ETV Bharat / sitara

ಸೂಪರ್​ ಸ್ಟಾರ್​​ ಮಾಡಿದ್ದ ದಾಖಲೆ ಮುರಿದ ಹಾಸ್ಯನಟ ಸಾಧುಕೋಕಿಲ

ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಸೂಪರ್ ಸ್ಟಾರ್' ಚಿತ್ರದಲ್ಲಿ ಉಪೇಂದ್ರ ಅವರು ಸುಮಾರು 16 ಗೆಟಪ್​​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಆ ಚಿತ್ರದ ಮುಹೂರ್ತದ ವೇಳೆ ಚಿತ್ರದ ಸ್ಟಿಲ್​ಗಳನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಸಾಧುಕೋಕಿಲ ಇವರೆಲ್ಲರ ದಾಖಲೆ ಮುರಿಯಲು ಬರುತ್ತಿದ್ದಾರೆ.

author img

By

Published : Jan 25, 2020, 9:30 AM IST

Updated : Jan 25, 2020, 10:14 AM IST

Sadhu kokila
ಸಾಧುಕೋಕಿಲ

ಕನ್ನಡ ಚಿತ್ರ ರಂಗದ ಖ್ಯಾತ ಹಾಸ್ಯ ನಟ, ಸಂಗೀತ ನಿರ್ದೇಶಕ, ನಿರ್ದೇಶಕ ಆಗಿ ಕೂಡಾ ಗುರುತಿಸಿಕೊಂಡಿರುವ ಸಾಧು ಕೋಕಿಲ ಹೆಸರು ಮತ್ತೊಂದು ದಾಖಲೆ ಸೇರುತ್ತಿದೆ. ಸುಮಾರು 17 ವೇಷಗಳಲ್ಲಿ 'ಮುಗಿಲು ಪೇಟೆ' ಚಿತ್ರದಲ್ಲಿ ಸಾಧು ಕೋಕಿಲ ನಟಿಸುತ್ತಿದ್ದಾರೆ. ಇದು ಮನುರಂಜನ್ ರವಿಚಂದ್ರನ್ ಅಭಿನಯದ ಸಿನಿಮಾ.

Sadhu kokila
17 ಗೆಟಪ್​​​​ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಾಧುಕೋಕಿಲ

ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಸೂಪರ್ ಸ್ಟಾರ್' ಚಿತ್ರದಲ್ಲಿ ಉಪೇಂದ್ರ ಅವರು ಸುಮಾರು 16 ಗೆಟಪ್​​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಆ ಚಿತ್ರದ ಮುಹೂರ್ತದ ವೇಳೆ ಚಿತ್ರದ ಸ್ಟಿಲ್​ಗಳನ್ನು ಬಿಡುಗಡೆ ಮಾಡಲಾಗಿತ್ತು. ಕೆಲವು ವರ್ಷಗಳ ಹಿಂದೆ 16 ವೇಷಗಳಲ್ಲಿ ಹರೀಶ್ ರಾಜ್​​ 'ಶ್ರೀ ಸತ್ಯನಾರಾಯಣ' ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡು ಲಿಮ್ಕಾ ದಾಖಲೆ ಮಾಡಿದ್ದರು. ಈಗ 'ಮುಗಿಲುಪೇಟೆ' ಚಿತ್ರದಲ್ಲಿ ನಿರ್ದೇಶಕ ಭರತ್ ನಾವುಂಡ ಸಾಧುಕೋಕಿಲ ಅವರಿಗೆ 17 ಗೆಟಪ್​​​ ತೊಡಿಸುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಶಿವಾಜಿ ಗಣೇಶನ್ 9 ಪಾತ್ರಗಳು, ಕಮಲಹಾಸನ್ 10 ಪಾತ್ರಗಳು, ಈಶ್ವರ್ ಚಿತ್ರದಲ್ಲಿ ಜಗ್ಗೇಶ್ 9 ಗೆಟಪ್, ಹಲೋ ಸಿಸ್ಟರ್ ಚಿತ್ರದಲ್ಲಿ ಮಾಲಾಶ್ರೀ 7 ಗೆಟಪ್ನಲ್ಲಿ ಅಭಿನಯಿಸಿದ್ದರು. ಇದೀಗ ಸಾಧುಕೋಕಿಲ ಇವರೆಲ್ಲರ ದಾಖಲೆ ಮುರಿಯಲು ಬರುತ್ತಿದ್ದಾರೆ.

