ETV Bharat / sitara

ಸಿನಿಮಾದಲ್ಲಿ ನಟಿಸದಿರಲು ನಿರ್ಧರಿಸಿದ ಟಾಲಿವುಡ್​ ಹಾಸ್ಯ ನಟ ರಾಹುಲ್ ರಾಮಕೃಷ್ಣ - ನಟನೆಯಿಂದ ಹಿಂದೆ ಸರಿದ ಹಾಸ್ಯ ನಟ ರಾಹುಲ್ ರಾಮಕೃಷ್ಣ

ಟಾಲಿವುಡ್​ನ ಹಾಸ್ಯನಟ ರಾಹುಲ್ ರಾಮಕೃಷ್ಣ ಅನಿರೀಕ್ಷಿತ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಈ ನಿರ್ಧಾರ ಅವರ ಅಭಿಮಾನಿಗಳಿಗೆ ಶಾಕ್​ ನೀಡಿದೆ. ನಟನ ಹೇಳಿಕೆ ಕುರಿತು ಜಾಲತಾಣದಲ್ಲಿ ನಿರಾಶೆ ವ್ಯಕ್ತವಾಗುತ್ತಿದೆ.

COMEDIAN RAHUL RAMAKRISHNA DECIDES NOT TO ACT IN FILMS

author img

By

Published : Feb 5, 2022, 12:41 PM IST

ಹೈದರಾಬಾದ್​: ಟಾಲಿವುಡ್​ನ ಜನಪ್ರಿಯ ಹಾಸ್ಯ ನಟ ರಾಹುಲ್ ರಾಮಕೃಷ್ಣ ಸಿನಿಪ್ರೇಮಿಗಳಿಗೆ ಶಾಕ್ ನೀಡಿದ್ದಾರೆ. ನಾನು ಇನ್ನು ಮೇಲೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಹೇಳುವ ಮೂಲಕ ನಿರಾಶೆ ಮೂಡಿಸಿದ್ದಾರೆ. ಸಿನಿಮಾದಲ್ಲಿ ನಟಿಸದಿರಲು ನಿರ್ಧರಿಸಿದ್ದಕ್ಕೆ ಅಭಿಮಾನಿಗಳು ನೊಂದುಕೊಂಡಿದ್ದಾರೆ.

2022ರ ವರೆಗೆ ಮಾತ್ರ ನಾನು ಸಿನಿಮಾದಲ್ಲಿ ನಟಿಸುತ್ತೇನೆ. ಆ ಬಳಿಕ ನಟನೆಯಿಂದ ದೂರ ಉಳಿಯುವೆ ಎಂದು ಟ್ವೀಟ್​ ಮಾಡಿಕೊಂಡಿದ್ದಾರೆ. ನಟನ ಈ ನಿರ್ಧಾರಕ್ಕೆ ಕಾರಣವೇನು ಅನ್ನೋದು ತಿಳಿದು ಬಂದಿಲ್ಲ. ಸಿನಿಮಾದಲ್ಲಿ ಅಷ್ಟೇ ಅಲ್ಲದೇ ಬರಹಗಾರ ಮತ್ತು ಪತ್ರಕರ್ತರಾಗಿಯೂ ಅವರು ಕೆಲಸ ಮಾಡಿದ್ದಾರೆ.

  • 2022 is my last.
    I will not do films anymore.
    Not that I care, nor should anybody care

    — Rahul Ramakrishna (@eyrahul) February 4, 2022 " class="align-text-top noRightClick twitterSection" data=" ">

'ಜಯಮ್ಮು ನಿಶ್ಚಯಮ್ಮುರಾ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ರಾಹುಲ್, 'ಅರ್ಜುನ್ ರೆಡ್ಡಿ' ಚಿತ್ರದ ಬಳಿಕ ಸಾಕಷ್ಟು ಹೆಸರು ಸಾಕಷ್ಟು ಮಾಡಿದರು. ಅದಾದ ನಂತರ ‘ಜಾತಿರತ್ನಗಳು’, ‘ಗೀತಗೋವಿಂದಂ’, ‘ಹುಷಾರು’, ‘ಬ್ರೋಚೇವರೇರೂರ’, ‘ಕಲ್ಕಿ’, ‘ಸ್ಕೈಲ್ಯಾಬ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳಲ್ಲಿ ಕ್ರೇಜ್ ಗಳಿಸಿದ್ದರು.

ಮುಂಬರುವ 'ಆರ್‌ಆರ್‌ಆರ್' ಮತ್ತು 'ವಿರಾಟಪರ್ವಂ' ಚಿತ್ರಗಳಲ್ಲಿಯೂ ರಾಹುಲ್ ರಾಮಕೃಷ್ಣ ನಟಿಸಿದ್ದಾರೆ. ನಟನ ಹೇಳಿಕೆ ಕುರಿತು ಜಾಲತಾಣದಲ್ಲಿ ನಿರಾಶೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಅಪ್ಪು ಅಭಿನಯದ 'ಜೇಮ್ಸ್'ಗೆ ರಾಘಣ್ಣ ಡಬ್ಬಿಂಗ್: ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.