ETV Bharat / sitara

ಯಾರೋ ನೀನು ಮಾನವ, ಕೇಳುತಿಹುದು ಕೊರೊನಾ... ಭಟ್ಟರ ಜಾಗೃತಿ ಗೀತೆಯಲ್ಲಿ ಮಾಧ್ಯಮದವರಿಗೂ ಸ್ಥಾನ - Yogaraj Bhatt

ಭಾನುವಾರ ಬೆಳಗ್ಗೆ ಯೋಗರಾಜ್​​ ಭಟ್​​ ಮಾಧ್ಯಮದವರನ್ನು ಸಹ ಸೇರಿಸಿಕೊಂಡು ಫ್ರೀಡಮ್ ಪಾರ್ಕ್​ನಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಹಾಡಿನ ಚಿತ್ರೀಕರಣ ಮಾಡಿದರು.

Corona awareness song Shooting
ಕೊರೊನಾ ವೈರಸ್ ಜಾಗೃತಿ ಗೀತೆ ಚಿತ್ರೀಕರಣ
author img

By

Published : Apr 27, 2020, 9:49 AM IST

Updated : Apr 27, 2020, 10:39 AM IST

ಬೆಂಗಳೂರು: ಯೋಗರಾಜ್​ ಭಟ್ಟರು ಈ ಹಿಂದೆ ಕೆಲವು ಸಮಾಜಮುಖಿ ಗೀತೆಗಳನ್ನು ರಚಿಸಿದ್ದು, ಈಗ ದೇಶವನ್ನು ಆವರಿಸಿರುವ ಕೊರೊನಾ ವೈರಸ್ ಬಗ್ಗೆಯೂ ಒಂದು ಹಾಡಿನ ಚಿತ್ರೀಕರಣವನ್ನು ಕರ್ನಾಟಕ ಸರ್ಕಾರಕ್ಕೆ ನೀಡುತ್ತಿದ್ದಾರೆ.

ಭಾನುವಾರ ಮಾಧ್ಯಮದವರನ್ನು ಸೇರಿಸಿಕೊಂಡು ಫ್ರೀಡಮ್ ಪಾರ್ಕ್​ನಲ್ಲಿ ಚಿತ್ರೀಕರಣ ಮಾಡಿದರು. 'ಯಾರೋ ನೀನು ಮಾನವ ಕೇಳುತಿಹುದು ಕೊರೊನಾ' ಎಂಬ ಹಾಡಿನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ವಿಭಾಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳು ಈ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಗೀತೆಯನ್ನು ಪ್ರಮುಖವಾಗಿ ವೈದ್ಯರು, ಪೊಲೀಸರು, ಬಿಬಿಎಂಪಿ ಅಧಿಕಾರಿಗಳು, ಪೌರ ಕಾರ್ಮಿಕರು ಹಾಗೂ ಮಾಧ್ಯಮದವರು ಹಗಲಿರುಳು ಶ್ರದ್ಧೆಯಿಂದ ಸೇವೆ ಮಾಡುತ್ತಿರುವವರಿಗೆ ಅರ್ಪಿಸಲಾಗಿದೆ. ಇವರೆಲ್ಲರ ಜೊತೆಗೆ ಸುಧಾ ಮೂರ್ತಿ ಸಹ ಈ ಗೀತೆಯಲ್ಲಿ ಕಾಣಿಸಿಕೊಳ್ಳುತ್ತಾರೆ.

ಶ್ರೀಮಂತರು ದುಡ್ಡನ್ನು ಏನು ಮಾಡಬೇಕು ಮತ್ತು ಬಡವರು ಒಪ್ಪತ್ತಿನ ಊಟಕ್ಕೆ ಕಷ್ಟ ಅನುಭವಿಸುತ್ತಿರುವಾಗ ಎಂಬ ವಿಚಾರ ಸಹ ಈ ಹಾಡಿನಲ್ಲಿದೆ. ಇದು ಆತ್ಮ ವಿಮರ್ಶೆಯ ಸಮಯ ಎಂಬುದು ಭಟ್ಟರ ತಾತ್ಪರ್ಯವಾಗಿದೆ.

ಈ ಹಾಡಿಗೆ ವಿಜಯ್​ ಪ್ರಕಾಶ್ ಧ್ವನಿ ಹಾಗೂ ಅರ್ಜುನ್ ಜನ್ಯ ರಾಗ ಸಂಯೋಜನೆ ಇದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಅಲ್ಲಿ ಯೋಗರಾಜ್​ ಭಟ್ಟರು ಬ್ಯುಸಿಯಾಗಿದ್ದಾರೆ. ಕೆಲವೇ ದಿನಗಳಲ್ಲಿ ಈ ವಿಡಿಯೋ ಹಾಡು ಎಲ್ಲರನ್ನು ತಲುಪಲಿದೆ.

Last Updated : Apr 27, 2020, 10:39 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.