಗ್ಗೆ ಸಿನಿಮಾ ತಯಾರಕರು ಬುಧವಾರ ಮಾಹಿತಿ ನೀಡಿದ್ದಾರೆ.
ಈ ಮೊದಲೇ ‘ರಾಧೆ-ಶ್ಯಾಮ್’ ಸಿನಿಮಾ ಬಿಡುಗಡೆ ದಿನಾಂಕವನ್ನು ಜನವರಿ 14ಕ್ಕೆ ನಿಗದಿ ಪಡಿಸಲಾಗಿತ್ತು. ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಬಹುಭಾಷಾ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗುವುದು ಎಂದು ವರದಿಗಳು ತಿಳಿಸಿವೆ.
-
We have to postpone the release of our film #RadheShyam due to the ongoing covid situation. Our sincere thanks to all the fans for your unconditional love and support.
— UV Creations (@UV_Creations) January 5, 2022 " class="align-text-top noRightClick twitterSection" data="
We will see you in cinemas soon..!#RadheShyamPostponed pic.twitter.com/aczr0NuY9r
">We have to postpone the release of our film #RadheShyam due to the ongoing covid situation. Our sincere thanks to all the fans for your unconditional love and support.
— UV Creations (@UV_Creations) January 5, 2022
We will see you in cinemas soon..!#RadheShyamPostponed pic.twitter.com/aczr0NuY9rWe have to postpone the release of our film #RadheShyam due to the ongoing covid situation. Our sincere thanks to all the fans for your unconditional love and support.
— UV Creations (@UV_Creations) January 5, 2022
We will see you in cinemas soon..!#RadheShyamPostponed pic.twitter.com/aczr0NuY9r
ರಾಧಾ ಕೃಷ್ಣ ಕುಮಾರ್ ನಿರ್ದೇಶನದ ರಾಧೆ ಶ್ಯಾಮ್ ಸಿನಿಮಾವಲ್ಲದೇ, ಇತರ ಎರಡು ದೊಡ್ಡ ಚಿತ್ರಗಳಾದ ಶಾಹಿದ್ ಕಪೂರ್ ಅಭಿನಯದ 'ಜರ್ಸಿ' ಮತ್ತು ಎಸ್‌ಎಸ್ ರಾಜಮೌಳಿ ಅವರ 'RRR' ಸಿನಿಮಾ ಬಿಡುಗಡೆ ದಿನಾಂಕವನ್ನು ಸಹ ಕೋವಿಡ್ ಕಾರಣದಿಂದ ಮುಂದೂಡಲಾಗಿದೆ.
ಈ ಚಿತ್ರದ ನಿರ್ಮಾಣ ಸಂಸ್ಥೆಯಾದ ಯುವಿ ಕ್ರಿಯೇಷನ್ಸ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಚಿತ್ರದ ಮುಂದೂಡಿಕೆ ಬಗ್ಗೆ ಮಾಹಿತಿ ನೀಡಲಾಗಿದೆ. ನಾವು ಕಳೆದ ಕೆಲವು ದಿನಗಳಿಂದ ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ಆದರೆ, Omicron ರೂಪಾಂತರ ಪ್ರಕರಣಗಳ ಹೆಚ್ಚಳದ ಕಾರಣದಿಂದ ಈ ಚಿತ್ರವನ್ನು ಪರದೆ ಮೇಲೆ ನೋಡಲು ಇನ್ನೂ ಕಾಯಬೇಕಾಗಿದೆ. ನಾವು ಶೀಘ್ರದಲ್ಲೇ ನಿಮ್ಮನ್ನು ಚಿತ್ರಮಂದಿರಗಳಲ್ಲಿ ನೋಡುತ್ತೇವೆ ಎಂದು ಟ್ವೀಟ್ ಮಾಡಲಾಗಿದೆ.
ಇದನ್ನೂ ಓದಿ: ನಟ ವಿಶಾಲ್ ಅಭಿನಯದ 'ಸಾಮಾನ್ಯುಡು' ಸಂಕ್ರಾಂತಿ ಹಬ್ಬದಂದು ತೆರೆಗೆ
ಅಭಿಮಾನಿಗಳ "ಬೇಷರತ್ತಾದ ಬೆಂಬಲ"ಕ್ಕಾಗಿ ಪ್ರೊಡಕ್ಷನ್ ಹೌಸ್ ಅವರಿಗೆ ಧನ್ಯವಾದ ಅರ್ಪಿಸಿದೆ. ಈ ಚಿತ್ರದಲ್ಲಿ ಪ್ರಭಾಸ್ಗೆ ಜೋಡಿಯಾಗಿ ಪೂಜಾ ಹೆಗಡೆ ನಟಿಸಿದ್ದಾರೆ. ಚಿತ್ರದಲ್ಲಿ ನಿಗೂಢವಾದ ಭವಿಷ್ಯ ಹೇಳುವ ಒಬ್ಬ ನಾಯಕ ಮತ್ತು ಪ್ರೇಮಿ ವಿಕ್ರಮ್ ಆದಿತ್ಯನಾಗಿ ನಟ ಪ್ರಭಾಸ್ ಅವರ ಕೆಲವು ದೃಶ್ಯಗಳನ್ನು ಈ ಟ್ರೈಲರ್‌ನಲ್ಲಿ ನೋಡಬಹುದು. ಟ್ರೈಲರ್‌ನಲ್ಲಿ ಕಥೆ ಹೇಗೆ ಶುರುವಾಗುತ್ತದೆ ಎಂಬುದನ್ನು ನೋಡಬಹುದಾಗಿದೆ. ಟ್ರೈಲರ್ ನೋಡಿದ ಅಭಿಮಾನಿಗಳಿಗೆ ಈ ಚಿತ್ರದ ಬಗ್ಗೆ ಇರುವ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.