'ನಿನ್ನ ಸನಿಹಕೆ' ಟೈಟಲ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿರುವ ಚಿತ್ರ. ಡಾ. ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ನಟ ಸೂರಜ್ ಗೌಡ ನಟನೆಯ ಜೊತೆಗೆ ನಿರ್ದೇಶನ ಮಾಡುತ್ತಿರುವ ನಿನ್ನ ಸನಿಹಕೆ ಚಿತ್ರ, ಹಾಡುಗಳು ಮತ್ತು ಟೀಸರ್ನಿಂದಲೇ ಗಮನ ಸೆಳೆದಿದೆ. ಈ ಸಿನಿಮಾ ಇದೇ ಏಪ್ರಿಲ್ 16ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿತ್ತು.
ಆದರೆ, ಇಂದಿನಿಂದ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನಗಳ ಭರ್ತಿಗೆ ಮಾತ್ರ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಹೀಗಾಗಿ, ನಟ ಕಮ್ ನಿರ್ದೇಶಕ ಸೂರಜ್ ಗೌಡ, ಶೇ.50 ಪರ್ಸೆಂಟ್ ಚಿತ್ರ ಪ್ರದರ್ಶಿಸುವುದು ಬೇಡ ಎಂದು ತೀರ್ಮಾನಿಸಿದ್ದಾರೆ.
ಓದಿ : ನಾಗಿಣಿ 2 ತಂಡದಿಂದ ವಿಭಿನ್ನ ಪ್ರಯತ್ನ: ಅಭಿಮಾನಿಗಳೊಂದಿಗೆ ಆರತಕ್ಷತೆ ಶೂಟಿಂಗ್
ಯಾವಾಗ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಅನುಮತಿ ನೀಡುತ್ತೋ, ಆ ಬಳಿಕವೇ ನಮ್ಮ ಸಿನಿಮಾ ಬಿಡುಗಡೆ ಮಾಡುವುದಾಗಿ ಸೂರಜ್ ಗೌಡ ಹೇಳಿದ್ದಾರೆ.