Sadhu kokila
ಸಾಧುಕೋಕಿಲ

ಮುಗಿಲುಪೇಟೆ ಸಿನಿಮಾ ರಕ್ಷ ವಿಜಯ್​ಕುಮಾರ್​ ನಿರ್ಮಾಣದ ಸಿನಿಮಾ. ಚಿತ್ರದ ಕ್ಲೈಮ್ಯಾಕ್ಸ್ ಸಾಧುಕೋಕಿಲ ಪಾತ್ರದಿಂದಲೇ ಇರುವುದು ಎಂದು ನಿರ್ದೇಶಕ ಭರತ್ ಹೇಳಿದ್ದಾರೆ. ಈಗ ಸಿನಿಮಾದಲ್ಲಿ ಸಾಧುಕೋಕಿಲ 17 ಪಾತ್ರಗಳಲ್ಲಿ ಅಭಿನಯಿಸುತ್ತಿರುವುದು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರಲಿದೆ. ಮನುರಂಜನ್ ಜೊತೆಗೆ ಖಯಾದು ಲೋಹರ್​​ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸಾಧು ಕೋಕಿಲ ಮತ್ತೊಂದು ಧಾಖಲೆ ಅರ್ಹರು

ಕನ್ನಡ ಚಿತ್ರ ರಂಗದ ಸುಪ್ರಸಿದ್ದ ಹಾಸ್ಯ ನಟ, ಸಂಗೀತ ನಿರ್ದೇಶಕ, ನಿರ್ದೇಶಕ ಸಹ ಆಗಿರುವ ಸಾಧು ಕೋಕಿಲ ಮತ್ತೊಂದು ಧಾಖಲೆಗೆ ಸೇರುತ್ತಿದ್ದಾರೆ.

ಅದೇ 17 ವೇಶಗಳಲ್ಲಿ ಮುಗಿಲು ಪೇಟೆ ಮನುರಂಜನ್ ರವಿಚಂದ್ರನ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು. ಆದರೆ 16 ಗೆಟಪ್ ಅಲ್ಲಿ ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಸೂಪರ್ ಸ್ಟಾರ್ ಚಿತ್ರದಲ್ಲಿ ಉಪೇಂದ್ರ ಅವರು ಕಾಣಿಸಿಕೊಂಡಿದ್ದರು. ಉಪೇಂದ್ರ ಅವರ 16 ಗೆಟಪ್ ಸಾಕ್ಷಿಯಾಗಿ ಆ ಚಿತ್ರದ ಮುಹೂರ್ತದ ದಿವಸವೆ ಸ್ಥಿರ ಚಿತ್ರಗಳನ್ನು ಸಹ ಬಿಡುಗಡೆ ಮಾಡಲಾಗಿತ್ತು. ಕೆಲವು ವರ್ಷಗಳ ಹಿಂದೆ 16 ವೇಶಗಳಲ್ಲಿ ಹರೀಶ್ ರಾಜ್ ಶ್ರೀ ಸತ್ಯನಾರಾಯಣ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡು ಲಿಮ್ಕಾ ಧಾಖಲೆ ಮಾಡಿದ್ದರು.

ಈಗ ಮುಗಿಲುಪೇಟೆ ನಿರ್ದೇಶಕ ಭರತ್ ನಾವುಂಡ 17 ಗೆಟಪ್ ತೊಡಿಸುತ್ತಿದ್ದಾರೆ ಹಾಸ್ಯ ನಟ ಸಾಧು ಕೋಕಿಲ ಅವರಿಗೆ. ಭಾರತೀಯ ಚಿತ್ರ ರಂಗದಲ್ಲಿ 9 ಪಾತ್ರಗಳನ್ನು ಶಿವಾಜಿ ಗಣೇಶನ್, 10 ಪಾತ್ರಗಳನ್ನು ಕಮಲ್ ಹಾಸನ್, ನವರಸ ನಾಯಕ ಜಗ್ಗೇಶ್ ಈಶ್ವರ್ ಚಿತ್ರದಲ್ಲಿ 9 ಗೆಟಪ್, ಏಳು ಗೆಟಪ್ ಅಲ್ಲಿ ಮಾಲಾಶ್ರೀ ಹಲೋ ಸಿಸ್ಟರ್ ಚಿತ್ರದಲ್ಲಿ ಈಗಾಗಲೇ ಅಭಿನಯಿಸಿದ್ದಾರೆ.

ಮುಗಿಲು ಪೇಟೆ, ರಕ್ಷ ವಿಜಯಕುಮಾರ್ ನಿರ್ಮಾಣದ ಚಿತ್ರ ಆರಂಭ ಹಾಗೂ ಅಂತ್ಯ ಸಾಧು ಕೋಕಿಲ ಪಾತ್ರದಿಂದಲೇ ಇರುವುದು ಎಂದು ನಿರ್ದೇಶಕ ಭರತ್ ಹೇಳಿದ್ದಾರೆ. ಈಗ ಈ 17 ಪಾತ್ರಗಳ ಸಾಧು ಕೋಕಿಲ ಅಭಿನಯದ ವಿಷಯವನ್ನು ಅವರು ಲಿಮ್ಕಾ ಬುಕ್ ಆಫ್ ರೇಕರ್ಡ್ಸ್ ಸೇರಿಸಲಿದ್ದಾರೆ.

ಮನುರಂಜನ್ ಜೊತೆಗೆ ಖಯದು ಲೋಹರ್ ಚಿತ್ರದ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. 

Last Updated : Jan 25, 2020, 10:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.