ಬೆಂಗಳೂರು: ಕನ್ನಡ ಚಿತ್ರರಂಗ ಸಂಬಂಧ ಸಿಎಂ ಬಿಎಸ್ವೈ ಇಂದು ಸಭೆ ನಡೆಸಲಿದ್ದಾರೆ.
ಈ ಸಭೆಯಲ್ಲಿ ಸಿಎಂ ಬಿಎಸ್ವೈ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಬಗ್ಗೆ ಸುಮಾರು 30 ಸಾವಿರ ಕಾರ್ಮಿಕರು, ತಂತ್ರಜ್ಞರು, ಕಲಾವಿದರು, ನಿರ್ಮಾಪಕರು, ಪ್ರದರ್ಶಕರ ವಲಯ ಕಾದು ಕುಳಿತಿದೆ.
ಕನ್ನಡ ಸಿನಿಮಾಗಳ ವಿಚಾರಕ್ಕೆ ಬರುವುದಾರೆ ಸುಮಾರು 400 ಸಿನಿಮಾಗಳು ಸೆನ್ಸಾರ್ ಪಡೆದು ಬಿಡುಗಡೆಗೆ ಕಾದು ಕುಳಿತಿವೆ. ಅಲ್ಲದೇ 100 ಹೆಚ್ಚು ಚಿತ್ರಗಳು ಸೆನ್ಸಾರ್ ಅನುಮತಿ ಪತ್ರ ನೀಡಲು ಅರ್ಜಿ ಸಲ್ಲಿಸಿವೆ. ಲಾಕ್ ಡೌನ್ ಆಗುವುದಕ್ಕೂ ಮುಂಚೆ 60 ಚಿತ್ರಗಳು ಬಿಡುಗಡೆ ಆಗಿದ್ದವು. ಇನ್ನೂ 60 ಸಿನಿಮಗಳು ಬಿಡುಗಡೆಗೆ ಕಾದು ಕುಳಿತಿವೆ. ಸುಮಾರು 50 ಕನ್ನಡ ಸಿನಿಮಾಗಳು ವಿವಿಧ ಹಂತದಲ್ಲಿ ಚಿತ್ರೀಕರಣದಲ್ಲಿವೆ.
ಚಿತ್ರೀಕರಣಕ್ಕೆ ಅನುಮತಿ ಸಿಕ್ಕರೂ ಕೂಡ, ಚಿತ್ರ ಪ್ರದರ್ಶನ ಸಂಬಂಧ ಯಾವುದೇ ನಿರ್ಧಾರ ಹೊರ ಬೀಳುವುದು ಕಷ್ಟ ಎಂದು ಅಂದಾಜಿಸಲಾಗುತ್ತಿದೆ. ಈಗಾಗಲೇ ಕರ್ನಾಟಕ ಟೆಲಿವಿಜನ್ ಅಸೋಸಿಯೇಷನ್ ಮನವಿ ಸಲ್ಲಿಸಿದೆ . ಈ ಸಂಬಂಧ ಮೇ 11 ರಂದು ಚಿತ್ರೀಕರಣಕ್ಕೆ ಅನುಮತಿ ಕೊಡಬಹುದು ಎನ್ನಲಾಗುತ್ತಿದೆ. ಸುಮಾರು 120 ಟಿವಿ ಧಾರಾವಾಹಿಗಳ ಚಿತ್ರೀಕರಣದಿಂದ ಕಿರುತೆರೆ ಕ್ಷೇತ್ರದಲ್ಲೇ 20,000 ವ್ಯಕ್ತಿಗಳ ಜೀವನ ನಿರ್ವಹಣೆ ಅಡಗಿದೆ.