ಬೆಂಗಳೂರು: ದೇಶದಲ್ಲಿ ಟಿಕ್ ಟಾಕ್ ಬ್ಯಾನ್ ಆಗಿರುವ ಕುರಿತು ಸ್ಯಾಂಡಲ್ವುಡ್ ನಟಿ ಮಮತ ರಾವತ್ ಮಾತನಾಡಿದ್ದು, ಟಿಕ್ ಟಾಕ್ ಬ್ಯಾನ್ ಆಗಿರೋದು ನನಗೆ ಸಮಸ್ಯೆ ಆಗಿಲ್ಲ. ಟಿಕ್ ಟಾಕ್ ಇದ್ರು ಇಲ್ಲದಿದ್ರು ನನಗೆ ಏನೂ ವ್ಯತ್ಯಾಸ ಇಲ್ಲ ಎಂದಿದ್ದಾರೆ.
ಟಿಕ್ ಟಾಕ್ ಬರುವುದಕ್ಕಿಂತ ಮುಂಚೆ ನಾನು ಸಿಲ್ವರ್ ಸ್ಕ್ರೀನ್ನಲ್ಲಿ ಕಾಣಿಸಿಕೊಂಡಿದ್ದೆ. ಆದ್ದರಿಂದ ಟಿಕ್ ಟಾಕ್ ಬ್ಯಾನ್ ಆಯ್ತು ಅಂತ ನಾನು ಯೋಚನೆ ಮಾಡಿಲ್ಲ, ಕಣ್ಣೀರು ಹಾಕಿಲ್ಲ. ಟಿಕ್ ಟಾಕ್ ಆ್ಯಪ್ನ್ನು ನಾನು ಒಂದು ವರ್ಷದಿಂದ ಬಳಸುತ್ತಿದ್ದೆ. ಟಿಕ್ ಟಾಕ್ ಕಂಪನಿಯ ಮುಖ್ಯಸ್ಥ ಭಾರತೀಯರನ್ನು 'ಫೂಲ್ಸ್' ಗಳು ಅಂದಾಗ ಈ ಆ್ಯಪ್ ಬಳಸಬಾರದು ಎಂದುಕೊಂಡಿದ್ದೆ ಎಂದಿದ್ದಾರೆ.
ಇನ್ನು ಟಿಕ್ ಟಾಕ್ ಬ್ಯಾನ್ ಆಗಿರುವುದಕ್ಕೆ ನಟಿ ಭೂಮಿಕ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ 2 ವರ್ಷಗಳಿಂದ ನಾನು ಟಿಕ್ ಟಾಕ್ ಬಳಸುತ್ತಿದ್ದೆ. ಎರಡು ವರ್ಷಗಳಲ್ಲಿ 4,05,600 ಜನ ಫಾಲೋವರ್ಸ್ ಇದ್ದರು. ಜೊತೆಗೆ 6.2 ಮಿಲಿಯನ್ ಲೈಕ್ಸ್ ಕೂಡ ಬಂದಿತ್ತು. ಇದೆಲ್ಲದರ ಜೊತೆಗೆ ನಾನು ಟಿಕ್ ಟಾಕ್ನಿಂದ ಒಂದಷ್ಟು ಸಂಪಾದನೆ ಮಾಡುತ್ತಿದ್ದೆ. ನನ್ನ ಪಾಕೆಟ್ ಮನಿಗೆ ಒಂದಷ್ಟು ಹಣ ಸಿಗ್ತಿತ್ತು. ಈಗ ಅದೆಲ್ಲ ಮಿಸ್ಸಾಗ್ತಿದೆ ಎಂದು ನೋವಾಗುತ್ತಿದೆ ಎಂದಿದ್ದಾರೆ.
ನನಗೆ ನಟಿಸಲು ಅವಕಾಶ ಕಡಿಮೆ ಇದ್ದಾಗ ಟಿಕ್ ಟಾಕ್ ಬ್ಯಾನ್ ಆಗಿದ್ದಕ್ಕೆ ನೋವಾಯಿತು ಎಂದು ನಟಿ ಭೂಮಿಕ ಹೇಳಿದ್ದಾರೆ. ಅಲ್ಲದೆ ನನ್ನ ಹೊರತು ಪಡಿಸಿ ಒಂದಷ್ಟು ಒಳ್ಳೆ ಪ್ರತಿಭೆಗಳನ್ನು ಈ ಟಿಕ್ ಟಾಕ್ ಹುಟ್ಟಿ ಹಾಕಿತ್ತು. ಅಲ್ಲದೆ ಅವರಿಗೆ ಬದುಕು ಕಟ್ಟಿಕೊಟ್ಟಿತ್ತು. ಈ ಟಿಕ್ ಟಾಕ್ನಿಂದ ಹಣ ಸಂಪಾದಿಸಿದ್ದೇನೆ. ಟಿಕ್ ಟಾಕ್ ಜರ್ನಿ ನೆನೆದರೆ ನನ್ನ ಲೈಫ್ ನಲ್ಲಿ ಟಿಕ್ ಟಾಕ್ ಜೊತೆ ಒಳ್ಳೆ ಸಂಬಂಧ ಇತ್ತು. ಅಲ್ಲದೆ ನಾನು ಆಕ್ಟಿಂಗ್ ಕಲಿಯಲು ಟಿಕ್ ಟಾಕ್ ತುಂಬಾ ಹೆಲ್ಪ್ ಆಗಿದೆ ಎಂದಿದ್ದಾರೆ.